ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಬಾಡಿಗೆ ನೆಟ್ಸ್‌ನಿಂದ ಧೋನಿಯ ಡ್ರೆಸ್ಸಿಂಗ್‌ ರೂಂಗೆʼ: 14.20 ಕೋಟಿ ರು ಪಡೆದ ಕಾರ್ತಿಕ್‌ ಶರ್ಮಾ ಕಥೆ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜಿನಲ್ಲಿ ಈ ಬಾರಿ ಅನ್‌ಕ್ಯಾಪ್ಡ್‌ ಆಟಗಾರರು ಪ್ರಾಬಲ್ಯ ಸಾಧಿಸಿದ್ದಾರೆ. ಅನ್‌ಕ್ಯಾಪ್ಡ್‌ ಆಟಗಾರರಾದ ಪ್ರಶಾಂತ್‌ ವೀರ್‌ ಹಾಗೂ ಕಾರ್ತಿಕ್‌ ಶರ್ಮಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 14.20 ಕೋಟಿ ರು. ಗಳಿಗೆ ಖರೀದಿಸಿದೆ. ಅದರಂತೆ ಕಾರ್ತಿಕ್‌ ಶರ್ಮಾ ಅವರ ಐಪಿಎಲ್‌ಗೆ ಅವಕಾಶ ಪಡೆದುಕೊಂಡ ಹಾದಿಯ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಐಪಿಎಲ್‌ ಕನಸು ನನಸು ಮಾಡಿಕೊಂಡ 14 ಕೋಟಿ ಒಡೆಯ ಕಾರ್ತಿಕ್!

ತಮ್ಮ ತಂದೆ ಕನಸನ್ನು ನನಸು ಮಾಡುವ ಹಾದಿಯಲ್ಲಿ ಕಾರ್ತಿಕ್‌ ಶರ್ಮಾ. -

Profile
Ramesh Kote Dec 17, 2025 5:17 PM

ನವದೆಹಲಿ: ಕಠಿಣ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದಕ್ಕೆ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2026) ಟೂರ್ನಿಯ ಮಿನಿ ಹರಾಜಿನಲ್ಲಿ ದಾಖಲೆಯನ್ನು ಮೊತ್ತಕ್ಕೆ ಸೋಲ್ಡ್‌ ಆಗಿರುವ ಪ್ರಶಾಂತ್‌ ವೀರ್‌ ಹಾಗೂ ಕಾರ್ತಿಕ್‌ ಶರ್ಮಾ (Karthik Sharma) ಅವರೇ ಉತ್ತಮ ಉದಾಹರಣೆ. ಡಿಸೆಂಬರ್‌ 16 ರಂದು ಅಬುಧಾಬಿಬಿಯಲ್ಲಿ ನಡೆದಿದ್ದ ಮಿನಿ ಆಕ್ಷನ್‌ನಲ್ಲಿ ಈ ಇಬ್ಬರೂ ಯುವ ಆಟಗಾರಿಗೆ ಚೆನ್ನೈ ಸೂಪರ್‌ ಕಿಂಗ್ಸ್ (Chennai Super Kings) 14.20 ಕೋಟಿ ರು. ಗಳನ್ನು ನೀಡುವ ಮೂಲಕ ಖರೀದಿಸಿದೆ. ಆ ಮೂಲಕ ಐಪಿಎಲ್‌ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆದ ಅನ್‌ಕ್ಯಾಪ್ಡ್‌ ಆಟಗಾರರು ಎಂಬ ಜಂಟಿ ದಾಖಲೆಯನ್ನು ಪ್ರಶಾಂತ್‌ ಮತ್ತು ಕಾರ್ತಿಕ್‌ ಬರೆದಿದ್ದಾರೆ.

ಸಿಎಸ್‌ಕೆ ತಂಡಕ್ಕೆ ಈಗಾಗಲೇ ಎಂಎಸ್‌ ಧೋನಿ ಮತ್ತು ಸಂಜು ಸ್ಯಾಮ್ಸನ್‌ ವಿಕೆಟ್‌ ಕೀಪರ್‌ ಆಗಿ ಇದ್ದಾರೆ. ಇದೀಗ ಮತ್ತೊಬ್ಬ ಯುವ ವಿಕೆಟ್‌ ಕೀಪರ್‌ ಕಾರ್ತಿಕ್‌ ಶರ್ಮಾ ಅವರನ್ನು ಸೇರಿಸಿಕೊಳ್ಳಲಾಗಿದೆ. ಸಣ್ಣ ಟೌನ್‌ನ ಬಡ ಕುಟುಂಬದಿಂದ ಬಂದಿರುವ ಕಾರ್ತಿಕ್‌ ಶರ್ಮಾ, ತಮ್ಮ ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ಮುರಿದ ಕ್ರಿಕೆಟ್‌ ಉಪಕರಣಗಳಿಂದ ಅಭ್ಯಾಸ ನಡೆಸಿದ್ದರು. ಆ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಕಷ್ಟು ಕಷ್ಟಪಟ್ಟಿದ್ದರು.

14.20 ಕೋಟಿ ರು ಪಡೆಯುವ ಮೂಲಕ ವಿಶೇಷ ದಾಖಲೆ ಬರೆದ ಪ್ರಶಾಂತ್‌ ವೀರ್‌, ಕಾರ್ತಿಕ್‌ ಶರ್ಮಾ!

ತಂದೆ ಕನಸನ್ನು ನನಸು ಮಾಡಿದ ಮಗ ಕಾರ್ತಿಕ್‌

ಕಾರ್ತಿಕ್‌ ಶರ್ಮಾ ಅವರ ಕ್ರಿಕೆಟ್‌ ವೃತ್ತಿ ಜೀವನದ ಹಿಂದೆ ಅವರ ತಂದೆ ಮನೋಜ್‌ ಶರ್ಮಾ ಇದ್ದಾರೆ. ಒಂದು ಕಾಲದಲ್ಲಿ ಕ್ರಿಕೆಟ್‌ ಅನ್ನೇ ಜೀವನವನ್ನಾಗಿ ತೆಗೆದುಕೊಂಡು ಗಾಯದ ಕಾರಣ ತಮ್ಮ ಕನಸನ್ನು ನನಸು ಮಾಡಲಾಗದ ವ್ಯಕ್ತಿಯನ್ನು ನೋಡಿಕೊಂಡು ಕಾರ್ತಿಕ್‌ ಶರ್ಮಾ ಬೆಳೆದು ಬಂದಿದ್ದಾರೆ. ತಮ್ಮ ತಂದೆ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಕಾರಣದಿಂದ ತಮ್ಮ ತಂದೆಯ ಕನಸನ್ನು ತಾನೇ ನನಸು ಮಾಡಬೇಕೆಂದು ಕಾರ್ತಿಕ್‌ ಪಣ ತೊಟ್ಟಿದ್ದಾರೆ.

ಕಾರ್ತಿಕ್‌ ಶರ್ಮಾ ಅವರ ಕ್ರಿಕೆಟ್‌ ದಿನಗಳು ನಿಜಕ್ಕೂ ಸುಲಭವಾಗಿರಲಿಲ್ಲ. ಇವರ ಕ್ರಿಕೆಟ್‌ ಖರ್ಚುಗಳನ್ನು ಭರಿಸಲು ಕೂಡ ಕುಟುಂಬದಿಂದ ಸಾಧ್ಯವಾಗುತ್ತಿರಲಿಲ್ಲ. ಕಡಿಮೆ ಹಣದಲ್ಲಿ ಮನೆಯ ನಿರ್ವಹಣೆ, ಹೆಚ್ಚಿನ ಉಳಿತಾಯ, ಆಭರಣಗಳ ಮಾರಾಟ, ಸಾಲ ತೆಗೆದುಕೊಳ್ಳಲು ಮೂಲಕ ಮನೆ ಹಗೂ ಕಾರ್ತಿಕ್‌ ಅವರ ಕ್ರಿಕೆಟ್‌ ಅನ್ನು ನಿರ್ವಹಿಸಲಾಗುತ್ತಿತ್ತು. ಅಗತ್ಯ ಬಿದ್ದರೆ ಕಾರ್ತಿಕ್‌ ಪಾರ್ಟ್‌ ಟೈಮ್‌ ಕೆಲಸ ಕೂಡ ಮಾಡಿದ್ದರು.



ಕ್ರಿಕೆಟ್‌ ತರಬೇತಿಯನ್ನು ಮೂಲಸೌಕರ್ಯದಂತೆ ಹೇಗೆ ಪರಿಗಣಿಸಲಾಯಿತು ಎಂಬುದು ಅತ್ಯಂತ ಗಮನಾರ್ಹವಾದ ವಿವರವಾಗಿದೆ. ಬೌಲಿಂಗ್ ಯಂತ್ರ ಮತ್ತು ಕ್ರಿಕೆಟ್‌ ನೆಟ್ಸ್‌ ವ್ಯವಸ್ಥೆ ಮಾಡಲು ಜಮೀನನ್ನು ಖರೀದಿಸಿ ನಂತರ ಮಾರಾಟ ಮಾಡಲಾಗಿತ್ತು. ಮನೆಗೆ ಹತ್ತಿರ ಕ್ರಿಕೆಟ್‌ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಲು ವ್ಯವಸ್ಥೆಯನ್ನು ಮಾಡಲಾಗಿತ್ತು.

ಅವರ ಆರಂಭಿಕ ದಿನಗಳ ಕಥೆಗಳು ಅಸೂಯೆಯಿಂದ ಉಂಟಾದ ವಿಧ್ವಂಸಕ ಕೃತ್ಯಗಳನ್ನು ವಿವರಿಸುತ್ತವೆ: ಉಪಕರಣಗಳನ್ನು ಕದ್ದಿರುವುದು, ಬಲೆಗಳನ್ನು ಹಾನಿಗೊಳಿಸುವುದು ಅಥವಾ ಬೆಂಕಿ ಹಚ್ಚುವುದು. ಪ್ರತಿಕ್ರಿಯೆ ನಾಟಕೀಯವಾಗಿರಲಿಲ್ಲ. ಕುಟುಂಬವು ಸುರಕ್ಷಿತ, ರಚನಾತ್ಮಕ ಪರಿಸರವನ್ನು ಕಂಡುಕೊಂಡು ಕಾರ್ತಿಕ್ ಅವರನ್ನು ಹಿಂದಿನ ತರಬೇತಿಯಲ್ಲಿ ಇರಿಸಿತು.

IPL 2026: ಕೊಹ್ಲಿ-ಸಾಲ್ಟ್‌ ಓಪನರ್ಸ್‌; ಹರಾಜಿನ ಬಳಿಕ ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್‌ XI

ಲೋಕೆಂದರ್‌ ಸಿಂಗ್‌ ಗರಡಿಯಲ್ಲಿ ಪಳಗಿದ್ದ ಕಾರ್ತಿಕ್‌

ಈ ಹಾದಿಯು ಅವರನ್ನು ಅಕಾಡೆಮಿಗಳ ಮೂಲಕ ಕರೆದೊಯ್ಯಿತು ಮತ್ತು ಲೋಕೇಂದ್ರ ಸಿಂಗ್ ಚಹರ್ ಅವರ ಮಾರ್ಗದರ್ಶನದಲ್ಲಿ ಕಾರ್ತಿಕ್ ತರಬೇತಿ ಪಡೆದರು ಹಾಗೂ ನಿರಂತರ ಬೆಂಬಲವನ್ನು ಪಡೆದಿದ್ದಾರೆ. ಕಾರ್ತಿಕ್‌ ಅವರ ಯಶಸ್ಸಿನ ಶ್ರೇಯ ಲೋಕೆಂದರ್‌ ಸಿಂಗ್‌ಗೂ ಸಲ್ಲಬೇಕು. ಕ್ರಿಕೆಟ್‌ನ ಖರ್ಚು ವೆಚ್ಚಗಳನ್ನು ಭರಿಸಲು ಕಾರ್ತಿಕ್‌ ಟ್ಯೂಷನ್‌ ಅನ್ನು ತೆಗೆದುಕೊಳ್ಳುತ್ತಿದ್ದರು ಎಂಬುದು ವರದಿಯಾಗಿದೆ.