ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿರಾಟ್ ಕೊಹ್ಲಿ ಜೊತೆಗಿನ ಸ್ನೇಹವೇ ನನ್ನ ಜೀವನದ ದುಬಾರಿ ಸಂಬಂಧ: ಫಾಫ್ ಡು ಪ್ಲೆಸಿಸ್!

ವಿರಾಟ್ ಕೊಹ್ಲಿ ಜೊತೆಗಿನ ಸ್ನೇಹವನ್ನು ತಮ್ಮ ಜೀವನದ ಅತ್ಯಂತ ದುಬಾರಿ ಸಂಬಂಧವೆಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಬಣ್ಣಿಸಿದ್ದಾರೆ. ಕೊಹ್ಲಿ ಪ್ರೇರಣೆಯಿಂದ ಐಷಾರಾಮಿ ವಾಚ್‌ಗಳ ಖರೀದಿಯ ಹವ್ಯಾಸ ಬೆಳೆದಿದೆ ಎಂದು ಅವರು ತಮಾಷೆಯಾಗಿ ಬಹಿರಂಗಪಡಿಸಿದ್ದಾರೆ.

ವಿರಾಟ್‌ ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಫಾಫ್‌ ಡು ಪ್ಲೆಸಿಸ್‌!

ವಿರಾಟ್‌ ಕೊಹ್ಲಿ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಫಾಫ್‌ ಡು ಪ್ಲೆಸಿಸ್‌. -

Profile
Ramesh Kote Nov 16, 2026 8:12 PM

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಅವರು ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಜೊತೆಗಿನ ಸ್ನೇಹದ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೊಹ್ಲಿ ಅವರಿಂದಾಗಿ ತಮಗೆ ದುಬಾರಿ ವಾಚ್‌ಗಳ ಮೇಲೆ ವ್ಯಾಮೋಹ ಬೆಳೆದಿದೆ ಎಂದು ಹೇಳಿರುವ ಡು ಪ್ಲೆಸಿಸ್, ಈ ಸ್ನೇಹವನ್ನು ತಮ್ಮ ಜೀವನದ ಅತ್ಯಂತ ದುಬಾರಿ ಸಂಬಂಧ ಎಂದು ಬಣ್ಣಿಸಿದ್ದಾರೆ.

2022ರ ಐಪಿಎಲ್ ಟೂರ್ನಿಗೂ ಮುನ್ನ ಡು ಪ್ಲೆಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಸೇರಿಕೊಂಡಿದ್ದರು. ಆಗ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಡು ಪ್ಲೆಸಿಸ್ ತಂಡದ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಅವರೊಂದಿಗೆ ಉತ್ತಮ ಸ್ನೇಹ ಬೆಳೆದಿತ್ತು.

ʻಕೋಪದಿಂದ ವಿದಾಯ ಹೇಳುವುದು ಸರಿಯಿಲ್ಲʼ: ವಿರಾಟ್‌ ಕೊಹ್ಲಿ ದೊಡ್ಡ ತಪ್ಪು ಮಾಡಿದ್ದಾರೆಂದ ಕಪಿಲ್‌ ದೇವ್‌!

ದುಬಾರಿ ವಾಚ್‌ಗಳ ಖರೀದಿಗೆ ಕೊಹ್ಲಿಯೇ ಕಾರಣ!

ಕ್ರಿಕ್‌ಇನ್ಫೋ ಕಾರ್ಯಕ್ರಮದಲ್ಲಿ ಮಾತನಾಡಿದ ಡು ಪ್ಲೆಸಿಸ್, ಕೊಹ್ಲಿ ತಮ್ಮನ್ನು ಐಷಾರಾಮಿ ವಾಚ್‌ಗಳ ಜಗತ್ತಿಗೆ ಪರಿಚಯಿಸಿದರು ಎಂದು ಹೇಳಿದ್ದಾರೆ.

“ನಾನು ಅವರಿಗೂ ಈ ಮಾತನ್ನು ಹೇಳಿದ್ದೇನೆ, ಸಾರ್ವಜನಿಕವಾಗಿಯೂ ಹೇಳಿದ್ದೇನೆ. ನನ್ನ ಜೀವನದ ಅತ್ಯಂತ ದುಬಾರಿ ಸಂಬಂಧ ಅವರೊಂದಿಗಿನ ಸ್ನೇಹ. ಏಕೆಂದರೆ ನಾನು ಎಂದಿಗೂ ಖರೀದಿಸಬಾರದಿದ್ದ ದುಬಾರಿ ವಾಚ್‌ಗಳನ್ನು ಅವರು ನನ್ನಿಂದ ಖರೀದಿಸುವಂತೆ ಮಾಡಿದ್ದಾರೆ,” ಎಂದು ಡು ಪ್ಲೆಸಿಸ್ ತಮಾಷೆಯಾಗಿ ತಿಳಿಸಿದ್ದಾರೆ.

“ಮೂರು ವರ್ಷಗಳ ನಂತರ ನಾನು ದೊಡ್ಡ ವಾಚ್ ಪ್ರೇಮಿಯಾಗಿದ್ದೇನೆ. ಈಗ ಎಲ್ಲರೂ ಇಷ್ಟೊಂದು ಹಣವನ್ನು ವಾಚ್‌ಗಳಿಗಾಗಿ ಹೇಗೆ ಖರ್ಚು ಮಾಡುತ್ತೀರಿ ಎಂದು ನನ್ನನ್ನು ಕೇಳುತ್ತಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.

ಭಾರತ ಅಂಡರ್‌-19 ಏಷ್ಯಾ ಕಪ್‌ ಗೆದ್ದರೂ ಪಾಕಿಸ್ತಾನ ಬಲಿಷ್ಠ ತಂಡ ಎಂದ ಶೋಯೆಬ್‌ ಅಖ್ತರ್‌!

ನಾಯಕತ್ವ ಬದಲಾವಣೆಯ ವೇಳೆ ಕೊಹ್ಲಿ ಬೆಂಬಲ

ಆರ್‌ಸಿಬಿ ನಾಯಕತ್ವ ಬದಲಾವಣೆಯ ಸಂದರ್ಭದಲ್ಲೂ ಕೊಹ್ಲಿ ತಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು ಎಂದು ಡು ಪ್ಲೆಸಿಸ್ ನೆನಪಿಸಿಕೊಂಡಿದ್ದಾರೆ. ತಂಡದ ನಾಯಕತ್ವ ವಹಿಸಿಕೊಳ್ಳುವ ಬಗ್ಗೆ ಆರಂಭದಲ್ಲಿ ಸ್ವಲ್ಪ ಹಿಂಜರಿಕೆ ಇದ್ದರೂ, ಕೊಹ್ಲಿಯಿಂದ ಬಂದ ಸಂದೇಶ ಆ ಆತಂಕವನ್ನು ದೂರ ಮಾಡಿತು ಎಂದು ಹೇಳಿದ್ದಾರೆ.

“ವಿರಾಟ್ ನನಗೆ ಸಂದೇಶ ಕಳುಹಿಸಿ, ನನ್ನ ಸ್ಥಾನವನ್ನು ವಹಿಸಿಕೊಳ್ಳಲು ನಿಮಗಿಂತ ಉತ್ತಮ ನಾಯಕ ಸಿಗಲು ಸಾಧ್ಯವಿಲ್ಲ. ನೀವು ತಂಡಕ್ಕೆ ಬರುವುದನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು,” ಎಂದು ಡು ಪ್ಲೆಸಿಸ್ ತಿಳಿಸಿದ್ದಾರೆ.



ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಡೇಲ್ ಸ್ಟೇನ್ ಜೊತೆಗಿನ ಕ್ರಿಕ್‌ಇನ್ಫೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಹ್ಲಿ ನೀಡಿದ ಬೆಂಬಲದಿಂದ ಆರ್‌ಸಿಬಿ ತಂಡಕ್ಕೆ ನಾಯಕನಾಗಿ ಪ್ರವೇಶಿಸುವಾಗ ಆತ್ಮವಿಶ್ವಾಸ ಹೆಚ್ಚಾಯಿತು ಎಂದಿದ್ದಾರೆ.

“ಆರಂಭದಿಂದಲೂ ಪರಸ್ಪರ ಗೌರವವಿತ್ತು. ಆದರೆ ಅವರ ಸ್ವಾಗತದಿಂದ ನಾನು ತಕ್ಷಣವೇ ಆ ಜವಾಬ್ದಾರಿಗೆ ಒಪ್ಪಿಗೆಯಾದ ಭಾವನೆ ಹೊಂದಿದೆ. ಅವರ ಬೆಂಬಲದಿಂದ ನನ್ನ ಅನುಭವ ಮತ್ತು ನಾಯಕತ್ವದ ಸಾಮರ್ಥ್ಯದ ಮೇಲೆ ಮತ್ತಷ್ಟು ನಂಬಿಕೆ ಮೂಡಿತು,” ಎಂದು ಡು ಪ್ಲೆಸಿಸ್ ಹೇಳಿದ್ದಾರೆ.