ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Syed Mushtaq Ali Trophy: 29 ಎಸೆತಗಳಲ್ಲಿ 82 ರನ್‌ ಸಿಡಿಸಿದ ಸೂರ್ಯಕುಮಾರ್‌ ಯಾದವ್‌!

SMAT 2026: ಕೋಲ್ಕತಾದಲ್ಲಿ ಗುಜರಾತ್‌ ವಿರುದ್ಧ ನಡೆದಿದ್ದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಮುಂಬೈ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಅವರು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಆಡಿದ 29 ಎಸೆತಗಳಲ್ಲಿ 82 ರನ್‌ಗಳನ್ನು ಸಿಡಿಸಿದ್ದಾರೆ.

29 ಎಸೆತಗಳಲ್ಲಿ 82 ರನ್‌ ಬಾರಿಸಿದ ಸೂರ್ಯಕುಮಾರ್‌ ಯಾದವ್!

ಗುಜರಾತ್‌ ಎದುರು ಸ್ಪೋಟಕ ಅರ್ಧಶತಕ ಬಾರಿಸಿದ ಸೂರ್ಯಕುಮಾರ್‌ ಯಾದವ್‌. -

Profile
Ramesh Kote Nov 16, 2026 7:28 PM

ನವದೆಹಲಿ: ಭಾರತ ಟಿ20ಐ ತಂಡದ ಯೋಜನೆಗಳಿಂದ ಹೊರಬಿದ್ದ ಬಳಿಕ ಸೂರ್ಯಕುಮಾರ್‌ ಯಾದವ್‌ (Suryakuma Yadav) ಅವರು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ (SMAT 2026) ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅವರು ಗುಜರಾತ್‌ ತಂಡದ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರು ಕೇವಲ 29 ಎಸೆತಗಳಲ್ಲಿ 82 ರನ್‌ಗಳನ್ನು ಸಿಡಿಸಿದರು. ಇವರ ಬ್ಯಾಟಿಂಗ್‌ ಬಲದಿಂದ ಮುಂಬೈ ತಂಡ 198 ರನ್‌ಗಳ ಗುರಿಯನ್ನು ಚೇಸ್‌ ಮಾಡಿತು.

ಮುಂಬೈ ತಂಡ, ಕೋಲ್ಕತಾದ ಜಾದವ್‌ಪುರ ವಿಶ್ವವಿದ್ಯಾಲಯ ಕ್ಯಾಂಪಸ್ ಮೈದಾನದಲ್ಲಿ ಗುಜರಾತ್ ವಿರುದ್ಧ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. 198 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಕೇವಲ 15.4 ಓವರ್‌ಗಳಲ್ಲಿ ಜಯದ ಗುರಿ ತಲುಪಿತು. ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಸೂರ್ಯಕುಮಾರ್ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಂಬತ್ತು ಬೌಂಡರಿ ಹಾಗೂ ಏಳು ಸಿಕ್ಸರ್‌ಗಳ ನೆರವಿನಿಂದ 82 ರನ್ ಗಳಿಸಿ ಮಿಂಚಿದರು. ಈ ಟೂರ್ನಿಯಲ್ಲಿ ಆಡಿದ ಮೊದಲ ಎರಡು ಪಂದ್ಯಗಳಿಂದಲೇ ಅವರು 50 ಎಸೆತಗಳಲ್ಲಿ ಒಟ್ಟು 142 ರನ್ ಕಲೆಹಾಕಿದ್ದಾರೆ.

IND vs NZ: ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಭಾರತದ ಪ್ಲೇಯಿಂಗ್‌ XI ಆರಿಸಿದ ದೊಡ್ಡ ಗಣೇಶ್‌!

18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸೂರ್ಯ

ಮುಂಬೈ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಆರಂಭದಲ್ಲಿ ಕೆಲವು ಎಸೆತಗಳನ್ನು ಎದುರಿಸಿ ನಂತರ ಅಬ್ಬರದ ಬ್ಯಾಟಿಂಗ್ ಆರಂಭಿಸಿದರು. ಮೂರನೇ ಓವರ್‌ನಲ್ಲಿ ವಿಶಾಲ್ ಜೈಸ್ವಾಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸಿ ತಮ್ಮ ಆಕ್ರಮಣ ಆರಂಭಿಸಿದರು. ನಾಲ್ಕನೇ ಓವರ್‌ನಲ್ಲಿ ಅರ್ಝನ್ ನಾಗ್ವಾಸ್ವಾಲಾ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದರು.

ಹರ್ಷಲ್ ಪಟೇಲ್, ಹೇಮಂಗ್ ಪಟೇಲ್ ಮತ್ತು ರವಿ ಬಿಷ್ಣೋಯ್ ಅವರ ಬೌಲಿಂಗ್‌ನಲ್ಲೂ ಸೂರ್ಯಕುಮಾರ್ ರನ್ ಮಳೆ ಸುರಿಸಿದರು. ಕೇವಲ 15 ಎಸೆತಗಳಲ್ಲಿ 37 ರನ್ ಗಳಿಸಿದ್ದ ಅವರು, ಹೇಮಂಗ್ ಪಟೇಲ್ ಬೌಲಿಂಗ್‌ನಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ 18 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು.

ಭಾರತ ಅಂಡರ್‌-19 ಏಷ್ಯಾ ಕಪ್‌ ಗೆದ್ದರೂ ಪಾಕಿಸ್ತಾನ ಬಲಿಷ್ಠ ತಂಡ ಎಂದ ಶೋಯೆಬ್‌ ಅಖ್ತರ್‌!

ಬಳಿಕವೂ ಅವರ ಅಬ್ಬರ ಮುಂದುವರಿಯಿತು. ರವಿ ಬಿಷ್ಣೋಯ್ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿದ ಸೂರ್ಯ, ನಾಗ್ವಾಸ್ವಾಲಾ ವಿರುದ್ಧ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ 26 ಎಸೆತಗಳಲ್ಲಿ 76 ರನ್ ಗಳಿಸಿದರು. ಅಂತಿಮವಾಗಿ 11ನೇ ಓವರ್‌ನಲ್ಲಿ ರವಿ ಬಿಷ್ಣೋಯ್, ಸೂರ್ಯಕುಮಾರ್ ಅವರನ್ನು ಬೌಲ್ಡ್ ಮಾಡಿದರು. ಅವರು 82 ರನ್‌ಗಳಿಗೆ ವಿಕೆಟ್ ಒಪ್ಪಿಸಿದರೂ, ಅಷ್ಟರಲ್ಲಾಗಲೇ ಮುಂಬೈ ಗೆಲುವಿನ ಹಾದಿಯಲ್ಲಿತ್ತು. ಸರ್ಫರಾಜ್ ಖಾನ್ ಅಜೇಯ 17 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು.

ಗುಜರಾತ್ 197 ರನ್‌ಗಳ ಸ್ಪರ್ಧಾತ್ಮಕ ಮೊತ್ತ

ಇದಕ್ಕೂ ಮೊದಲು ಬ್ಯಾಟ್‌ ಮಾಡಿದ ಗುಜರಾತ್ ತಂಡ, ನಿಗದಿತ 20 ಓವರ್‌ಗಳಲ್ಲಿ 197 ರನ್ ಗಳಿಸಿತ್ತು. ಕೊನೆಯ ಹಂತದಲ್ಲಿ ಆಶುತೋಷ್ ಶರ್ಮಾ ಮತ್ತು ವಿಶಾಲ್ ಜೈಸ್ವಾಲ್ ಅವರ ಸ್ಫೋಟಕ ಆಟ ತಂಡಕ್ಕೆ ನೆರವಾಯಿತು.

ʻಕೋಪದಿಂದ ವಿದಾಯ ಹೇಳುವುದು ಸರಿಯಿಲ್ಲʼ: ವಿರಾಟ್‌ ಕೊಹ್ಲಿ ದೊಡ್ಡ ತಪ್ಪು ಮಾಡಿದ್ದಾರೆಂದ ಕಪಿಲ್‌ ದೇವ್‌!

ಆಶುತೋಷ್ ಶರ್ಮಾ 22 ಎಸೆತಗಳಲ್ಲಿ 42 ರನ್ ಗಳಿಸಿದರೆ, ವಿಶಾಲ್ ಜೈಸ್ವಾಲ್ 21 ಎಸೆತಗಳಲ್ಲಿ 38 ರನ್ ಸಿಡಿಸಿದರು. ಆ ಮೂಲಕ ಗುಜರಾತ್ 200ರ ಸಮೀಪದ ಮೊತ್ತ ಕಲೆಹಾಕಿತು. ಆದರೆ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್ ಮುಂದೆ ಗುಜರಾತ್ ಬೌಲರ್‌ಗಳ ಪ್ರಯತ್ನ ವ್ಯರ್ಥವಾಯಿತು.