ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಂಡೀಗಢ ವಿರುದ್ಧ 3 ವಿಕೆಟ್‌ ಕಿತ್ತು ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆದ ಅರ್ಜುನ್‌ ತೆಂಡೂಲ್ಕರ್‌!

SMAT 2025: ಚಂಡೀಗಢ ವಿರುದ್ಧದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ ಗೋವಾರ ತಂಡದ ಆಲ್‌ರೌಂಡರ್‌ ಹಾಗೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಅವರು ಬೌಲಿಂಗ್‌ನಲ್ಲಿ ಮಿಂಚಿದರು. ಅವರು ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

SMAT: ಚಂಡೀಗಢ ವಿರುದ್ಧ 3 ವಿಕೆಟ್‌ ಕಿತ್ತ ಮರಿ ತೆಂಡೂಲ್ಕರ್‌!

ಚಂಡೀಗಢ ವಿರುದ್ಧ 3 ವಿಕೆಟ್‌ ಕಿತ್ತ ಅರ್ಜುನ್‌ ತೆಂಡೂಲ್ಕರ್‌. -

Profile
Ramesh Kote Nov 28, 2025 10:39 PM

ನವದೆಹಲಿ: ಶುಕ್ರವಾರ ನಡೆದಿದ್ದ 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy 2025) ಟೂರ್ನಿಯ ಗುಂಪು ಹಂತದ ಪಂದ್ಯದಲ್ಲಿ (GOA vs CDG) ಮಾಸ್ಟರ್‌-ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರ ಗೋವಾ ತಂಡದ ಆಲ್‌ರೌಂಡರ್‌ ಅರ್ಜುನ್ ತೆಂಡೂಲ್ಕರ್ (Arjun Tendulkar) ಮಾರಕ ಬೌಲಿಂಗ್‌ ದಾಳಿ ನಡೆಸಿದರು. ಅವರು ಮತ್ತು ವಾಸುಕಿ ಕೌಶಿಕ್ ಅವರ ಅತ್ಯುತ್ತಮ ಬೌಲಿಂಗ್‌ನ ಸಹಾಯದಿಂದ ಗೋವಾ ತಂಡ, ಚಂಡೀಗಢ ತಂಡವನ್ನು ಭಾರಿ ಅಂತರದಿಂದ ಸೋಲಿಸಿತು. ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್‌ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿ, ಚಂಡೀಗಢವನ್ನು ಸೋಲಿಸಲು ನೆರವು ನೀಡಿದ್ದರು.

ಎಡಗೈನಲ್ಲಿ ಬೌಲ್‌ ಮಾಡುವ ಅರ್ಜುನ್ ತೆಂಡೂಲ್ಕರ್‌ ತಮ್ಮ ಮಾರಕ ಬೌಲಿಂಗ್‌ ದಾಳಿಯ ಮೂಲಕ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಕಾಟ ಕೊಟ್ಟರು. ಇದರ ಪರಿಣಾಮವಾಗಿ ತಮ್ಮ ಮೊದಲನೇ ಓವರ್‌ನಲ್ಲಿಯೇ ಮೊದಲನೇ ವಿಕೆಟ್ ಪಡೆದರು. ಅವರು ಚಂಡೀಗಢ ನಾಯಕ ಶಿವಂ ಭಾಂಬ್ರಿಯನ್ನು ಬೌಲ್ಡ್ ಮಾಡಿದರು. ನಂತರ, ಪಂದ್ಯದ ನಾಲ್ಕನೇ ಓವರ್‌ನಲ್ಲಿ ಅರ್ಜುನ್ ಆಜಾದ್ ಅವರನ್ನು ಎಲ್ಬಿಡಬ್ಲ್ಯೂಗೆ ಬಲಿ ಪಡೆದರು. ಅರ್ಜುನ್ ತಡವಾಗಿ ಹಿಂತಿರುಗಿ 16ನೇ ಓವರ್‌ನಲ್ಲಿ ತೀಕ್ಷ್ಣವಾದ ಯಾರ್ಕರ್‌ನೊಂದಿಗೆ ಮತ್ತೊಂದು ವಿಕೆಟ್ ಪಡೆದರು. ಅರ್ಜುನ್ ವೇಗವಾಗಿ ಮತ್ತು ಪೂರ್ಣವಾಗಿ ಬೌಲ್‌ ಮಾಡಿದರು ಮತ್ತು ಜಗ್ಜಿತ್ ಸಿಂಗ್ ಕ್ರೀಸ್‌ನಲ್ಲಿ ನೆಲೆಗೊಳ್ಳಲು ಬಿಡಲಿಲ್ಲ. ಚೆಂಡು ಅವರ ಕಾಲುಗಳ ನಡುವೆ ಹೋಗಿ ಸ್ಟಂಪ್‌ಗಳನ್ನು ಹೊಡೆಯಿತು.

ʻರನ್‌ ಗಳಿಸಿಲ್ಲವಾದ್ರೆ, ಸದ್ಯದಲ್ಲಿಯೇ ನಿಮಗೆ ಗೇಟ್‌ಪಾಸ್‌ʼ: ಕೆಎಲ್‌ ರಾಹುಲ್‌ಗೆ ರಾಬಿನ್‌ ಉತ್ತಪ್ಪ ವಾರ್ನಿಂಗ್‌!

ಚಂಡೀಗಢ 121 ರನ್‌ಗಳಿಗೆ ಆಲೌಟ್

ಗೋವಾ ನೀಡಿದ್ದ 174 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚಂಡೀಗಢ 19 ಓವರ್‌ಗಳಲ್ಲಿ ಕೇವಲ 121 ರನ್‌ಗಳಿಗೆ ಆಲೌಟ್ ಆಯಿತು. ಕೌಶಿಕ್ ಎಸೆತದಲ್ಲಿ ಅರ್ಜುನ್ ಪಂದ್ಯದ ಕೊನೆಯ ಕ್ಯಾಚ್ ಪಡೆದರು. ಚಂಡೀಗಢದ ಬ್ಯಾಟಿಂಗ್‌ನ ಬೆನ್ನನ್ನು ಮುರಿದಿದ್ದ ಇಬ್ಬರು ಬೌಲರ್‌ಗಳು ಒಟ್ಟಾಗಿ ಆಟದ ಕೊನೆಯ ವಿಕೆಟ್ ಪಡೆದ ರೀತಿ ನಿಜಕ್ಕೂ ಗಮನಾರ್ಹವಾಗಿದೆ. ಅರ್ಜುನ್ 4 ಓವರ್‌ಗಳಲ್ಲಿ 17 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಆಟದ ಅವಧಿಯನ್ನು ಪೂರ್ಣಗೊಳಿಸಿದರು. ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ಮೂರು ಗೋವಾ ಬೌಲರ್‌ಗಳಲ್ಲಿ ಅವರು ಒಬ್ಬರು. ಬೌಲ್‌ ಮಾಡುವುದರ ಜೊತೆಗೆ, ಅರ್ಜುನ್ 9 ಎಸೆತಗಳಲ್ಲಿ 14 ರನ್ ಗಳಿಸಿ ಗೋವಾ ಪರ ಇನಿಂಗ್ಸ್‌ ಅನ್ನು ತೆರೆದರು. ಪಂದ್ಯದ ನಾಲ್ಕನೇ ಓವರ್‌ನಲ್ಲಿ ಅವರು ರನೌಟ್ ಆದರು.

ಭಾರತ ಟೆಸ್ಟ್‌ ತಂಡದ ಮೂರನೇ ಕ್ರಮಾಂಕದ ರೇಸ್‌ನಲ್ಲಿರುವ ಮೂವರು ಬ್ಯಾಟ್ಸ್‌ಮನ್‌ಗಳು!

173 ರನ್‌ ಕಲೆ ಹಾಕಿದ್ದ ಗೋವಾ

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗೋವಾ ತಂಡ, ಅದ್ಭುತ ಬ್ಯಾಟಿಂಗ್‌ ಪ್ರದರ್ಶವನ್ನು ತೋರಿತು. ಗೋವಾ ಪರ ಅಗ್ರ ನಾಲ್ವರು ಬ್ಯಾಟ್ಸ್‌ಮನ್‌ಗಳಾದ ಇಶಾನ್‌ ಗಾಡೇಕರ್‌, ಅರ್ಜುನ್‌ ತೆಂಡೂಲ್ಕರ್‌, ಅಭಿನವ್‌ ತೇಜ್ರಾಣ ಹಾಗೂ ಪ್ರಭು ದೇಸಾಯಿ ಅವರು ಬಹುಬೇಗ ಔಟ್‌ ಆದರು. ಆ ಮೂಲಕ ಗೋವಾ ತಂಡ 35 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ನಂತರ ಐದನೇ ವಿಕೆಟ್‌ ಜೊತೆಯಾದ ಲಲಿತ್‌ ಯಾದವ್‌ ಹಾಗೂ ದೀಪ್‌ರಾಜ್‌ ಗಾವಂಕರ್‌ (28) ಅವರು 50 ರನ್‌ಗಳ ಜೊತೆಯಾಟವನ್ನು ಆಡಿದರು. ಆದರೆ, ಒಂದು ಕಡೆ ಗಟ್ಟಿಯಾಗಿ ನಿಂತು ಸ್ಪೋಟಕ ಬ್ಯಾಟ್‌ ಮಾಡಿದ ಲಲಿತ್‌ ಯಾದವ್‌, 49 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 82 ರನ್‌ ಸಿಡಿಸಿದರು. ಆ ಮೂಲಕ ಗೋವಾ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳನ್ನು 173 ರನ್‌ಗಳನ್ನು ಕಲೆ ಹಾಕಿತ್ತು.