ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಸುರೇಶ್‌ ರೈನಾ!

Suresh Raina on CSK's failure: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ವೈಫಲ್ಯ ಅನುಭವಿಸುತ್ತಿದೆ. ಇಲ್ಲಿಯ ತನಕ ಆಡಿದ 9 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ 7ರಲ್ಲಿ ಸೋಲು ಅನುಭವಿಸಿದೆ. ಸಿಎಸ್‌ಕೆ ವೈಫಲ್ಯಕ್ಕೆ ಕಾರಣವೇನೆಂದು ಸುರೇಶ್‌ ರೈನಾ ಬಹಿರಂಗಪಡಿಸಿದ್ದಾರೆ.

IPL 2025: ಈ ಸಲ ಸಿಎಸ್‌ಕೆ ನೆಲ ಕಚ್ಚಲು ಕಾರಣ ತಿಳಿಸಿದ ಸುರೇಶ್‌ ರೈನಾ!

ಚೆನ್ನೈ ಸೂಪರ್‌ ಕಿಂಗ್ಸ್‌ ವೈಫಲ್ಯಕ್ಕೆ ಕಾರಣ ತಿಳಿಸಿದ ಸುರೇಶ್‌ ರೈನಾ.

Profile Ramesh Kote Apr 26, 2025 8:25 PM

ಚೆನ್ನೈ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ವೈಫಲ್ಯಕ್ಕೆ ಪ್ರಮುಖ ಕಾರಣವೇನೆಂದು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ (Suresh Raina) ಬಹಿರಂಗಪಡಿಸಿದ್ದಾರೆ. ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಸಿಎಸ್‌ಕೆ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಇಲ್ಲಿಯ ತನಕ ಆಡಿದ 9 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ ಎರಡರಲ್ಲಿ ಮಾತ್ರ ಹಾಗೂ ಇನ್ನುಳಿದ 7 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಐದು ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮೇಲೆ ಈ ಬಾರಿಯೂ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಇಲ್ಲಿಯ ತನಕ ಚೆನ್ನೈ ತಂಡವನ್ನು ಇಬ್ಬರು ನಾಯಕರು ಮುನ್ನಡೆಸಿದ್ದಾರೆ. ಆರಂಭಿಕ ಪಂದ್ಯಗಳನ್ನು ಸಿಎಸ್‌ಕೆಯನ್ನು ಋತುರಾಜ್‌ ಗಾಯಕ್ವಾಡ್‌ ಮುನ್ನಡೆಸಿದ್ದರು. ನಂತರ ಗಾಯಕ್ವಾಡ್‌ ಗಾಯಕ್ಕೆ ತುತ್ತಾದ ಬಳಿಕ ಎಂಎಸ್‌ ಧೋನಿ ನಾಯಕತ್ವಕ್ಕೆ ಮರಳಿದರೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸೋಲುಗಳ ಸರಪಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

IPL 2025: ಮತ್ತೆ ಕೆಕೆಆರ್‌ ತಂಡ ಸೇರಿದ ಉಮ್ರಾನ್‌ ಮಲಿಕ್‌

ಇಲ್ಲಿಯವರೆಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ತನ್ನ 27 ಆಟಗಾರರ ಪೈಕಿ 20 ಆಟಗಾರರನ್ನು ಬಳಿಸಿಕೊಂಡಿದೆ. ಇತ್ತೀಚೆಗೆ ಆಯುಷ್‌ ಮ್ಹಾತ್ರೆ ಹಾಗೂ ಡೆವಾಲ್ಡ್‌ ಬ್ರೆವಿಸ್‌ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದರು. ಈ ಇಬ್ಬರ ಬಂದರೂ ಕೂಡ ಇನಿತರ ಆಟಗಾರರ ವೈಫಲ್ಯದಿಂದ ಸಿಎಸ್‌ಕೆ ಗೆಲುವಿನ ಲಯಕ್ಕೆ ಮರಳಲಿಲ್ಲ. ಇತ್ತೀಚೆಗೆ ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಸುರೇಶ್‌ ರೈನಾ, ಈ ಬಾರಿ ಮೆಗಾ ಹರಾಜಿನಲ್ಲಿ ಚೆನ್ನೈ ಟೀಮ್‌ ಮ್ಯಾನೇಜ್‌ಮೆಂಟ್‌ ಉತ್ತಮ ಆಟಗಾರರನ್ನು ಖರೀದಿಸುವಲ್ಲಿ ಎಡವಿದೆ ಎಂದು ಹೇಳಿದ್ದಾರೆ.

ಈ ಸಲ ಆಟಗಾರರ ಖರೀದಿ ಸರಿಯಿಲ್ಲ

"ಕಾಶಿ ಸರ್‌, ಕಳೆದ 30 ರಿಂದ 40 ವರ್ಷಗಳ ಕಾಲ ಆಡಳಿತವನ್ನು ನಿರ್ವಹಿಸುತ್ತಿದ್ದಾರೆ. ರೂಪ ಮೇಡಂ ಅವರು. ಆಟಗಾರರನ್ನು ಖರೀದಿಸುವುದು, ನಿರ್ವಹಿಸುವುದು ಸೇರಿದಂತೆ ಕ್ರಿಕೆಟ್‌ಗೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ. ಆದರೆ, ಈ ಬಾರಿ ಸರಿಯಾದ ಆಟಗಾರರನ್ನು ಖರೀದಿಸಿಲ್ಲ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ,"ಎಂದು ಸುರೇಶ್‌ ರೈನಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

IPL 2025: ಕೆಕೆಆರ್‌ ಪಂದ್ಯಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

"ಎಂಎಸ್‌ ಧೋನಿ ಅಂತಿಮ ಕರೆಯನ್ನು ತೆಗೆದುಕೊಳ್ಳುತ್ತಾರೆಂದು ಅವರು ಸದಾ ಹೇಳುತ್ತಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಎಂದಿಗೂ ಹರಾಜಿನಲ್ಲಿ ಭಾಗವಹಿಸಿಲ್ಲ. ಆ ಚರ್ಚೆಗಳನ್ನು ನಾನು ಎಂದಿಗೂ ಭಾಗವಹಿಸಿಲ್ಲ. ಉಳಿಸಿಕೊಂಡಿರುವ ಆಟಗಾರರ ಬಗ್ಗೆ ನಾನು ಯಾವಾಗಲೂ ಮಾತನಾಡಿದ್ದೇನೆ. ಹರಾಜಿನಲ್ಲಿ ಯಾವ ಆಟಗಾರರನ್ನು ಖರೀದಿಸಬೇಕು ಅಥವಾ ಖರೀದಿಸಬಾರದು ಎಂದು ಎಂಎಸ್‌ ಧೋನಿ ಹೇಳಬಹುದು. ಆದರೆ, ಈ ಬಾರಿ ಅವರು ಇದರಲ್ಲಿ ಭಾಗವಹಿಸಿಲ್ಲ," ಎಂದು ಸಿಎಸ್‌ಕೆ ಮಾಜಿ ಆಲ್‌ರೌಂಡರ್‌ ತಿಳಿಸಿದ್ದಾರೆ.

ತಂಡಕ್ಕಾಗಿ ಎಲ್ಲವನ್ನೂ ನೀಡುತ್ತಿರುವ ಧೋನಿ

"ಚೆನ್ನೈ ಫ್ರಾಂಚೈಸಿ ಟೀಮ್‌ ಮ್ಯಾನೇಜ್‌ಮೆಂಟ್‌ ಈ ಬಾರಿ ಹರಾಜಿನಲ್ಲಿ ಆಟಗಾರರನ್ನು ಖರೀದಿಸಿದೆ. ಒಂದು ವೇಳೆ ಎಂಎಸ್‌ ಧೋನಿ ಹರಾಜಿನಲ್ಲಿ ಭಾಗವಹಿಸಿದ್ದರೆ, ಯಾವ ರೀತಿಯ ಆಟಗಾರರು ತಂಡದಲ್ಲಿಇರುತ್ತಿದ್ದರು ಎಂಬುದನ್ನು ನೀವು ಊಹಿಸಿ. ಅವರು ಬಹುಶಃ ನಾಲ್ಕು ಅಥವಾ ಐವರು ಆಟಗಾರರನ್ನು ತೆಗೆದುಕೊಳ್ಳುತ್ತಿದ್ದರು. ಹಾಗೂ ಕೆಲ ಆಟಗಾರರನ್ನು ಉಳಿಸಿಕೊಳ್ಳುತ್ತಿದ್ದರು. ಅನ್‌ಕ್ಯಾಪ್ಟ್‌ ಆಟಗಾರ ತಂಡಕ್ಕಾಗಿ ಕಠಿಣ ಪರಿಶ್ರಮವನ್ನು ಪಡುತ್ತಿದ್ದರೆ, 43ನೇ ವಯಸ್ಸಿನಲ್ಲಿಯೂ ಎಂಎಸ್‌ ಧೋನಿ ತಂಡಕ್ಕಾಗಿ ಎಲ್ಲವನ್ನೂ ನೀಡುತ್ತಿದ್ದಾರೆ," ಎಂದು ಸುರೇಶ್‌ ರೈನಾ ಹೇಳಿದ್ದಾರೆ.