ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಆತನ ವಯಸ್ಸು ನೋಡಬೇಡಿ, ಆಟ ನೋಡಿʼ: ವೈಭವ್‌ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಗವಾಸ್ಕರ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿ ತಂಡಗಳಿಗೆ ಭೀತಿ ಹುಟ್ಟಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ.

ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಸುನೀಲ್‌ ಗವಾಸ್ಕರ್‌!

ವೈಭವ್‌ಗೆ ಭಾರತ ತಂಡದಲ್ಲಿ ಅವಕಾಶ ನೀಡಿ ಎಂದ ಗವಾಸ್ಕರ್‌. -

Profile
Ramesh Kote May 29, 2026 6:01 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಟೂರ್ನಿಯಲ್ಲಿ(IPL 2026) ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಆರೆಂಜ್‌ ಕ್ಯಾಪ್‌ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿರುವ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ (Vaibhav Sooryavanshi) ಅವರನ್ನು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ವಯಸ್ಸು ಕೇವಲ ಸಂಖ್ಯೆಗಳಷ್ಟೇ, ಹಾಗಾಗಿ ವೈಭವ್‌ ಸೂರ್ಯವಂಶಿಗೆ ಭಾರತ ತಂಡದಲ್ಲಿ ಅವಕಾಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ವೈಭವ್‌ ಸೂರ್ಯವಂಶಿ 2026ರ ಐಪಿಎಲ್‌ ಟೂರ್ನಿಯಲ್ಲಿ ಇಷ್ಟೊಂದು ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ, ಅವರು ಈ ಸೀಸನ್‌ನಲ್ಲಿ ಒಂದು ಶತಕ ಸೇರಿದಂತೆ ರನ್‌ ಹೊಳೆಯನ್ನು ಹರಿಸಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 15 ಪಂದ್ಯಗಳಿಂದ 45.33ರ ಸರಾಸರಿ ಹಾಗೂ 242.86ರ ಸ್ಟ್ರೈಕ್‌ ರೇಟ್‌ನಲ್ಲಿ 680 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಆರೆಂಜ್‌ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರ ಬ್ಯಾಟಿಂಗ್‌ ಬಲದಿಂದ ರಾಜಸ್ಥಾನ್‌ ರಾಯಲ್ಸ್‌ ತಂಡ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ.

ವೈಭವ್‌ ಸೂರ್ಯವಂಶಿಗೆ ಈಗಲೇ ಭಾರತ ತಂಡದಲ್ಲಿ ಅವಕಾಶ ನೀಡಬೇಡಿ: ಆಕಾಶ್‌ ಚೋಪ್ರಾ ವಾರ್ನಿಂಗ್‌!

ಸ್ಪೋರ್ಟ್ಸ್‌ತಕ್‌ ಜೊತೆ ಮಾತನಾಡಿದ ಸುನೀಲ್‌ ಗವಾಸ್ಕರ್‌,"ಟಿ20 ಕ್ರಿಕೆಟ್‌ಗೆ ಅವರು ಸಂಪೂರ್ಣ ಸಿದ್ಧರಿದ್ದಾರೆ. ಖಂಡಿತವಾಗಿಯೂ ಸಿದ್ಧರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ತಂಡ ಆಯ್ಕೆ ಮಾಡುವಾಗ ಅವರಿಗೆ ಅವಕಾಶ ಸಿಗುತ್ತದೆ ಎಂದು ನಾನು ಆಶಿಸುತ್ತೇನೆ. ಇಂತಹ ಅದ್ಭುತ ಪ್ರದರ್ಶನದ ಬಳಿಕ ಈಗಲೂ ಅವಕಾಶ ನೀಡದಿದ್ದರೆ, ಮತ್ತೇ ಯಾವಾಗ ಅವಕಾಶ ಕೊಡುತ್ತೀರಿ?” ಎಂದು ಪ್ರಶ್ನೆ ಮಾಡಿದ್ದಾರೆ.

ಅವರ ವಯಸನ್ನು ನೋಡಬೇಡಿ, ಆಟವನ್ನು ನೋಡಿ: ಗವಾಸ್ಕರ್‌

ಸುನೀಲ್‌ ಗವಾಸ್ಕರ್‌ ಅವರು, ವೈಭವ್ ಅವರ ವಯಸ್ಸಿನ ಬಗ್ಗೆ ಟೀಕೆ ಮಾಡುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ. ತಮಗಿಂತ 15 ವರ್ಷ ಹೆಚ್ಚು ವಯಸ್ಸಿನ ಆಟಗಾರರ ವಿರುದ್ಧವೂ, ಅಂತರರಾಷ್ಟ್ರೀಯ ಅನುಭವ ಹೊಂದಿರುವ ಬೌಲರ್‌ಗಳ ವಿರುದ್ಧವೂ ಅವರು ಸಿಕ್ಸರ್ ಹಾಗೂ ಬೌಂಡರಿಗಳನ್ನು ಸಿಡಿಸುತ್ತಿರುವುದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.

IPL 2026: ಸುನೀಲ್‌ ಗವಾಸ್ಕರ್‌, ಸಂಜಯ್‌ ಬಾಂಗರ್‌ ಪಾದ ಸ್ಪರ್ಶಿಸಿದ ವೈಭವ್‌ ಸೂರ್ಯವಂಶಿ! ವಿಡಿಯೊ

“ಅವರ ವಯಸ್ಸನ್ನು ನೋಡಬೇಡಿ. ಅವರು ಹೇಗೆ ಫೋರ್ ಮತ್ತು ಸಿಕ್ಸರ್‌ಗಳನ್ನು ಹೊಡೆಯುತ್ತಿದ್ದಾರೆ ಎಂಬುದನ್ನು ನೋಡಿ. ತನಗಿಂತ 15 ವರ್ಷ ಹಿರಿಯರಾದ ಆಟಗಾರರ ವಿರುದ್ಧವೂ, ಅಂತಾರಾಷ್ಟ್ರೀಯ ಕ್ರಿಕೆಟ್ ಅನುಭವ ಹೊಂದಿದವರ ವಿರುದ್ಧವೂ ಚೆಂಡನ್ನು ಸ್ಟ್ಯಾಂಡ್‌ಗೆ ಕಳುಹಿಸುತ್ತಿದ್ದಾರೆ,” ಎಂದು ಗವಾಸ್ಕರ್ ತಿಳಿಸಿದ್ದಾರೆ.

“ಹೀಗಾಗಿ ಅವರ ವಯಸ್ಸಿನ ಬಗ್ಗೆ ಚಿಂತಿಸಬೇಡಿ. ಅವರು ಆಡುತ್ತಿರುವ ರೀತಿಯನ್ನು ನೋಡಿ. ಅವರ ಶೈಲಿಯನ್ನು ನೋಡಿ. ಅವರಲ್ಲಿ ಯಾವುದೇ ಭಯವೇ ಇಲ್ಲ. ಸಂಪೂರ್ಣ ನಿರ್ಭೀತಿಯಾಗಿ ಆಡುತ್ತಿದ್ದಾರೆ,” ಎಂದು ಸುನೀಲ್‌ ಗವಾಸ್ಕರ್‌ ಮತ್ತಷ್ಟು ಹೇಳಿದ್ದಾರೆ.