ಆಸ್ಟ್ರೇಲಿಯಾದಲ್ಲಿ ವಿರಾಟ್ ಕೊಹ್ಲಿ ನೀಡಿದ್ದ ವಿಶೇಷ ಗಿಫ್ಟ್ ರಿವೀಲ್ ಮಾಡಿದ ನಿತೀಶ್ ರೆಡ್ಡಿ!
ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯದಲ್ಲಿ ಭಾರತದ ಯುವ ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಇನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿಯ ಶೂ ಧರಿಸಿ ಬ್ಯಾಟ್ ಮಾಡಿದ್ದೆ ಎಂದು ನಿತೀಶ್ ರೆಡ್ಡಿ ಬಹಿರಂಗಪಡಿಸಿದ್ದಾರೆ. 2025ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಯುವ ಬ್ಯಾಟ್ಸ್‌ಮನ್ ಎದುರು ನೋಡುತ್ತಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ನಿತೀಶ್ ರೆಡ್ಡಿ.

ನವದೆಹಲಿ: ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಯುವ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಭರ್ಜರಿ ಶತಕ ಸಿಡಿಸಿದ್ದರು. ಅವರು ಆಸ್ಟ್ರೇಲಿಯಾದಲ್ಲಿ ತಮ್ಮ ಮೊದಲ ಸರಣಿಯಲ್ಲಿ ಈ ಶತಕವನ್ನು ಗಳಿಸಿದ್ದರು. ಕಠಿಣ ಪರಿಸ್ಥಿತಿಯಲ್ಲಿ ಬ್ಯಾಟ್ ಮಾಡಿದ ರೀತಿ ಅವರ ಪ್ರಬುದ್ಧತೆ ಮತ್ತು ತಾಳ್ಮೆಯನ್ನು ತೋರಿಸುತ್ತದೆ. ಆ ಟೆಸ್ಟ್ ಪಂದ್ಯದಲ್ಲಿ ಭಾರತ ಸೋತರೂ ನಿತೀಶ್ ರೆಡ್ಡಿ ಅವರ ಶತಕ ಎಲ್ಲರನ್ನೂ ಆಕರ್ಷಿಸಿತ್ತು.
ನಿತೀಶ್ ಕುಮಾರ್ ರೆಡ್ಡಿ ಅವರು ವಿರಾಟ್ ಕೊಹ್ಲಿ ಶೂ ಧರಿಸಿ ಹೇಗೆ ಬ್ಯಾಟ್ ಮಾಡಿದರು ಎಂಬುದನ್ನು ಈಗ ಬಹಿರಂಗಪಡಿಸಿದ್ದಾರೆ. ಅಂದು ನಾನು ಶತಕ ಸಿಡಿಸಿದ್ದ ಇನಿಂಗ್ಸ್‌ನಲ್ಲಿ ನಾನು ನನ್ನ ಶೂಗಳನ್ನು ಧರಿಸಿರಲಿಲ್ಲ ಬದಲಿಗೆ ವಿರಾಟ್ ಕೊಹ್ಲಿಯ ಶೂ ಅನ್ನು ಧರಿಸಿದ್ದೆ ಎಂಬ ಅಂಶವನ್ನು ಅವರು ಹೇಳಿಕೊಂಡಿದ್ದಾರೆ.
IPL 2025: ಹಾರ್ದಿಕ್ ಪಾಂಡ್ಯ ಬಚಾವ್? ಹೊಸ ನಿಯಮಗಳನ್ನು ಜಾರಿಗೆ ತಂದ ಬಿಸಿಸಿಐ!
"ಲಾಕರ್ ರೂಮಿನಲ್ಲಿ ಅವರು (ಕೊಹ್ಲಿ) ಒಮ್ಮೆ ಸರ್ಫರಾಜ್ ಖಾನ್ ಅವರನ್ನು ಕೇಳಿದರು, 'ಸೈಫು, ನಿಮ್ಮ ಶೂ ಗಾತ್ರ ಎಷ್ಟು? ಮತ್ತು ಅವರು ಹೇಳಿದರು, '9'. ನಂತರ ಅವರು ನನ್ನ ಕಡೆಗೆ ತಿರುಗಿದರು ಮತ್ತು ನಾನು ಯೋಚಿಸಿದೆ, 'ಅಯ್ಯೋ ದೇವರೇ, ನಾನು ಇದನ್ನು ಸರಿಯಾಗಿ ಊಹಿಸಬೇಕು' ಏಕೆಂದರೆ ಅವು ನನ್ನ ಗಾತ್ರವಲ್ಲದಿದ್ದರೂ, ನನಗೆ ಅವರ ಶೂಗಳು ಬೇಕಾಗಿದ್ದವು. ನಾನು, '10' ಎಂದು ಹೇಳಿದೆ, ಮತ್ತು ಅವರು ಅದನ್ನು ನನಗೆ ಕೊಟ್ಟರು. ಮುಂದಿನ ಪಂದ್ಯದಲ್ಲಿ ಆ ಶೂ ಧರಿಸಿ ಶತಕ ಬಾರಿಸಿದ್ದೆ," ಎಂದು ನಿತೀಶ್ ರೆಡ್ಡಿ ಹೇಳಿಕೊಂಡಿದ್ದಾರೆ.
ನನಗೆ ವಿರಾಟ್ ಕೊಹ್ಲಿ ಬ್ಯಾಟ್ ಬೇಕಿತ್ತು
"ನಾನು ಯಾವಾಗಲೂ ವಿರಾಟ್ ಕೊಹ್ಲಿ ಬಳಿ ಬ್ಯಾಟ್ ಕೇಳಬೇಕೆಂದು ಅಂದುಕೊಂಡಿರುತ್ತೇನೆ ಆದರೆ, ಆಸ್ಟ್ರೇಲಿಯಾದಲ್ಲಿ ಅವರ ಬಳಿ ಕೇಳಲು ತುಂಬಾ ಮುಜುಗರವಾಗುತ್ತದೆ. ಒಮ್ಮೆ ಅವರು ಸಹಿ ಮಾಡಿದ ಶೂ ಅನ್ನು ನನಗೆ ಕೊಡಗೆಯಾಗಿ ನೀಡಿದರು ಹಾಗೂ ಕಾಯಿಸಿ ಎಂದು ನನಗೆ ಹೇಳಿ, ತಮ್ಮ ಕಿಟ್ ಬ್ಯಾಗ್ ತೆಗೆದು ಬ್ಯಾಟ್ ಅನ್ನು ಕೂಡ ಕೊಡುಗೆ ನೀಡಿದ್ದರು. ಈ ವೇಳೆ ನನಗೆ ತುಂಬಾ ಶಾಕ್ ಆಗಿತ್ತು ಹಾಗೂ ಬ್ಯಾಟ್‌ಗೂ ಕೂಡ ಸಹಿ ಮಾಡಿ ಕೊಡಿ ಎಂದು ಕೇಳಿದ್ದೆ," ಎಂದು ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ತಿಳಿಸಿದ್ದಾರೆ.
IPL 2025: ಆರ್‌ಸಿಬಿ vs ಕೆಕೆಆರ್ ನಡುವಣ ಪಂದ್ಯಕ್ಕೆ ಮಳೆ ಭೀತಿ! ಹವಾಮಾನ ವರದಿ ಹೇಗಿದೆ?
ಫಿಟ್‌ನೆಸ್ ಟೆಸ್ಟ್ ಪಾಸ್ ಮಾಡಿದ ವಿರಾಟ್ ಕೊಹ್ಲಿ
2025ರ ಐಪಿಎಲ್ ಟೂರ್ನಿಯಲ್ಲಿ ಆಡಲು ನಿತೀಶ್ ರೆಡ್ಡಿ ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಅವರು ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಗಾಯದ ಸಮಸ್ಯೆಯಿಂದ ಕೆಲ ಕಾಲ ತಂಡದಿಂದ ಹೊರಗುಳಿದಿದ್ದರು. ನಿತೀಶ್ ರೆಡ್ಡಿ ಕೊನೆಯ ಬಾರಿಗೆ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಟಿ20ಐ ಪಂದ್ಯವನ್ನು ಆಡಿದ್ದರು. ಹೈದರಾಬಾದ್ ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಅವರನ್ನು 6 ಕೋಟಿ ರೂ. ಗಳಿಗೆ ಉಳಿಸಿಕೊಂಡಿತ್ತು. ಅವರು 13 ಐಪಿಎಲ್ ಪಂದ್ಯಗಳಿಂದ 143 ಸ್ಟ್ರೈಕ್ ರೇಟ್‌ನಲ್ಲಿ 303 ರನ್ ಗಳಿಸಿದ್ದಾರೆ.
21ನೇ ವಯಸ್ಸಿನ ನಿತೀಶ್ ಕುಮಾರ್ ರೆಡ್ಡಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದಾದ ನಂತರ ಪರ್ತ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ ಪ್ರವಾಸದ ವೇಳೆ ನಿತೀಶ್ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನಾಲ್ಕನೇ ಟೆಸ್ಟ್‌ನಲ್ಲಿ 114 ರನ್‌ಗಳ ಮಹತ್ವದ ಇನಿಂಗ್ಸ್ ಆಡಿದ್ದರು. ಅವರ ಇನಿಂಗ್ಸ್‌ನಿಂದಾಗಿ ಟೀಮ್ ಇಂಡಿಯಾ ಕಠಿಣ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗಿತ್ತು.