IPL 2026: ಆರ್‌ಆರ್ ಎದುರು ಅರ್ಧಶತಕ ಸಿಡಿಸಿ ಎಬಿಡಿ ದಾಖಲೆ ಮುರಿದ ಕೆಎಲ್ ರಾಹುಲ್!
ಕೆಎಲ್ ರಾಹುಲ್ ಅವರ ಶಾಂತ ಮತ್ತು ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 194 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಮೇ 17 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ರಾಹುಲ್ ಅರ್ಧಶತಕ ಸಿಡಿಸುವ ಮೂಲಕ ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್ ಅವರ ಸಾರ್ವಕಾಲಿಕ ದಾಖಲೆಯೊಂದನ್ನು ಮುರಿದಿದ್ದಾರೆ.
ಎಬಿ ಡಿ ವಿಲಿಯರ್ಸ್ ದಾಖಲೆಯನ್ನು ಮುರಿದ ಕೆಎಲ್ ರಾಹುಲ್. -
ನವದೆಹಲಿ: ರಾಜಸ್ಥಾನ್ ರಾಯಲ್ಸ್ ವಿರುದ್ಧ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ (KL Rahul), ರಾಯಲ್ ಚಾಲೆಂಜರ್ಸ್ ಬೆಂಗಳೂರು ದಿಗ್ಗಜ ಎಬಿ ಡಿ ವಿಲಿಯರ್ಸ್ (ABD) ಅವರ ದೊಡ್ಡ ದಾಖಲೆಯನ್ನು ಮುರಿದಿದ್ದಾರೆ. ಭಾನುವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್‌ಆರ್ ನೀಡಿದ್ದ 194 ರನ್‌ಗಳ ಚೇಸಿಂಗ್‌ನಲ್ಲಿ ಕೆಎಲ್ ರಾಹುಲ್ ಈ ಸಾಧನೆಗೆ ಭಾಜನರಾದರು. ಈ ಪಂದ್ಯದಲ್ಲಿ ಡೆಲ್ಲಿ ತಂಡ 5 ವಿಕೆಟ್ ಗೆಲುವು ಪಡೆಯಿತು ಹಾಗೂ ಪ್ಲೇಆಫ್ಸ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಡೆಲ್ಲಿ ಪರ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್, ಆರ್‌ಆರ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 42 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಒಂದು ಬೌಂಡರಿಯೊಂದಿಗೆ 56 ರನ್ ಗಳನ್ನು ಕಲೆ ಹಾಕಿದರು ಹಾಗೂ ಅಭಿಷೇಕ್ ಪೊರೆಲ್ (51 ರನ್) ಅವರ ಜೊತೆ 105 ರನ್‌ಗಳ ಜೊತೆಯಾಟವನ್ನು ಆಡಿದರು. ಈ ಅರ್ಧಶತಕದ ಮೂಲಕ ಕೆಎಲ್ ರಾಹುಲ್, ರಾಜಸ್ಥಾನ್ ರಾಯಲ್ಸ್ ಎದುರು ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಆ ಮೂಲಕ ಆರ್‌ಸಿಬಿ ದಿಗ್ಗಜ ಎಬಿಡಿ ದಾಖಲೆಯನ್ನು ಮುರಿದಿದ್ದಾರೆ. ಕೆಎಲ್ ರಾಹುಲ್ ಆರ್‌ಆರ್ ಎದುರು 9ಕ್ಕೂ ಅಧಿಕ ಬಾರಿ 50 ರನ್‌ಗಳನ್ನು ಬಾರಿಸಿದ್ದರೆ, ಎಬಿಡಿ ಎಂಟು ಬಾರಿ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ.
DC vs RR: ರಾಜಸ್ಥಾನ್ ರಾಯಲ್ಸ್ ಎದುರು ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ಸ್ ಆಸೆ ಜೀವಂತ!
ರಾಜಸ್ಥಾನ್ ರಾಯಲ್ಸ್ ಎದುರು ಅತಿ ಹೆಚ್ಚು 50ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್
9 - ಕೆಎಲ್ ರಾಹುಲ್ (19 ಇನಿಂಗ್ಸ್)
8 - ಎಬಿ ಡಿವಿಲಿಯರ್ಸ್ (20 ಇನಿಂಗ್ಸ್)
7 - ಶಿಖರ್ ಧವನ್ (24 ಇನಿಂಗ್ಸ್)
7 - ವಿರಾಟ್ ಕೊಹ್ಲಿ (33 ಇನಿಂಗ್ಸ್)
6 - ಇಶಾನ್ ಕಿಶನ್ (14 ಇನಿಂಗ್ಸ್)
Anchoring the chase to perfection 🤝
— IndianPremierLeague (@IPL) May 17, 2026
Timing, grace, and a brilliant fifty for KL Rahul ❤️💙
Updates ▶️ https://t.co/JwHkQQ1ayi #TATAIPL | #KhelBindaas | #DCvRR pic.twitter.com/8AKDm1BSRq
ವಿರಾಟ್ ಕೊಹ್ಲಿ ಒಳಗೊಂಡ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾದ ರಾಹುಲ್
ಅರ್ಧಶತಕದೊಂದಿಗೆ ಕೆಎಲ್ ರಾಹುಲ್ ಇದೀಗ ವಿರಾಟ್ ಕೊಹ್ಲಿ ನೇತೃತ್ವದ ವಿಶೇಷ ಬ್ಯಾಟರ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದು ಐಪಿಎಲ್‌ನಲ್ಲಿ ರಾಹುಲ್ ದಾಖಲಿಸಿದ 50ನೇ 50+ ಸ್ಕೋರ್ ಆಗಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್‌ಗಳನ್ನು 50 ಬಾರಿ ದಾಖಲಿಸಿದ ಐದನೇ ಆಟಗಾರ ಎಂಬ ಸಾಧನೆಗೆ ಪಾತ್ರರಾದರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದು, ಅವರು ಒಟ್ಟು 76 ಬಾರಿ 50+ ಸ್ಕೋರ್ ದಾಖಲಿಸಿದ್ದಾರೆ.
IPL 2026: ಪಂಜಾಬ್ ಕಿಂಗ್ಸ್‌ನ ಸತತ 6ನೇ ಸೋಲಿನ ಬಳಿಕ ಮೌನಕ್ಕೆ ಜಾರಿದ ಕೋಚ್ ರಿಕಿ ಪಾಂಟಿಂಗ್!
ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು 50ಕ್ಕೂ ಹೆಚ್ಚು ರನ್ ಗಳಿಸಿದವರು
76: ವಿರಾಟ್ ಕೊಹ್ಲಿ (271 ಇನಿಂಗ್ಸ್)
66: ಡೇವಿಡ್ ವಾರ್ನರ್ (184 ಇನಿಂಗ್ಸ್)
53: ಶಿಖರ್ ಧವನ್ (221 ಇನಿಂಗ್ಸ್)
51: ರೋಹಿತ್ ಶರ್ಮಾ (274 ಇನಿಂಗ್ಸ್)
50: ಕೆಎಲ್ ರಾಹುಲ್ (149 ಇನಿಂಗ್ಸ್)