GT vs RR ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ!
RR vs GT Match Preview: ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮೇ 9 ರಂದು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್‌ನ 52ನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ.
ರಾಜಸ್ಥಾನ್ vs ಗುಜರಾತ್ ಹೈವೋಲ್ಟೇಜ್ ಪಂದ್ಯ. -
ಜೈಪುರ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸಾಲಿನ (IPL 2026) ಟೂರ್ನಿಯಲ್ಲಿ ಸಮಬಲದ ಹೋರಾಟ ತೋರುವ ಮೂಲಕ ಅಂಕಪಟ್ಟಿಯಲ್ಲಿ ತಲಾ 12 ಅಂಕಗಳನ್ನು ಕಲೆಹಾಕಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ (RR vs GT) ತಂಡಗಳು ಮೇ 9 ರಂದು ಇಲ್ಲಿನ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುವ 52ನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ. ಟೂರ್ನಿಯ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವ ಹಾದಿಯಲ್ಲಿ ಸಾಗುತ್ತಿರುವ ಈ ಎರಡೂ ತಂಡಗಳ ನಡುವಣ ಕಾಳಗ ಅತ್ಯಂತ ತೀವ್ರ ರೋಚಕತೆಯಿಂದ ಕೂಡಿರುತ್ತದೆ.
ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ, ತನ್ನ ಆರಂಭಿಕ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಭರ್ಜರಿ ಆರಂಭವನ್ನು ಪಡೆದಿತ್ತು. ಆದರೆ, ತದನಂತರ ಆಡಿದ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋತು ಹಿನ್ನಡೆಯನ್ನು ಅನುಭವಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಳೆದ ಪಂದ್ಯದಲ್ಲಿನ ಸೋಲಿನ ಮೂಲಕ ಇದೀಗ ಆರ್‌ಆರ್, ಶುಭಮನ್ ಗಿಲ್ ನಾಯಕತ್ವದ ಜಿಟಿ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ.
RCB vs LSG: ವಿರಾಟ್ ಕೊಹ್ಲಿ ಚಾಂಪಿಯನ್ ಎನ್ನುವುದಕ್ಕೆ ಇದೇ ಉದಾಹರಣೆ ಎಂದ ಸಂಜಯ್ ಮಾಂಜ್ರೇಕರ್!
ಇನ್ನು ಗುಜರಾತ್ ಟೈಟನ್ಸ್ ತಂಡ ಹ್ಯಾಟ್ರಿಕ್ ಗೆಲುವಿನ ಮೂಲಕ ಇದೀಗ ಆರ್‌ಆರ್ ಸವಾಲನ್ನು ಎದುರಿಸಲು ಸಿದ್ದತೆ ನಡೆಸುತ್ತಿದೆ. ಜಿಟಿ ಇಲ್ಲಿಯವರೆಗೂ ಆಡಿದ 10 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಪಡೆದಿದೆ. ಇನ್ನುಳಿದ ನಾಲ್ಕು ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ಪಡೆದರೆ ಶುಭಮನ್ ಗಿಲ್ ಪಡೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಲೆಕ್ಕಾಚಾರ ಕೂಡ ಇದೇ ರೀತಿ ಇದೆ.
ಪಂದ್ಯದ ವಿವರ
2026ರ ಐಪಿಎಲ್ ಟೂರ್ನಿ
52ನೇ ಪಂದ್ಯ
ಗುಜರಾತ್ ಟೈಟನ್ಸ್ VS ರಾಜಸ್ಥಾನ್ ರಾಯಲ್ಸ್
ದಿನಾಂಕ: ಮೇ 9, 2026
ಸಮಯ: ಸಂಜೆ 07: 30ಕ್ಕೆ
ಸ್ಥಳ: ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್
RCB vs LSG ಪಂದ್ಯದ ಕೊನೆಯ ಓವರ್ ದಿಗ್ವೇಶ್ ಸಿಂಗ್‌ಗೆ ನೀಡಲು ಕಾರಣ ತಿಳಿಸಿದ ರಿಷಭ್ ಪಂತ್!
ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಪಿಚ್ ರಿಪೋರ್ಟ್
2026ರ ಐಪಿಎಲ್ ಟೂರ್ನಿಯಲ್ಲಿ ಇಲ್ಲಿನ ತನಕ ಈ ಅಂಗಣದಲ್ಲಿ ನಡೆದಿದ್ದ ಪಂದ್ಯಗಳಲ್ಲಿ ಚೇಸಿಂಗ್ ತಂಡಗಳು ಗೆದ್ದಿವೆ. ಇಲ್ಲಿ ಸ್ವಾಭವಿಕವಾಗಿ ಫ್ಲ್ಯಾಟ್ ಪಿಚ್ ಅನ್ನು ನೋಡಬಹುದು. ಎರಡು ಬಾರಿ ಈ ಕ್ರೀಡಾಂಗಣದಲ್ಲಿ 220ಕ್ಕೂ ಅಧಿಕ ಮೊತ್ತದ ಗುರಿಗಳನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿದೆ. ಹಾಗಾಗಿ ಟಾಸ್ ಗೆದ್ದ ತಂಡದ ನಾಯಕ ಚೇಸಿಂಗ್ ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 9
ರಾಜಸ್ಥಾನ್ ರಾಯಲ್ಸ್ ಗೆಲುವು: 3
ಗುಜರಾತ್ ಟೈಟನ್ಸ್ ಗೆಲುವು: 6
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್), ರಿಯಾನ್ ಪರಾಗ್ (ನಾಯಕ), ಶುಭಂ ದುಬೆ, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ರವಿ ಬಿಷ್ಣೋಯ್, ಬ್ರಿಜೇಶ್ ಶರ್ಮಾ, ನಾಂಡ್ರೆ ಬರ್ಗರ್
ಇಂಪ್ಯಾಕ್ಟ್ ಪ್ಲೇಯರ್: ತುಷಾರ್ ದೇಶಪಾಂಡೆ
ಗುಜರಾತ್ ಟೈಟನ್ಸ್: ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ರಾಹುಲ್ ತೇವಾಟಿಯಾ, ಜೇಸನ್ ಹೋಲ್ಡರ್, ಅರ್ಷದ್ ಖಾನ್, ರಶೀದ್ ಖಾನ್, ಕಗಿಸೊ ರಬಾಡ, ಮಾನವ್ ಸುತಾರ್
ಇಂಪ್ಯಾಕ್ಟ್ ಪ್ಲೇಯರ್: ಮೊಹಮ್ಮದ್ ಸಿರಾಜ್