RCB vs SRH: ಜಾಕೋಬ್ ಡಫಿಗೆ ಸ್ಥಾನ, ಸನ್‌ರೈಸರ್ಸ್ ವಿರುದ್ದದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್ XI ವಿವರ!
RCB vs SRH Match Preview: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ನಡುವಣ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಹೆಡ್ ಟು ಹೆಡ್ ದಾಖಲೆ ಸೇರಿದಂತೆ ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.
ಆರ್‌ಸಿಬಿ vs ಎಸ್‌ಆರ್‌ಎಚ್ ನಡುವಣ 2026ರ ಐಪಿಎಲ್ ಪಂದ್ಯ. -
ಬೆಂಗಳೂರು: ಬಹುನಿರೀಕ್ಷಿತ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಒಂದು ದಿನ ಬಾಕಿ ಇದೆ. ನಾಳೆ (ಶನಿವಾರ) ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು (RCB vs SRH) ಕಾದಾಟ ನಡೆಸಲಿವೆ. ಕಳೆದ ವರ್ಷ ಚೊಚ್ಚಲ ಕಪ್ ಗೆದ್ದಿದ್ದ ಆರ್‌ಸಿಬಿ ಇದೀಗ ಅದೇ ಲಯವನ್ನು ಕಾಯ್ದುಕೊಂಡು ಸತತ ಎರಡನೇ ಬಾರಿ ಚಾಂಪಿಯನ್ ಆಗಲು ಎದುರು ನೋಡುತ್ತಿದೆ. ಅಂದ ಹಾಗೆ ತನ್ನ ಮೊದಲನೇ ಪಂದ್ಯ ತವರು ಅಂಗಣದಲ್ಲಿ ಆಡುತ್ತಿರುವ ಕಾರಣ, ಗೆದ್ದು ಟೂರ್ನಿಯಲ್ಲಿ ಶುಭಾರಂಭ ಕಾಣಲು ರಜತ್ ಪಾಟಿದಾರ್ ತಂಡ ಬಯಸುತ್ತಿದೆ.
ಕಳೆದ ಸೀಸನ್‌ನಂತೆ ಈ ಬಾರಿಯೂ ಆರ್‌ಸಿಬಿ ತಂಡದ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಇನಿಂಗ್ಸ್ ಆರಂಭಿಸಲಿದ್ದಾರೆ. ಎರಡು ಮತ್ತು ಮೂರನೇ ಕ್ರಮಾಂಕಗಳಲಿ ಕ್ರಮವಾಗಿ ದೇವದತ್ ಪಡಿಕ್ಕಲ್ ಮತ್ತು ನಾಯಕ ರಜತ್ ಪಾಟಿದಾರ್ ಆಡಲಿದ್ದಾರೆ. ಮ್ಯಾಚ್ ಫಿನಿಷರ್ ಪಾತ್ರವನ್ನು ಟಿಮ್ ಡೇವಿಡ್ ಮತ್ತು ರೊಮ್ಯಾರಿಯೊ ಶೆಫರ್ಡ್ ನಿರ್ವಹಿಸಲಿದ್ದಾರೆ. ಇವರಿಗೆ ಕೃಣಾಲ್ ಪಾಂಡ್ಯ ಹಾಗೂ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಸಾಥ್ ನೀಡಲಿದ್ದಾರೆ.
IPL 2026: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಬೆಂಗಳೂರಿಗೆ ಆಗಮಿಸಿದ ಜಾಶ್ ಹೇಝಲ್‌ವುಡ್!
ಜಾಶ್ ಹೇಝಲ್‌ವುಡ್ ಸ್ಥಾನಕ್ಕೆ ಜಾಕೋಬ್ ಡಫಿ
ಕಳೆದ ಸೀಸನ್‌ನಲ್ಲಿ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದ ಆಸ್ಟ್ರೇಲಿಯಾ ಹಿರಿಯ ವೇಗಿ ಜಾಶ್ ಹೇಝಲ್‌ವುಡ್ ಗುರುವಾರ ಬೆಂಗಳೂರಿಗೆ ಆಗಮಿಸಿದ್ದರು. ಆದರೆ, ಅವರು ಸಂಪೂರ್ಣ ಮ್ಯಾಚ್ ಫಿಟ್‌ನೆಸ್ ಬಗ್ಗೆ ಇನ್ನೂ ಕಾಳಜಿ ಇದೆ. ತಂಡದ ಮೆಡಿಕಲ್ ಟೀಮ್ ಅವರ ಫಿಟ್‌ನೆಸ್ ಪರಿಶೀಲಿಸಿ, ನಂತರ ಆಸೀಸ್ ವೇಗಿಯ ಲಭ್ಯತೆಯ ಬಗ್ಗೆ ನಿರ್ಧರಿಸಲಾಗುತ್ತದೆ. ಹಾಗಾಗಿ ಅವರು ಮೊದಲನೇ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಅನುಮಾನ, ಹಾಗಾಗಿ ಭುವನೇಶ್ವರ್ ಕುಮಾರ್ ಅವರ ಜೊತೆಗೆ ಜಾಕೋಬ್ ಡಫಿ ಅವರನ್ನು ಆಡಿಸಬಹುದು.
ಕಮ್‌ಬ್ಯಾಕ್ ಮಾಡಲು ಎಸ್‌ಆರ್‌ಎಚ್ ಸಜ್ಜು
ಮತ್ತೊಂದೆಡೆ ಎದುರಾಳಿ ಸನ್‌ರೈಸರ್ಸ್ ಹೈದರಾಬಾದ್ ತಂಡ, ಕಳೆದ ಆವೃತ್ತಿಯಲ್ಲಿ ಅಷ್ಟೊಂದು ಉತ್ತಮ ಪ್ರದರ್ಶನವನ್ನು ತೋರಿರಲಿಲ್ಲ. ಅಂಕಪಟ್ಟಿಯಲ್ಲಿ 6ನೇ ಸ್ಥಾನದ ಮೂಲಕ ಟೂರ್ನಿಯ ಅಭಿಯಾನವನ್ನು ಮುಗಿಸಿತ್ತು. ಅಪಾಯಕಾರಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಮತ್ತೊಮ್ಮೆ ಆಕ್ರಮಣಕಾರಿ ಆಟವನ್ನು ಆಡಲು ಎದುರು ನೋಡುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಹಾಗೂ ಹೆನ್ರಿಚ್ ಕ್ಲಾಸೆನ್ ಅವರು ತಂಡಕ್ಕೆ ಆಸರೆಯಾಗಲಿದ್ದಾರೆ. ಎರಡೂ ತಂಡಗಳನ್ನು ನೋಡಿದಾಗ, ಬಲಾಬಲ ಸಮವಾಗಿದೆ. ಹಾಗಾಗಿ ಟೂರ್ನಿಯ ಆರಂಭಿಕ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿದೆ.
IPL 2026: ಎಸ್‌ಆರ್‌ಎಚ್‌ಗೆ ಆಘಾತ, ಟೂರ್ನಿಯ ಎರಡನೇ ಅವಧಿಗೆ ಆಗಮಿಸಲಿರುವ ಪ್ಯಾಟ್ ಕಮಿನ್ಸ್!
ಬೆಂಗಳೂರು ಪಿಚ್ ರಿಪೋರ್ಟ್
ಉದ್ಘಾಟನಾ ಪಂದ್ಯ ನಡೆಯುವ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿದೆ. ಇಲ್ಲಿನ ಪಿಚ್ ಫ್ಲ್ಯಾಟ್ ಹಾಗೂ ಬೌಂಡರಿಗಳು ಕಿರಿದಾಗಿರುವ ಕಾರಣ, ಬ್ಯಾಟ್ಸ್‌ಮನ್ ತನ್ನ ಪ್ರಾಬಲ್ಯವನ್ನ ಸಾಧಿಸಬಹುದು. ಹಾಗಾಗಿ ವೇಗದ ಬೌಲರ್‌ಗಳು ಪಿಚ್‌ನಲ್ಲಿ ಸ್ವಲ್ಪ ಬುದ್ದಿವಂತಿಕೆಯಿಂದ ಬೌಲ್ ಮಾಡಬೇಕಾಗಿದೆ ಹಾಗೂ ಸ್ಪಿನ್ನರ್‌ಗಳು ಕೂಡ ಚೆಂಡು ಹಾಗೂ ತಿರುವಿನ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸಬೇಕಾಗಿದೆ. ಅಂದ ಹಾಗೆ ಈ ಪಂದ್ಯದಲ್ಲಿ ಹೈಸ್ಕೋರಿಂಗ್ ನಿರೀಕ್ಷೆ ಮಾಡಲಾಗಿದ್ದು, ಟಾಸ್ ಗೆದ್ದ ತಂಡದ ನಾಯಕ ಚೇಸಿಂಗ್ ಆಯ್ಕೆ ಮಾಡಿಕೊಳ್ಳಬಹುದು.
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 25
ಆರ್‌ಸಿಬಿ ಗೆಲುವು: 11
ಎಸ್‌ಆರ್‌ಎಚ್ ಗೆಲುವು: 13
ಫಲಿತಾಂಶವಿಲ್ಲ: 01
IPL 2026: ಆರ್‌ಸಿಬಿ ಪರ ಆಡಲಿರುವ ಟ್ರಕ್ ಡ್ರೈವರ್ ಪುತ್ರ ಮಂಗೇಶ್ ಯಾದವ್ ಜೀವನ ಕಥೆ!
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮ್ಯಾರಿಯೊ ಶೆಫರ್ಡ್, ಭುವನೇಶ್ವರ್ ಕುಮಾರ್, ಸುಯಶ್ ಶರ್ಮಾ, ಜಾಕೋಬ್ ಡಫಿ
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ), ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಲಿಯಾಮ್ ಲಿವಿಂಗ್‌ಸ್ಟೋನ್, ಹರ್ಷಲ್ ಪಟೇಲ್, ಜಯದೇವ್ ಉನಾದ್ಕಟ್, ಬ್ರೈಡನ್ ಕಾರ್ಸ್, ಶಿವಂ ಮಾವಿ
The Myth. The Legend. The 𝗛𝗮𝘇𝗹𝗲𝗚𝗢𝗗. 🙇♂️
— Royal Challengers Bengaluru (@RCBTweets) March 26, 2026
Back in Red, Blue, and Gold. Back to BLR. Just where he truly belongs. 🏠🔥
Bengaluru, our ⭐️ has returned. ❤️🔥#PlayBold #ನಮ್ಮRCB #IPL2026 pic.twitter.com/hgoBrGboJq
ಪಂದ್ಯದ ವಿವರ
2026 ಐಪಿಎಲ್
ಮೊದಲನೇ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಸನ್‌ರೈಸರ್ಸ್ ಹೈದರಾಬಾದ್
ದಿನಾಂಕ: ಮಾರ್ಚ್ 28, 2026
ಸಮಯ: ಸಂಜೆ 07:30 ಕ್ಕೆ
ಸ್ಥಳ: ಎಂ ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ ಸ್ಟ್ರೀಮಿಂಗ್: ಜಿಯೊ ಸಿನಿಮಾ ಹಾಟ್‌ಸ್ಟಾರ್