IPL 2025: ಚೆನ್ನೈ ಸೂಪರ್ ಕಿಂಗ್ಸ್‌ನ ಹ್ಯಾಟ್ರಿಕ್ ಸೋಲಿಗೆ ಕಾರಣ ತಿಳಿಸಿದ ಋತುರಾಜ್ ಗಾಯಕ್ವಾಡ್!
Ruturaj Gaikwad on CSK Hat-trick loses: ಶನಿವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡ 25 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸಿಎಸ್‌ಕೆ ಹ್ಯಾಟ್ರಿಕ್ ಸೋಲು ಅನುಭವಿಸಿತು. ಪಂದ್ಯದ ಬಳಿಕ ತಮ್ಮ ತಂಡದ ವೈಫಲ್ಯಕ್ಕೆ ಕಾರಣವೇನೆಂದು ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಬಹಿರಂಗಪಡಿಸಿದ್ದಾರೆ.

ಋತುರಾಜ್ ಗಾಯಕ್ವಾಡ್

ಚೆನ್ನೈ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ ಹ್ಯಾಟ್ರಿಕ್ ಸೋಲು ಅನುಭವಿಸಲು ಕಾರಣವೇನೆಂದು ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ (Ruturaj Gaikwad) ಬಹಿರಂಗಪಡಿಸಿದ್ದಾರೆ. ಕಳೆದ ಮೂರು ಪಂದ್ಯಗಳ ಪವರ್‌ಪ್ಲೇನಲ್ಲಿ ನಮ್ಮ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿದೆ. ಈ ಕಾರಣದಿಂದಲೇ ನಾವು ಹಿನ್ನಡೆ ಅನುಭವಿಸಿದ್ದೇವೆಂದು ಗಾಯಕ್ವಾಡ್ ಬಹಿರಂಗಪಡಿಸಿದ್ದಾರೆ.
ಶನಿವಾರ ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ 25 ರನ್‌ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 183 ರನ್‌ಗಳನ್ನು ಕಲೆ ಹಾಕಿತು. ಬಳಿಕ 184 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸಿಎಸ್‌ಕೆ ತನ್ನ ಪಾಲಿನ 20 ಓವರ್‌ಗಳನ್ನು ಮುಗಿಸಿದರೂ 158 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.
ತವರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಹ್ಯಾಟ್ರಿಕ್ ಸೋಲಿನ ಮುಖಭಂಗ, ಡೆಲ್ಲಿಗೆ ಸತತ ಮೂರನೇ ಜಯ!
ಪಂದ್ಯದ ಬಳಿಕ ಮಾತನಾಡಿದ ಋತುರಾಜ್ ಗಾಯಕ್ವಾಡ್, "ಕಳೆದ ಮೂರು ಪಂದ್ಯಗಳಲ್ಲಿ ನಾವು ವೈಫಲ್ಯ ಅನುಭವಿಸಿದ್ದೇವೆ ಹಾಗೂ ಶನಿವಾರ ಕೂಡ ನಾವು ಚೆನ್ನಾಗಿ ಆಡಿಲ್ಲ. ಸಂಗತಿಗಳನ್ನು ನಮ್ಮ ಹಾದಿಯಲ್ಲಿ ಸಾಗುತ್ತಿಲ್ಲ. ಬ್ಯಾಟಿಂಗ್ ವಿಭಾಗವಾಗಲಿ ಅಥವಾ ಬೌಲಿಂಗ್ ವಿಭಾಗವಾಗಲಿ ಪವರ್‌ಪ್ಲೇ ಇಲ್ಲಿ ಅತ್ಯಂತ ಮುಖ್ಯವಾಗಿರುತ್ತದೆ. ಪವರ್‌ನಲ್ಲಿ ನಾವು 15 ರಿಂದ 20 ರನ್‌ಗಳನ್ನು ನೀಡುತ್ತಿದ್ದೇವೆ ಹಾಗೂ ಹೆಚ್ಚಿನ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ಪವರ್‌ಪ್ಲೇನಲ್ಲಿ ಬೌಲಿಂಗ್ ಅಥವಾ ಬ್ಯಾಟಿಂಗ್ ಮಾಡುವವರ ಬಗ್ಗೆ ನಾವು ಸ್ವಲ್ಪ ಹೆಚ್ಚು ಕಾಳಜಿ ವಹಿಸುತ್ತೇವೆ ಮತ್ತು ಅತಿಯಾದ ನಿರ್ಬಂಧವನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ಪವರ್‌ಪ್ಲೇನಲ್ಲಿ ನಾವು ಇದೀಗ ಮತ್ತೊಂದು ವಿಕೆಟ್ ಅನ್ನು ಕಳೆದುಕೊಂಡಿದ್ದೇವೆ," ಎಂದು ತಿಳಿಸಿದ್ದಾರೆ.
Hat-Trick of Wins ✅
— IndianPremierLeague (@IPL) April 5, 2025
Memorable win at Chepauk after 1⃣5⃣ years ✅@DelhiCapitals cap off a commanding 2⃣5⃣-run victory over #CSK 🥳
Scorecard ▶ https://t.co/5jtlxucq9j #TATAIPL | #CSKvDC pic.twitter.com/D9oWDI4hN2
ಪ್ರತಿಯೊಬ್ಬರೂ ಪರಿಹಾರ ಕಂಡುಕೊಳ್ಳಬೇಕು
ಮೈದಾನದಲ್ಲಿ ತಮ್ಮ ತಂಡ ಯಾವಾಗಲೂ ಹಿನ್ನಡೆಯಲ್ಲಿದೆ ಎಂದು ಭಾವಿಸುವುದರಿಂದ ಪ್ರತಿಯೊಬ್ಬರೂ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಋತುರಾಜ್ ಹೇಳಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ ಡಿಸಿ ಅವರ ಬಿಗಿಯಾದ ಬೌಲಿಂಗ್ ಅನ್ನು ಸಿಎಸ್‌ಕೆ ನಾಯಕ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
"ಪವರ್‌ಪ್ಲೇನಲ್ಲಿ ಬ್ಯಾಟ್ ಮಾಡುವಾಗ ನಾವು ಇನ್ನೂ ಸಕಾರಾತ್ಮಕವಾಗಿರಬೇಕು. ಮೈದಾನದಲ್ಲಿಯೂ ಸಹ, ಅದು ಹಿನ್ನಡೆಯಲ್ಲಿರುವುದರ ಬಗ್ಗೆ ಮತ್ತು ಕಾಲ್ಬೆರಳುಗಳ ಮೇಲೆ ಇರುವುದರ ಬಗ್ಗೆ ಅಲ್ಲ. ಎಲ್ಲರೂ ಒಗ್ಗೂಡಿ ಪರಿಹಾರವನ್ನು ಕಂಡುಕೊಳ್ಳಬೇಕು. ನಾವು ಬೌಲ್ ಮಾಡುತ್ತಿರಲಿ ಅಥವಾ ಬ್ಯಾಟ್ ಮಾಡುತ್ತಿರಲಿ, ಮೈದಾನಕ್ಕೆ ಬಂದಾಗಲೆಲ್ಲಾ ನಾವು ಸಕಾರಾತ್ಮಕವಾಗಿ ಬರಬೇಕು," ಎಂದು ತಿಳಿಸಿದ್ದಾರೆ.
IPL 2025: ಎಂಎಸ್ ಧೋನಿ ಐಪಿಎಲ್ ವೃತ್ತಿ ಜೀವನಕ್ಕೆ ವಿದಾಯ ಹೇಳುವ ಸಮಯ ಬಂದಾಯ್ತು!
"ಪವರ್‌ಪ್ಲೇ ನಂತರ, ನಾವು ಕ್ಯಾಚ್-ಅಪ್ ಆಟವನ್ನು ಆಡುತ್ತಿದ್ದೆವು. ಅದನ್ನು ಸಾಧ್ಯವಾದಷ್ಟು ಆಳವಾಗಿ ತೆಗೆದುಕೊಳ್ಳಬೇಕೆಂಬುದು ಯೋಜನೆಯಾಗಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ನಿಜವಾಗಿಯೂ ಚೆನ್ನಾಗಿ ಬೌಲ್ ಮಾಡಿದೆ ಮತ್ತು ಅವರು ಪರಿಸ್ಥಿತಿಗಳನ್ನು ಚೆನ್ನಾಗಿ ಬಳಸಿಕೊಂಡರು ಮತ್ತು ನಮಗೆ ಆವೇಗವನ್ನು ಪಡೆಯಲು ಸಾಧ್ಯವಾಗಲಿಲ್ಲ. ಶಿವಂ ದುಬೆ ಬ್ಯಾಟ್ ಮಾಡುವಾಗಲೂ, ನಾವು ಆವೇಗವನ್ನು ಪಡೆಯಲು ಪ್ರಯತ್ನಿಸುತ್ತಿದ್ದೆವು ಆದರೆ ನಮಗೆ ಅದನ್ನು ಪಡೆಯಲು ಸಾಧ್ಯವಾಗಲಿಲ್ಲ," ಎಂದು ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಹೇಳಿದ್ದಾರೆ.