Ranji Trophy: ದೆಹಲಿ ವಿರುದ್ದದ ಪಂದ್ಯದಲ್ಲಿ ಮಾಸ್ಕ್ ಹಾಕಿಕೊಂಡು ಆಡಿದ ಮುಂಬೈ ಆಟಗಾರರು!
ದೆಹಲಿ ವಿರುದ್ಧದ 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಪಂದ್ಯದ ವೇಳೆ ಮುಂಬೈ ತಂಡದ ಆಟಗಾರರು ಮುಖಕ್ಕೆ ಮಾಸ್ಕ್‌ಗಳನ್ನು ಧರಿಸಿ ಆಡಿದರು. ಮೈದಾನದ ಸನಿಹ ಕಟ್ಟಡದ ಕೆಲಸ ನಡೆಯುತ್ತಿತ್ತು, ಹಾಗಾಗಿ ಅಲ್ಲಿಂದ ಧೂಳು ಮೈದಾನಕ್ಕೂಆವರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಆಟಗಾರರು ಫೇಸ್ ಮಾಸ್ಕ್‌ಗಳ ಮೊರೆ ಹೋದರು.
ಮಾಸ್ಕ್ ಧರಿಸಿ ರಣಜಿ ಪಂದ್ಯವನ್ನು ಆಡಿದ ಮುಂಬೈ ಆಟಗಾರರು. -
ಮುಂಬೈ: ಗುರುವಾರ ಮುಂಬೈನ ಬಿಕೆಸಿಯಲ್ಲಿರುವ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ದೆಹಲಿ (Delhi) ವಿರುದ್ಧದ ರಣಜಿ ಟ್ರೋಫಿ (Ranji Trophy 2025-26) ಗ್ರೂಪ್ ʻಡಿʼ ಪಂದ್ಯದ ವೇಳೆ ಮುಂಬೈ ಆಟಗಾರರು ಮುಖಕ್ಕೆ ಮಾಸ್ಕ್‌ಗಳನ್ನು ಧರಿಸಿ ಆಡಿದರು. ಏಕೆಂದರೆ. ಈ ಮೈದಾನದ ಸಮೀಪ ಕಟ್ಟಡ ನಿರ್ಮಾಣದ ಕೆಲಸಗಳು ಸಾಗುತ್ತಿದ್ದ ಕಾರಣ, ಧೂಳು ಅಂಗಣದುದ್ದಕ್ಕೂ ದಟ್ಟವಾಗಿ ಆವರಿಸಿತ್ತು. ಈ ಹಿನ್ನೆಲೆಯಲ್ಲಿ ಮುಂಬೈ (Mumbai) ತಂಡದ ಹಲವು ಆಟಗಾರರು ಫೇಸ್ ಮಾಸ್ಕ್‌ಗಳ ಮೊರೆ ಹೋದರು.
ಎಂಸಿಎ ಬಿಕೆಸಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ಸೆಷನ್‌ನಲ್ಲಿ ಭಾರತ ಮತ್ತು ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್, ಅವರ ಕಿರಿಯ ಸಹೋದರ ಮುಶೀರ್ ಖಾನ್ ಮತ್ತು ಸ್ಪಿನ್ನರ್ ಹಿಮಾಂಶು ಸಿಂಗ್ ಮಾಸ್ಕ್ ಧರಿಸಿರುವುದು ಕಂಡುಬಂದಿತು, ಏಕೆಂದರೆ ಸ್ಥಳದ ಪಕ್ಕದಲ್ಲಿರುವ ನಿರ್ಮಾಣ ಸ್ಥಳದಿಂದ ಬಂದ ಧೂಳು ಗಾಳಿಯನ್ನು ಗೋಚರವಾಗುವಂತೆ ಮಾಡಿತು. ಆ ದಿನ ವಾಯು ಗುಣಮಟ್ಟದ ಸೂಚ್ಯಂಕವು 160 ರ ಆಸುಪಾಸಿನಲ್ಲಿತ್ತು ಹಾಗೂ ಅನಾರೋಗ್ಯಕರವಾಗಿತ್ತು.
ಶ್ರೇಯಸ್ ಅಯ್ಯರ್‌ಗೆ ಏಕೆ ಅವಕಾಶ ನೀಡಿಲ್ಲ? ಗೌತಮ್ ಗಂಭೀರ್‌ಗೆ ಆಕಾಶ್ ಚೋಪ್ರಾ ಪ್ರಶ್ನೆ!
ನಗರದಲ್ಲಿ ಮಾಲಿನ್ಯವು ಪದೇ-ಪದೆ ಕಾಡುತ್ತಿರುವ ಕಳವಳಕಾರಿ ಸಂಗತಿಯಾಗಿದ್ದರೂ, ಸ್ಪರ್ಧಾತ್ಮಕ ಕ್ರಿಕೆಟ್ ಸಮಯದಲ್ಲಿ ಆಟಗಾರರು ಮುಖವಾಡಗಳನ್ನು ಧರಿಸುವುದು ಅಪರೂಪ. ಆದಾಗ್ಯೂ, ಗುರುವಾರ ಮಧ್ಯಾಹ್ನ ಮೈದಾನದ ಪಕ್ಕದಲ್ಲಿ ನಿರಂತರ ನಿರ್ಮಾಣ ಕಾರ್ಯಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವಂತೆ ಕಂಡುಬಂದಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಪ್ರೇರೇಪಿಸಿತು.
ಮುಂಬೈ ಆಟಗಾರರು ಕನಿಷ್ಠ ಅರ್ಧಗಂಟೆ ಕಾಲ ಮಾಸ್ಕ್‌ನಲ್ಲಿಯೇ ಆಡಿದ್ದರು. ಧೂಳು ನಿವಾರಣೆಯಾದ ಬಳಿಕ ಮಾಸ್ಕ್ ಅನ್ನು ತೆಗೆದು ಅವರು ಆಟವನ್ನು ಮುಂದುವರಿಸಿದರು.
The pollution and nearby construction has ensured Mumbai players wear mask while playing #RanjiTrophy game. pic.twitter.com/ZM5F6HbLLi
— Devendra Pandey (@pdevendra) January 29, 2026
"ಇದರ ಬಗ್ಗೆ ಯಾವುದೇ ತಮಾಷೆ ಇರಲಿಲ್ಲ," ಎಂದು ಹೇಳಿದ ಮುಂಬೈ ವೇಗಿ ಮೋಹಿತ್ ಆವಸ್ಥಿ, "ಆದರೆ ಇಲ್ಲಿ ಹೊಸ ಕಟ್ಟದ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಮತ್ತು ಇದರಿಂದಾಗಿ ವಾಯು ಮಾಲಿನ್ಯ ಉಂಟಾಗಿತ್ತು ಮತ್ತು ಆಟಗಾರರು ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಿದ್ದರು, ಆದ್ದರಿಂದ ಅವರು ಮಾಸ್ಕ್‌ಗಳನ್ನು ಹಾಕಿಕೊಂಡರು," ಎಂದು ಹೇಳಿದ್ದಾರೆ.
221 ರನ್‌ಗಳಿಗೆ ದೆಹಲಿಯನ್ನು ಕಟ್ಟಿ ಹಾಕಿದ ಮುಂಬೈ
ಸವಾಲಿನ ಕಂಡೀಷನ್ಸ್ ಇದ್ದರೂ ಮುಂಬೈ ತಂಡ ತಂಡ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನವನ್ನು ತೋರಿತು. ಇದರ ಫಲವಾಗಿ ಎದುರಾಳಿ ದೆಹಲಿ ತಂಡವನ್ನು ಪ್ರಥಮ ಇನಿಂಗ್ಸ್‌ನಲ್ಲಿ 221 ರನ್‌ಗಳಿಗೆ ಕಟ್ಟಿ ಹಾಕಿತು. ದೆಹಲಿ ಪರ ಉತ್ತಮ ಬ್ಯಾಟ್ ಮಾಡಿದ ಸನತ್ ಸಂಗ್ವನ್ ಅವರು 118 ರನ್‌ಗಳನ್ನು ಕಲೆ ಹಾಕಿದರು. ಈ ಸೀಸನ್‌ನಲ್ಲಿ ಇವರದು ಇದು ಮೂರನೇ ಶತಕವಾಗಿದೆ.