IPL 2025: ಕೆಕೆಆರ್ ವಿರುದ್ದದ ಪಂದ್ಯಕ್ಕೆ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಔಟ್?
Rajat Patidar Injury Updates: ಮೇ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯಕ್ಕೆ ಗಾಯಾಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದಾರ್ ಅಲಭ್ಯರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ಯಾರು ಮುನ್ನಡೆಸಲಿದ್ದಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ.

ಆರ್‌ಸಿಬಿ ರಜತ್ ಪಾಟಿದಾರ್‌ಗೆ ಗಾಯ.

ಬೆಂಗಳೂರು: ಬೆರಳು ಗಾಯದಿಂದ ಬಳಲುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದಾರ್ (Rajat Patidar) ಅವರು ಮೇ 17 ರಂದು ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದದ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಭಾರತ ಹಾಗೂ ಪಾಕ್ ನಡುವಣ ಉದ್ವಿಗ್ನ ಪರಿಸ್ಥಿತಿಯ ಕಾರಣ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಮೇ 9 ರಂದು ನಿಲ್ಲಿಸಲಾಗಿತ್ತು. ಇದೀಗ ಶನಿವಾರದಿಂದ ಟೂರ್ನಿಯು ಆರ್‌ಸಿಬಿ ಹಾಗೂ ಕೆಕೆಆರ್ ನಡುವಣ ಪಂದ್ಯದ ಮೂಲಕ ಮುಂದುವರಿಯಲಿದೆ. ಅಂದ ಹಾಗೆ ರಜತ್ ಪಾಟಿದಾರ್ ನಾಯಕತ್ವದಲ್ಲಿ ಆರ್‌ಸಿಬಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ ಇಲ್ಲಿಯವರೆಗೂ ಆಡಿದ 11 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಮೂರು ಪಂದ್ಯಗಳಲ್ಲಿಸೋಲು ಅನುಬವಿಸಿದೆ. ಒಟ್ಟು 16 ಅಂಕಗಳನ್ನು ಕಲೆ ಹಾಕಿರುವ ಆರ್‌ಸಿಬಿ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಕಳೆದ ಪಂದ್ಯದಲ್ಲಿ ರಜತ್ ಪಾಟಿದಾರ್ ಅವರು ಬೆರಳು ಗಾಯಕ್ಕೆ ತುತ್ತಾಗಿದ್ದರು. ಅವರು ಸದ್ಯ ಗುಣಮುಖರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಸಂಪೂರ್ಣವಾಗಿ ಗುಣಮುಖರಾಗಲು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಊಹಾಪೋಹಾಗಳು ನಿಜವಾದರೆ ರಜತ್ ಭಾರತ ಎ ತಂಡದ ಇಂಗ್ಲೆಂಡ್ ಪ್ರವಾಸಕ್ಕೂ ತಪ್ಪಿಸಿಕೊಳ್ಳಿದ್ದಾರೆ.
IPL 2025: ಪ್ಲೇಆಫ್ಸ್‌ಗೆ ಸ್ಟಾರ್ ಆಟಗಾರನನ್ನು ಕಳೆದುಕೊಳ್ಳಲಿರುವ ಆರ್‌ಸಿಬಿ, ಮುಂಬೈಗೂ ಹಿನ್ನಡೆ!
ಒಂದು ವೇಳೆ ಐಪಿಎಲ್ ಟೂರ್ನಿಯನ್ನು ಒಂದು ವಾರ ನಿಲ್ಲಿಸಿಲ್ಲವಾದರೆ, ರಜತ್ ಪಾಟಿದಾರ್ ಆರ್‌ಸಿಬಿ ತಂಡದ ಹಲವು ಪಂದ್ಯಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ, ಒಂದು ವಾರ ಟೂರ್ನಿಯನ್ನು ನಿಲ್ಲಿಸಿದ್ದು ಆರ್‌ಸಿಬಿ ಪಾಲಿಗೆ ಒಳ್ಳೆಯದೇ ಆಯಿತು. ಅಂದ ಹಾಗೆ ರಜತ್ ಪಾಟಿದಾರ್‌ಗೆ ತಮ್ಮ ಬೆರಳನ್ನು ಸ್ಪ್ಲಿಂಟ್ ಮೂಲಕ ಸಂರಕ್ಷಿಸಿಕೊಳ್ಳು ಎಂದು ಸಲಹೆ ನೀಡಲಾಗಿದೆ. ಮುಂದಿನ ದಿನಗಳ ರಜತ್ ಪಾಟಿದಾರ್ ಅವರ ಬೆರಳಿಗೆ ಗಾಯದ ಪರಿಸ್ಥಿತಿ ತಿಳಿಯಲಿದೆ.
ರಜತ್ ಅಲಭ್ಯರಾದರೆ, ಆರ್‌ಸಿಬಿಗೆ ನಾಯಕ ಯಾರು?
2025ರ ಐಪಿಎಲ್ ಟೂರ್ನಿಯ ಕೊನೆಯವರೆಗೂ ಆರ್‌ಸಿಬಿಗೆ ರಜತ್ ಪಾಟಿದಾರ್ ಲಭ್ಯರಾಗಬೇಕೆಂದು ಆರ್‌ಸಿಬಿ ನಿರೀಕ್ಷೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ, ರಜತ್ ಪಾಟಿದಾರ್ ಅವರನ್ನು ಕೇವಲ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬ್ಯಾಟಿಂಗ್‌ಗೆ ಬಳಸಿಕೊಳ್ಳಬಹುದು. ಆದರೆ, ಇದೆಲ್ಲವೂ ಅವರ ಗುಣಮುಖರಾಗುವ ಹಾದಿಯ ಮೇಲೆ ಅವಲಂಬಿಸಿದೆ. ಒಂದು ರಜತ್ ಅಲಭ್ಯರಾದರೆ, ಜಿತೇಶ್ ಶರ್ಮಾ ಅವರು ಆರ್‌ಸಿಬಿ ತಂಡವನ್ನು ಮುನ್ನಡೆಸಬಹುದು.
IPL 2025 New Schedule: ಮೇ 17ರಿಂದ ಐಪಿಎಲ್ ಪಂದ್ಯ ಪುನಾರಂಭ; ಜೂನ್ 3ಕ್ಕೆ ಫೈನಲ್
ದೇವದತ್ ಪಡಿಕ್ಕಲ್ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್
ಸ್ನಾಯು ಸೆಳೆತದ ಗಾಯದ ಕಾರಣ ಕನ್ನಡಿಗ ದೇವದತ್ ಪಡಿಕ್ಕಲ್ 2025ರ ಐಪಿಎಲ್ ಟೂರ್ನಿಯಿಂದ ಹೊರ ನಡೆದಿದ್ದಾರೆ. ಇವರ ಸ್ಥಾನಕ್ಕೆ ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರನ್ನು ಆರ್‌ಸಿಬಿಗೆ ಸೇರಿಸಿಕೊಳ್ಳಲಾಗಿದೆ. ಅಂದ ಹಾಗೆ ಮಯಾಂಕ್ ಅಗರ್ವಾಲ್ ಅವರು ಈ ಹಿಂದೆ ಆರ್‌ಸಿಬಿ ಪರ ಆಡಿದ್ದರು. ಕಳೆದ ವರ್ಷಾಂತ್ಯದಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಆದರೆ, ತಮ್ಮ ತವರು ತಂಡದಲ್ಲಿ ಆಡಲು ಮಯಾಂಕ್ ಅಗರ್ವಾಲ್‌ಗೆ ಅವಕಾಶ ಸಿಕ್ಕಿದೆ.