ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಕೋಪದಿಂದ ವಿದಾಯ ಹೇಳುವುದು ಸರಿಯಿಲ್ಲʼ: ವಿರಾಟ್‌ ಕೊಹ್ಲಿ ದೊಡ್ಡ ತಪ್ಪು ಮಾಡಿದ್ದಾರೆಂದ ಕಪಿಲ್‌ ದೇವ್‌!

ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿಯ ಟೆಸ್ಟ್‌ ಕ್ರಿಕೆಟ್‌ ನಿವೃತ್ತಿಯ ಬಗ್ಗೆ ಮಾಜಿ ನಾಯಕ ಕಪಿಲ್‌ ದೇವ್‌ ಪ್ರತಿಕ್ರಿಯೆ ನೀಡಿದ್ದಾರೆ. 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ಕೊಹ್ಲಿ ದೀರ್ಘಾವಧಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. ಇದೀಗ ಅವರು ಟೆಸ್ಟ್‌ಗೆ ಬಹುಬೇಗ ನಿವೃತ್ತಿ ಘೋಷಿಸಿದ ಬಗ್ಗೆ ವಿಷಾದ ಪಡುತ್ತಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೆಸ್ಟ್‌ಗೆ ನಿವೃತ್ತಿ ಘೋಷಿಸಿ ಕೊಹ್ಲಿ ತಪ್ಪು ಮಾಡಿದ್ದಾರೆ: ಕಪಿಲ್‌ ದೇವ್‌

ವಿರಾಟ್‌ ಕೊಹ್ಲಿ ತಪ್ಪು ಮಾಡಿದ್ದಾರೆಂದ ಕಪಿಲ್‌ ದೇವ್‌. -

Profile
Ramesh Kote Nov 16, 2026 6:57 PM

ನವದೆಹಲಿ: ಭಾರತೀಯ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli) ತಮ್ಮ ಟೆಸ್ಟ್‌ ವೃತ್ತಿ ಜೀವನಕ್ಕೆ ಬಹುಬೇಗ ನಿವೃತ್ತಿ ಘೋಷಿಸಿದ್ದಾರೆಂದು ದಿಗ್ಗಜ ನಾಯಕ ಕಪಿಲ್‌ ದೇವ್‌ (Kapil Dev) ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಬಳಿಕ ಕಳೆದ ವರ್ಷ ಮೇ 12ರಂದು ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ಅವರು ಕ್ರಿಕೆಟ್‌ ಜಗತ್ತಿಗೆ ಅಚ್ಚರಿ ಮೂಡಿಸಿದ್ದರು.

2024ರ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ವಿರಾಟ್‌ ಕೊಹ್ಲಿ ಟಿ20ಐ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2025ರಲ್ಲಿ ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಕೊಹ್ಲಿ ಇದೀಗ 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಮುಂದುವರಿದಿದ್ದಾರೆ. ಟೆಸ್ಟ್‌ನಿಂದ ನಿರ್ಗಮಿಸಿದ ಬಳಿಕ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 4 ಶತಕಗಳು ಹಾಗೂ 6 ಅರ್ಧಶತಕಗಳನ್ನು ಬಾರಿಸಿದ್ದಾರೆ. ಕೊಹ್ಲಿಯ ಫಿಟ್‌ನೆಸ್‌ ಅನ್ನು ಉಲ್ಲೇಖಿಸಿದ ಕಪಿಲ್‌ ದೇವ್‌, ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಅವರು ಖಂಡಿತವಾಗಿಯೂ ವಿಷಾದಪಡುತ್ತಿದ್ದಾರೆಂದು ಮಾಜಿ ನಾಯಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್‌ ಕೊಹ್ಲಿ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 30 ಶತಕಗಳೊಂದಿಗೆ 9,230 ರನ್‌ಗಳನ್ನು ದಾಖಲಿಸಿದ್ದಾರೆ.

IND vs NZ: ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ದೊಡ್ಡ ಗಣೇಶ್‌!

"ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ದೊಡ್ಡ ತಪ್ಪನ್ನು ಮಾಡಿದ್ದಾರೆ. ಅವರು ಟೆಸ್ಟ್‌ಗೆ ವಿದಾಯ ಹೇಳಿದ್ದಾರೆ. 10 ವರ್ಷಗಳ ಬಳಿಕ ಅವರು ತೆಗೆದುಕೊಂಡ ಈ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸುತ್ತಿದ್ದಾರೆ. ಅವರು ನಿವೃತ್ತಿ ಘೋಷಿಸಬಾರದಿತ್ತು. ಅವರ ಫಿಟ್‌ನೆಸ್‌ ಅಗ್ರ ದರ್ಜೆಯಲ್ಲಿದ್ದು, ಇತರೆ ಆಟಗಾರರಿಗಿಂತ ಉತ್ತಮವಾಗಿದ್ದಾರೆ," ಎಂದು ಕಪಿಲ್‌ ದೇವ್‌ ಮಿಡ್‌ ಡೇ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಮೋಹಿಂದರ್‌ ಅಮರನಾಥ್‌ರನ್ನು ಉದಾಹರಣೆ ತೆಗೆದುಕೊಂಡ ಕಪಿಲ್‌ ದೇವ್‌

ಇದೇ ವೇಳೆ ಕಪಿಲ್‌ ದೇವ್‌, ತಮ್ಮ ಮಾಜಿ ಸಹ ಆಟಗಾರ ಮೋಹಿಂದರ್‌ ಅಮರನಾಥ್‌ ಅವರನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ಅವರನ್ನು ತಂಡದಿಂದ ಸಾಕಷ್ಟು ತೆಗೆಯಲಾಗಿತ್ತು, ಆದರೂ ಅವರು ತಂಡಕ್ಕೆ ಕಮ್‌ಬ್ಯಾಕ್‌ ಮಾಡಿ ಬೇರೆಯವರ ಅಭಿಪ್ರಾಯವನ್ನು ಸುಳ್ಳು ಮಾಡಿದ್ದರು.

"25ರ ವಯಸ್ಸಿನ ಕ್ರಿಕೆಟಿಗರಿಗೆ ವಿರಾಟ್‌ ಕೊಹ್ಲಿ ಸವಾಲು ನೀಡಬಲ್ಲರು. ಕೋಪಗೊಂಡು ನಿವೃತ್ತಿ ಪಡೆಯುವುದು ಸರಿಯಲ್ಲ. ಮೋಹಿಂದರ್‌ ಅಮರನಾಥ್‌ ಅವರ ರೀತಿ ಇರಬೇಕು. ಅವರನ್ನು ಸಾಕಷ್ಟು ಬಾರಿ ತಂಡದಿಂದ ಕೈ ಬಿಡಲಾಗಿತ್ತು ಆದರೆ, ಅವರು ಕಮ್‌ಬ್ಯಾಕ್‌ ಮಾಡಿ, ಇತರರ ಹೇಳಿಕೆಗಳನ್ನು ಸುಳ್ಳು ಎಂದು ಸಾಬೀತುಪಡಿಸಿದ್ದರು," ಎಂದು ಮಾಜಿ ನಾಯಕ ತಿಳಿಸಿದ್ದಾರೆ.

IND vs NZ: ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ದೊಡ್ಡ ಗಣೇಶ್‌!

ಏಕದಿನ ವಿಶ್ವಕಪ್‌ ಟೂರ್ನಿ ಮೇಲೆ ವಿರಾಟ್‌ ಕೊಹ್ಲಿ ಕಣ್ಣು

ವಿರಾಟ್‌ ಕೊಹ್ಲಿ ಅವರು ಟಸ್ಟ್‌ ಹಾಗೂ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಇದೀಗ 50 ಓವರ್‌ಗಳಲ್ಲಿ ಮಾತ್ರ ಆಡುತ್ತಿದ್ದಾರೆ. ಆ ಮೂಲಕ 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಕೊನೆಯ ಬಾರಿ ಪ್ರತಿನಿಧಿಸಲು ಎದುರು ನೋಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಕಣಕ್ಕೆ ಇಳಿಯಲಿದ್ದಾರೆ.