ʻಟೆಸ್ಟ್ ಕ್ರಿಕೆಟ್‌ಗಿಂತ ಐಪಿಎಲ್ ನಿಮಗೆ ಮುಖ್ಯವಾಯಿತಾ?ʼ: ಇಸಿಬಿಯನ್ನು ಜಾಡಿಸಿದ ಮೈಕಲ್ ವಾನ್!
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಹೊರತಾಗಿಯೂ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂದುವರಿಯಲು ಬಿಟ್ಟಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯನ್ನು ಮಾಜಿ ನಾಯಕ ಮೈಕಲ್ ವಾನ್ ಟೀಕಿಸಿದ್ದಾರೆ. ರಾಷ್ಟ್ರೀಯ ತಂಡದ ಟೆಸ್ಟ್ ಕ್ರಿಕೆಟ್‌ಗಿಂತ ಇವರಿಗೆ ಐಪಿಎಲ್ ತುಂಬಾ ಮುಖ್ಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಮೈಕಲ್ ವಾನ್ ಕಿಡಿ. -
ನವದೆಹಲಿ: ರಾಷ್ಟ್ರೀಯ ತಂಡದ ಕರ್ತವ್ಯದ ಹೊರತಾಗಿಯೂ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ತಮ್ಮ ಬದ್ದತೆಯನ್ನು ಪೂರ್ಣಗೊಳಿಸಲು ಪ್ರಮುಖ ವೇಗಿ ಜೋಫ್ರಾ ಆರ್ಚರ್‌ಗೆ (Jofra Archer) ಅವಕಾಶ ನೀಡಿರುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಮಾಜಿ ನಾಯಕ ಮೈಕಲ್ ವಾನ್ (Michael Vaughan) ಕಿಡಿಕಾರಿದ್ದಾರೆ. ಇಂಗ್ಲೆಂಡ್ ತಂಡ ಜೂನ್ 4 ರಂದು ನ್ಯೂಜಿಲೆಂಡ್ ವಿರುದ್ಧ ತವರು ಬೇಸಿಗೆಯ ಟೆಸ್ಟ್ ಸರಣಿಯನ್ನು ಆರಂಭಿಸಲಿದೆ. ಹಾಗಾಗಿ ಮೊದಲನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಪ್ರಕಟಿಸಿದ್ದು, ಜೋಫ್ರಾ ಆರ್ಚರ್ ಅವರನ್ನು ಕೈ ಬಿಡಲಾಗಿದೆ. ಕ್ರಿಕ್‌ಬಝ್ ಜೊತೆ ಮಾತನಾಡಿದ ಮೈಕಲ್ ವಾನ್, ರಾಷ್ಟ್ರೀಯ ತಂಡದ ಕರ್ತವ್ಯದ ಹೊರತಾಗಿಯೂ ಐಪಿಎಲ್ ಟೂರ್ನಿಗೆ ಪೂರ್ಣ ಪ್ರಮಾಣದಲ್ಲಿ ಲಭ್ಯರಾಗಬೇಕೆಂಬ ಇಸಿಬಿ ಹಾಗೂ ಬಿಸಿಸಿಐ ನಡುವಣ ಒಪ್ಪಂದವನ್ನು ಪ್ರಶ್ನಿಸಿದ್ದಾರೆ.
“ಅವರು ಖಂಡಿತವಾಗಿಯೂ ಎರಡನೇ ಟೆಸ್ಟ್ ಪಂದ್ಯಕ್ಕಾಗಿ ತಂಡದಲ್ಲಿ ಇರುತ್ತಾರೆ ಎಂದು ನನಗೆ ಅನಿಸುತ್ತದೆ. ಆ ಪಂದ್ಯ ಜೂನ್ ಮಧ್ಯಭಾಗದಲ್ಲಿ ನಡೆಯಲಿದೆ. ಇಂಗ್ಲಿಷ್ ಕ್ರಿಕೆಟ್‌ನಲ್ಲಿ ಈಗ ಒಂದು ಸಮಸ್ಯೆ ಎದುರಾಗಿದೆ ಎಂದು ನಾನು ಭಾವಿಸುತ್ತೇನೆ. ಯಾಕಂದ್ರೆ ಜೋಫ್ರಾ ಸಂಪೂರ್ಣ ಐಪಿಎಲ್ ಸೀಸನ್‌ಗೆ ಉಳಿಯಲಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಡುವೆ ಏನೋ ಒಪ್ಪಂದವಾಗಿರುವಂತೆ ಕಾಣುತ್ತದೆ. ಈ ಕಾರಣದಿಂದಲೇ ನಮ್ಮ ಎಲ್ಲಾ ಆಟಗಾರರು ಐಪಿಎಲ್ ಟೂರ್ನಿಗೆ ಸಂಪೂರ್ಣವಾಗಿ ಲಭ್ಯರಾಗುತ್ತಿದ್ದಾರೆ," ಎಂದು ಮೈಕಲ್ ವಾನ್ ಹೇಳಿದ್ದಾರೆ.
IPL 2026: ʻಆರ್‌ಸಿಬಿ ನನಗೆ ತವರು ತಂಡದ ರೀತಿ ಭಾಸವಾಗುತ್ತಿದೆʼ-ಭಾವುಕರಾದ ವೆಂಕಟೇಶ್ ಅಯ್ಯರ್!
ಜೋಫ್ರಾ ಆರ್ಚರ್ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ಜೊತೆ ಒಪ್ಪಂದ ಹೊಂದಿರುವ ಆಟಗಾರರಾಗಿದ್ದು, ವಿಶೇಷವಾಗಿ ಟೆಸ್ಟ್ ಕ್ರಿಕೆಟ್ ವಿಚಾರದಲ್ಲಿ ಕೇಂದ್ರ ಒಪ್ಪಂದಕ್ಕೆ ಯಾವುದೇ ಫ್ರಾಂಚೈಸಿ ಬದ್ಧತೆಗಿಂತ ಹೆಚ್ಚಿನ ಮಹತ್ವ ಇರಬೇಕು ಎಂದು ಮೈಕಲ್ ವಾನ್ ಅವರ ಅಭಿಪ್ರಾಯಪಟ್ಟಿದ್ದಾರೆ.
“ಹಾಗಿದ್ದರೆ ಇಂಗ್ಲೆಂಡ್ ತಂಡದ ಒಪ್ಪಂದ ವ್ಯವಸ್ಥೆಯಲ್ಲಿ ನನಗೆ ಸಮಸ್ಯೆ ಕಾಣುತ್ತಿದೆ. ಯಾಕಂದ್ರೆ ಕಳೆದ ಕೆಲವು ವರ್ಷಗಳಿಂದ ಜೋಫ್ರಾ ಅವರನ್ನು ಇಸಿಬಿ ಅತ್ಯುತ್ತಮ ಸಂಬಳದ ಒಪ್ಪಂದದಡಿ ನೋಡಿಕೊಂಡಿದೆ. ಹಾಗಾದರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಯಾರ ಕೈಯಲ್ಲಿದೆ? ನನ್ನ ನಂಬಿಕೆಯ ಪ್ರಕಾರ, ಅಂತಾರಾಷ್ಟ್ರೀಯ ಕ್ರಿಕೆಟ್ ಒಪ್ಪಂದ, ಯಾವುದೇ ಫ್ರಾಂಚೈಸಿ ಒಪ್ಪಂದಕ್ಕಿಂತ ಮೇಲುಗೈ ಸಾಧಿಸಬೇಕು,” ಎಂದು ವಾನ್ ಹೇಳಿದ್ದಾರೆ.
IPL 2026: ʻನಮ್ಮ ದೊಡ್ಡ ಸಿಂಹಗಳುʼ-ಪ್ಲೇಆಫ್ಸ್‌ಗೇರಿದ ಆರ್‌ಸಿಬಿಗೆ ವಿಜಯ್ ಮಲ್ಯ ಭಾವನಾತ್ಮಕ ಸಂದೇಶ!
ಟೆಸ್ಟ್ ಕ್ರಿಕೆಟ್‌ಗಿಂತ ಫ್ರಾಂಚೈಸಿ ಕ್ರಿಕೆಟ್‌ಗೆ ಆದ್ಯತೆ ನೀಡುವುದು ಸಮಸ್ಯೆ’ : ಮೈಕಲ್ ವಾನ್
ಫ್ರಾಂಚೈಸಿ ಕ್ರಿಕೆಟ್ ಆಟಗಾರರಿಗೆ ಆರ್ಥಿಕವಾಗಿ ಹೆಚ್ಚು ಲಾಭದಾಯಕ ಎನ್ನುವುದನ್ನು ತಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ ಮೈಕಲ್ ವಾನ್, ಟೆಸ್ಟ್ ಕ್ರಿಕೆಟ್‌ಗಿಂತ ಟಿ20 ಲೀಗ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಪ್ರವೃತ್ತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.
“ಈ ಎಲ್ಲಾ ಫ್ರಾಂಚೈಸಿ ಲೀಗ್‌ಗಳು ಅದ್ಭುತವಾಗಿವೆ. ಆಟಗಾರರ ದೃಷ್ಟಿಯಿಂದ ನಾನು ಅವುಗಳನ್ನು ಇಷ್ಟಪಡುತ್ತೇನೆ. ಆದರೆ ನಾವು ದೇಶಿ ಟಿ20 ಲೀಗ್‌ಗಳನ್ನು ಟೆಸ್ಟ್ ಪಂದ್ಯಗಳಿಗಿಂತ ಮೇಲಿಟ್ಟುಕೊಳ್ಳಲು ಆರಂಭಿಸಿದರೆ, ಅದು ಕ್ರಿಕೆಟ್‌ಗೆ ದೊಡ್ಡ ಸಮಸ್ಯೆಯಾಗಬಹುದು ಎಂದು ನಾನು ಭಾವಿಸುತ್ತೇನೆ,” ಎಂದು ವಾನ್ ಕಳವಳ ವ್ಯಕ್ತಪಡಿಸಿದ್ದಾರೆ.