ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಆರ್‌ಸಿಬಿ ಇನ್‌, ಸಿಎಸ್‌ಕೆ ಔಟ್! ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ 4 ತಂಡಗಳನ್ನು ಆರಿಸಿದ ಆಕಾಶ್‌ ಚೋಪ್ರಾ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 19ನೇ ಆವೃತ್ತಿಯ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಇದೆ. ಮಾರ್ಚ್‌ 28 ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಕಾದಾಟ ನಡೆಸುವ ಮೂಲಕ ಟೂರ್ನಿ ಆರಂಭವಾಗಲಿದೆ. ಇದಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ, ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ ನಾಲ್ಕು ತಂಡಗಳನ್ನು ಆರಿಸಿದ್ದಾರೆ.

IPL 2026: ಪ್ಲೇಆಫ್ಸ್‌ಗೇರಬಲ್ಲ 4 ತಂಡಗಳನ್ನು ಆರಿಸಿದ ಆಕಾಶ್‌ ಚೋಪ್ರಾ!

ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ 4 ತಂಡಗಳನ್ನು ಆರಿಸಿದ ಆಕಾಶ್‌ ಚೋಪ್ರಾ. -

Profile
Ramesh Kote Mar 27, 2026 10:07 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (IPL 2026) 19ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ (ಮಾರ್ಚ್‌ 28) ಶನಿವಾರ ಇಲ್ಲಿನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ತಂಡಗಳು (RCB vs SRH) ಕಾದಾಟ ನಡೆಸಲಿವೆ. ಆ ಮೂಲಕ 2026ರ ಟೂರ್ನಿಯ ಅಭಿಯಾನ ಶುರುವಾಗಲಿದೆ. ಅಂದ ಹಾಗೆ ಈ ಬಾರಿ ಯಾವ ತಂಡಗಳ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿವೆ ಹಾಗೂ ಯಾವ ತಂಡ ಚಾಂಪಿಯನ್‌ ಆಗಲಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗೆ ಇದೀಗ ಭಾರತದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ (Aakash Chopra) ಸೇರ್ಪಡೆಯಾಗಿದ್ದಾರೆ. ಅವರು ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ ನಾಲ್ಕು ತಂಡಗಳನ್ನು ಆರಿಸಿದ್ದಾರೆ, ಆದರೆ ಐದು ಬಾರಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಕೈ ಬಿಟ್ಟಿದ್ದಾರೆ.

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಕಾಶ್‌ ಚೋಪ್ರಾ, "ಇದು ಕಷ್ಟದ ಪ್ರಶ್ನೆ. ಯಾರಿಗೂ ಖಚಿತವಾಗಿ ತಿಳಿದಿಲ್ಲ, ಏಕೆಂದರೆ ಫಾರ್ಮ್, ಫಿಟ್‌ನೆಸ್, ಪಿಚ್ ಪರಿಸ್ಥಿತಿಗಳು ಮತ್ತು ಅದೃಷ್ಟ ಸೇರಿದಂತೆ ಅನೇಕ ಅಂಶಗಳು ಇದರಲ್ಲಿ ಪ್ರಭಾವ ಬೀರುತ್ತವೆ. ಆದರೆ ಕಾಗದದ ಮೇಲೆ ನೋಡಿದರೆ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ನನಗೆ ತುಂಬಾ ಬಲಿಷ್ಠವಾಗಿ ಕಾಣಿಸುತ್ತವೆ,” ಎಂದು ಆಕಾಶ್‌ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.

IPL 2026: ಎಸ್‌ಆರ್‌ಎಚ್‌ ವಿರುದ್ಧ ಜಾಶ್‌ ಹೇಝಲ್‌ವುಡ್‌ ಆಡ್ತಾರಾ? ಆಂಡಿ ಫ್ಲವರ್‌ ಸ್ಪಷ್ಟನೆ!

“ಅವರ ಎಲ್ಲಾ ಆಟಗಾರರು ಫಿಟ್ ಆಗಿ ಲಭ್ಯವಿದ್ದರೆ ಮತ್ತು ಫಾರ್ಮ್ ಸಹ ಸರಿಯಾಗಿದ್ದರೆ, ಅವರು ಪಾಯಿಂಟ್ಸ್‌ ಟೇಬಲ್‌ನಲ್ಲಿ ನಂ.1 ಮತ್ತು ನಂ.2 ಸ್ಥಾನಗಳನ್ನು ಅಲಂಕರಿಸಲಿದ್ದಾರೆ. ಆದರೆ ಕ್ರಿಕೆಟ್‌ನಲ್ಲಿ ಏನಾಗುತ್ತದೆ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೂ, ಅವರು ಖಂಡಿತವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಆರ್‌ಸಿಬಿಗೆ ನಾಲ್ಕನೇ ಸ್ಥಾನ ನೀಡಿದ ಚೋಪ್ರಾ

ಆಕಾಶ್‌ ಚೋಪ್ರಾ ಅವರು ತಮ್ಮ ಪ್ಲೇಆಫ್ಸ್‌ ಭವಿಷ್ಯವಾಣಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು ಮೂರನೇ ಸ್ಥಾನಕ್ಕೆ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ನಾಲ್ಕನೇ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಆದರೆ, ಪ್ರಮುಖ ಆಟಗಾರರ ಗೈರುಹಾಜರಿಯಿಂದ ಆರ್‌ಸಿಬಿಗೆ ಸಾಕಷ್ಟು ಹಿನ್ನಡೆ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ. ಅದರಲ್ಲೂ ನುವಾನ್‌ ತುಷಾರ ಕುರಿತ ಸುದ್ದಿಯು ತಂಡದ ಪರಿಸ್ಥಿತಿಯನ್ನು ಇನ್ನಷ್ಟು ಕಠಿಣಗೊಳಿಸಿದೆ ಎಂದು ಹೇಳಿದ್ದಾರೆ.

IPL 2026: ವಿರಾಟ್‌ ಕೊಹ್ಲಿ ಫಾರ್ಮ್‌ ಬಗ್ಗೆ ದೊಡ್ಡ ಅಪ್‌ಡೇಟ್‌ ಕೊಟ್ಟ ಆರ್‌ಸಿಬಿ ಕೋಚ್‌!

“ನನ್ನ ಅನಿಸಿಕೆಯಲ್ಲಿ ಪಂಜಾಬ್‌ ಕಿಂಗ್ಸ್‌ ಮೂರನೇ ತಂಡವಾಗಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕು. ನಾಲ್ಕನೇ ಸ್ಥಾನಕ್ಕೆ ನಾನು ಆರ್‌ಸಿಬಿ ತಂಡವನ್ನು ಯೋಚಿಸುತ್ತಿದ್ದೇನೆ. ಆದರೆ ಆರ್‌ಸಿಬಿ ಕ್ಯಾಂಪ್‌ನಿಂದ ಉತ್ತಮ ಸುದ್ದಿಗಳು ಬರುತ್ತಿಲ್ಲ. ಈಗ ನುವಾನ್‌ ತುಷಾರ ಕುರಿತ ಸುದ್ದಿ ಬಂದಿದೆ. ಆದ್ದರಿಂದ ಪರಿಸ್ಥಿತಿ ಅಷ್ಟಾಗಿ ಅನುಕೂಲಕರವಾಗಿಲ್ಲ,” ಎಂದು ಚೋಪ್ರಾ ತಿಳಿಸಿದ್ದಾರೆ.

“ಆದರೂ, ಇತರ ತಂಡಗಳನ್ನು ಹೋಲಿಸಿದಾಗ ಈ ತಂಡದ ಡೆಪ್ತ್‌ ಮತ್ತು ಶಕ್ತಿಯನ್ನು ನೋಡಿದರೆ, ಆರ್‌ಸಿಬಿ ನಾಲ್ಕನೇ ತಂಡವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯಬಹುದು ಎಂದು ನನಗೆ ಅನಿಸುತ್ತದೆ. ಆದರೆ ಈ ನಾಲ್ಕು ತಂಡಗಳಲ್ಲಿ ಒಂದೊಂದು ತಂಡ ಹೊರಗುಳಿಯಬಹುದು ಮತ್ತು ಐದನೇ ತಂಡವು ಪ್ರವೇಶಿಸಬಹುದು. ಅದು ಯಾವುದೇ ತಂಡ ಹೊರ ಬಹುದು,” ಎಂದು ಅವರು ಸೇರಿಸಿದ್ದಾರೆ.