ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʼಗನ್ ಸೆಲೆಬ್ರೇಷನ್ ಬಗ್ಗೆ ಏನಾದರೂ ತಿಳಿದುಕೊಳ್ಳಿ, ಐ ಡೋಂಟ್‌ ಕೇರ್‌ ಎಂದ ಸಾಹಿಬ್‌ಜಾದಾ ಫರ್ಹಾನ್!

2025ರ ಏಷ್ಯಾ ಕಪ್‌ ಟೂರ್ನಿಯ ಸೂಪರ್-4ರ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕ ಸಿಡಿಸಿ ಗನ್‌ ತೋರಿಸುವ ರೀತಿ ಸಂಭ್ರಮಿಸಿದ್ದರು. ಇದು ವಿವಾದಕ್ಕೆ ಗುರಿಯಾಗಿತ್ತು. ಆದರೆ ಇದೀಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫರ್ಹಾನ್ ನನ್ನ ಆಲೋಚನೆಗೆ ಬಂದದ್ದನ್ನು ನಾನು ಮಾಡಿದ್ದೇನೆ. ಜನ ಅದನ್ನು ಹೇಗೆ ಬೇಕಾದರೂ ಸ್ವೀಕರಿಸಲಿ ನಾನು ಅದರ ಬಗ್ಗೆ ಗಮನ ಕೊಡುವುದಿಲ್ಲ ಎಂದಿದ್ದಾರೆ.

ಗನ್‌ ಸೆಲೆಬ್ರೇಷನ್‌ ಬಗ್ಗೆ ಸಾಹಿಬ್‌ಜಾದ ಫರ್ಹಾನ್‌ ಸ್ಪಷ್ಟನೆ!

IND vs PAK: ಗನ್‌ ಸೆಲೆಬ್ರೇಷನ್‌ ಬಗ್ಗೆ ಸಾಹಿಬ್‌ಜಾದ ಫರ್ಹಾನ್‌ ಸ್ಪಷ್ಟನೆ! -

Profile Ramesh Kote Sep 22, 2025 7:39 PM

ದುಬೈ: ಪ್ರಸ್ತುತ 2025ರ ಏಷ್ಯಾ ಕಪ್ (Asia Cup 2025) ಟೂರ್ನಿಯಲ್ಲಿ ಭಾರತ ತಂಡದ ಗೆಲುವಿನ ನಾಗಲೋಟ ಮುಂದುವರಿದಿದೆ. ಈಗಾಗಲೇ ಭಾರತ ತಂಡದ ಎದುರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ ಎರಡು ಬಾರಿ ಹೀನಾಯ ಸೋಲು ಕಂಡಿದೆ. ದುಬೈನಲ್ಲಿ ನಡೆದಿದ್ದ ಸೂಪರ್-4 ಹಂತದ ಪಂದ್ಯದಲ್ಲಿ (IND vs PAK) ಟೀಮ್ ಇಂಡಿಯಾ 6 ವಿಕೆಟ್ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಎರಡನೇ ಬಾರಿ ಮಣಿಸಿತು. ಇನ್ನು ಪಂದ್ಯ ನಡೆಯುವ ವೇಳೆ ಪಾಕಿಸ್ತಾನ ತಂಡದ ಆರಂಭಿಕ ಬ್ಯಾಟರ್ ಸಾಹಿಬ್‌ಜಾದಾ ಫರ್ಹಾನ್ (Sahibzada Farhan) ಅರ್ಧಶತಕ ಸಿಡಿಸಿದ ಬಳಿಕ ಬ್ಯಾಟ್ ಹಿಡಿದು ಪೆವಿಲಿಯನ್ ಕಡೆ ಗನ್ ಚಿನ್ಹೆ ತೋರಿಸಿ ಸಂಭ್ರಮಿಸಿದ್ದರು.

ಅಕ್ಷರ್ ಪಟೇಲ್ ಎಸೆದ ಹತ್ತನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಈ ವೇಳೆ ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದರು. ಇದು ಎದುರಾಳಿ ತಂಡಕ್ಕೆ ಪ್ರಚೋದನಕಾರಿಯಾಗಿದೆ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು. ಹಾಗಾಗಿ ಈ ಘಟನೆಯಿಂದ ಟೀಮ್ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಫರ್ಹಾನ್ ಕೊನೆಗೂ ಮೌನ ಮುರಿದಿದ್ದಾರೆ.

IND vs PAK: ʻ7ನೇ ಡಿವಿಷನ್‌ ತಂಡʼ-ಪಾಕಿಸ್ತಾನವನ್ನು ಟೀಕಿಸಿದ ಕೆ ಶ್ರೀಕಾಂತ್‌!

ಶ್ರೀಲಂಕಾ ವಿರುದ್ಧದ ಪಂದ್ಯದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಫರ್ಹಾನ್, "ನೀವು ಸಿಕ್ಸರ್‌ಗಳ ಬಗ್ಗೆ ಮಾತನಾಡಿದರೆ, ಭವಿಷ್ಯದಲ್ಲಿ ನೀವು ಅದನ್ನು (ಬಹಳಷ್ಟು) ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ ಮತ್ತು ಅದು (ಆಚರಣೆ) ಆ ಸಮಯದಲ್ಲಿ ಕೇವಲ ಒಂದು ಕ್ಷಣವಾಗಿತ್ತು. 50 ರನ್ ಗಳಿಸಿದ ನಂತರ ನಾನು ಹೆಚ್ಚು ಆಚರಣೆಗಳನ್ನು ಮಾಡುವುದಿಲ್ಲ. ಆದರೆ, ಇಂದು ಆಚರಣೆಯನ್ನು ಮಾಡೋಣ ಎಂದು ನನಗೆ ಇದ್ದಕ್ಕಿದ್ದಂತೆ ಮನಸ್ಸಿಗೆ ಬಂದಿತು. ನಾನು ಅದನ್ನು ಮಾಡಿದೆ. ಜನರು ಅದನ್ನು ಹೇಗೆ ತೆಗೆದುಕೊಳ್ಳುತ್ತಾರೆಂದು ನನಗೆ ತಿಳಿದಿಲ್ಲ. ನನಗೆ ಅದರ ಬಗ್ಗೆ ಕಾಳಜಿ ಇಲ್ಲ ಮತ್ತು ಉಳಿದವು, ನಿಮಗೆ ತಿಳಿದಿದೆ. ನೀವು ಎಲ್ಲಿ ಆಡುತ್ತೀರೋ ಅಲ್ಲಿ ಆಕ್ರಮಣಕಾರಿ ಕ್ರಿಕೆಟ್ ಆಡಬೇಕು. ಅದು ಭಾರತ ಎಂದು ಅರ್ಥವಲ್ಲ. ನಾವು ಇಂದು ಆಡಿದಂತೆ ನೀವು ಪ್ರತಿಯೊಂದು ತಂಡದ ವಿರುದ್ಧವೂ ಆಕ್ರಮಣಕಾರಿ ಕ್ರಿಕೆಟ್ ಆಡಬೇಕು,” ಎಂದು ಸ್ಪಷ್ಟನೆ ನೀಡಿದ್ದಾರೆ.

IND vs PAK: ʻಆಂಡಿ ಪೈಕ್ರಾಫ್ಟ್‌ ಸ್ಕೂಲ್‌ ಟೀಚರ್‌ ಅಲ್ಲʼ-ಪಾಕಿಸ್ತಾನವನ್ನು ಟೀಕಿಸಿದ ಆರ್‌ ಅಶ್ವಿನ್‌!

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತನ್ನ ಪಾಲಿನ 20 ಓವರ್‌ಗಳಲ್ಲಿ 171 ರನ್‌ಗಳನ್ನಷ್ಟೇ ಕಲೆಹಾಕಲು ಶಕ್ತವಾಯಿತು. ಈ ಮೊತ್ತದಲ್ಲಿ ಫರ್ಹಾನ್ 45 ಎಸೆತಗಳನ್ನು ಎದುರಿಸಿ 58 ರನ್ ಕಲೆಹಾಕಿದ್ದರು. ಆದರೆ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

Sahibzada Farhan: ಉಗ್ರರಂತೆ ಸಂಭ್ರಮಿಸಿದ ಪಾಕ್‌ ಬ್ಯಾಟರ್; ವಿಡಿಯೊ ವೈರಲ್‌

ಪಾಕ್ ಆಟಗಾರರು ಭಾರತದ ವಿರುದ್ಧ ಈ ರೀತಿಯ ವರ್ತನೆಗಳನ್ನು ತೋರುತ್ತಿರುವುದು ಇದೇ ಮೊದಲೆನು ಅಲ್ಲ. ಈ ಹಿಂದೆ ಅನೇಕ ಬಾರಿ ಪಂದ್ಯದ ವೇಳೆ ಈ ರೀತಿಯ ಸನ್ನೆಗಳಿಂದ ವಿವಾದಕ್ಕೆ ಗುರಿಯಾಗಿದ್ದರು. ಮುಖ್ಯವಾಗಿ ವಿರಾಟ್ ಕೊಹ್ಲಿ ಘೋಷಣೆಗಳಿಗೆ ಫೈಟರ್ ಜೆಟ್ ಸನ್ನೆಯೊಂದಿಗೆ ಪ್ರತಿಕ್ರಿಯಿಸುವ ಮೂಲಕ ಹ್ಯಾರಿಸ್ ರೌಫ್ ಕೂಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದರು.