ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಜೈಸ್ವಾಲ್‌, ವೈಭವ್‌ ಜೋಡಿಯ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಯಶಸ್ವಿ ಜೈಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಅವರನ್ನು ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಇಬ್ಬರೂ ಸ್ಪೋಟಕ ಬ್ಯಾಟ್ಸ್‌ಮನ್‌ಗಳಾಗಿದ್ದರಿಂದ ಈ ಬಾರಿ ಟೂರ್ನಿಯಲ್ಲಿ ಹೇಗೆ ಆಡಲಿದ್ದಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ.

ಜೈಸ್ವಾಲ್‌-ವೈಭವ್‌ ಜೋಡಿಯ ಬಗ್ಗೆ ಇರ್ಫಾನ್‌ ಪಠಾಣ್‌ ದೊಡ್ಡ ಹೇಳಿಕೆ!

ಜೈಸ್ವಾಲ್‌-ವೈಭವ್‌ಗೆ ಪಠಾಣ್‌ ಮೆಚ್ಚುಗೆ. -

Profile
Ramesh Kote Mar 24, 2026 5:08 PM

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ (Irfan Pathan) ಅವರು ರಾಜಸ್ಥಾನ್‌ ರಾಯಲ್ಸ್‌ (Rajasthan Royals) ತಂಡದ ಸ್ಫೋಟಕ ಓಪನರ್‌ಗಳಾದ ಯಶಸ್ವಿ ಜೈಸ್ವಾಲ್‌ (Yashasvi Jaiswal) ಮತ್ತು ವೈಭವ್‌ ಸೂರ್ಯವಂಶಿ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಈ ಜೋಡಿಯನ್ನು ಮೊದಲ ಬಾರಿ 2025ರ ಟೂರ್ನಿಯ ಮಧ್ಯಭಾಗದಲ್ಲಿ ಒಟ್ಟಿಗೆ ಆಡಿಸಲಾಗಿತ್ತು. ರಾಜಸ್ಥಾನ್‌ ರಾಯಲ್ಸ್‌ ತಂಡ, ಬಹುಕಾಲದಿಂದ ಯುವ ಪ್ರತಿಭೆಗಳಿಗೆ ಬೆಂಬಲ ನೀಡುವ ಫ್ರಾಂಚೈಸಿಯಾಗಿ ಗುರುತಿಸಿಕೊಂಡಿದೆ. ಜೈಸ್ವಾಲ್ ಅವರು ಒಂದೇ ಒಂದು ಟಿ20 ಪಂದ್ಯವೂ ಆಡದೆ 2.4 ಕೋಟಿ ರು.ಗೆ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಅವರು ಭಾರತ ತಂಡದ ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಪ್ರಮುಖ ಆಟಗಾರರಾಗಿ ಬೆಳೆದಿದ್ದಾರೆ. 2008ರ ಚಾಂಪಿಯನ್ಸ್‌ ರಾಜಸ್ಥಾನ್, 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ವೈಭವ್‌ ಸೂರ್ಯವಂಶಿಯನ್ನು 1.1 ಕೋಟಿ ರು.ಗೆ ಖರೀದಿಸುವ ಮೂಲಕ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿತ್ತು.

ಆ ಸಮಯದಲ್ಲಿ ಕೇವಲ 13 ವರ್ಷ ವಯಸ್ಸಿನ ವೈಭವ್‌ ಸೂರ್ಯವಂಶಿ ಐಪಿಎಲ್‌ ಟೂರ್ನಿಯಲ್ಲಿ ಆಡಿದ ಅತಿ ಕಿರಿಯ ಆಟಗಾರನಾಗಿ ದಾಖಲೆ ಬರೆದಿದ್ದರು ಮತ್ತು ತಮ್ಮ ಮೊದಲ ಸೀಸನ್‌ನಲ್ಲೇ ಗಮನಾರ್ಹ ಪ್ರದರ್ಶನ ನೀಡಿದ್ದರು. 2025ರ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್‌ ತಂಡ ಒಂಬತ್ತನೇ ಸ್ಥಾನದಲ್ಲಿ ಮುಗಿಸಿದ ಹಿನ್ನೆಲೆಯಲ್ಲಿ, 2026ರ ಐಪಿಎಲ್ ತಂಡವನ್ನು ಮರುಜೀವಂತಗೊಳಿಸುವಲ್ಲಿ ಈ ಜೋಡಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆ ಇದೆ.

IPL 2026: ʻಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಿಸಿದ್ರೆ ನಿವೃತ್ತಿ ಹೇಳಿʼ-ಎಂಎಸ್‌ ಧೋನಿಗೆ ಆಕಾಶ್‌ ಚೋಪ್ರಾ ಸಲಹೆ!

“ರಾಜಸ್ಥಾನ್‌ ರಾಯಲ್ಸ್‌ ತಂಡದ ಮುಖ ಯಾರು? ನಿಮ್ಮ ಕಣ್ಣು ಮೊದಲಿಗೆ ಯಶಸ್ವಿ ಜೈಸ್ವಾಲ್‌ ಮತ್ತು ವೈಭವ್‌ ಸೂರ್ಯವಂಶಿ ಕಡೆ ಹೋಗುತ್ತದೆ. ಈ ಇಬ್ಬರು ಆಟಗಾರರು ತಮ್ಮ ವೃತ್ತಿಜೀವನವನ್ನು ಮುಂದಕ್ಕೆ ತೆಗೆದುಕೊಂಡಿರುವ ರೀತಿ ಶ್ಲಾಘನೀಯವಾಗಿದೆ.ನೀವು ಯುವಕರಾಗಿದ್ದಾಗ ಅನುಭವದ ಕೊರತೆ ಇರುತ್ತದೆ. ಕೆಲವೊಮ್ಮೆ ದೊಡ್ಡ ಆಟಗಾರರ ಎದುರು ಬಂದಾಗ ಹಿಂಜರಿತ ಕಾಣಬಹುದು. ಆದರೆ ಸುರ್ಯವಂಶಿ ಅವರಲ್ಲಿ ಇದು ಕಂಡುಬಂದಿಲ್ಲ. ಅವರು ವಯಸ್ಸಿನ ಅಂಶವನ್ನು ಬೇಗನೆ ಕಡೆಗಣಿಸಿ, ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಇಬ್ಬರ ಮೇಲೂ ದೊಡ್ಡ ಹೊಣೆಗಾರಿಕೆ ಇದೆ. ಕಡಿಮೆ ಅವಧಿಯಲ್ಲೇ ಅವರು ರಾಜಸ್ಥಾನ್ ತಂಡದ ಪ್ರಮುಖ ಆಟಗಾರರಾಗಿ ಹೊರಹೊಮ್ಮಿದ್ದಾರೆ,” ಎಂದು ಇರ್ಫಾನ್‌ ಪಠಾಣ್‌ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಇರ್ಫಾನ್‌ ಪಠಾಣ್‌ ಅವರು ರಾಜಸ್ಥಾನ್‌ ರಾಯಲ್ಸ್‌ ತಂಡದ ಬಲವಾದ ಭಾರತೀಯ ಆಟಗಾರರ ಗುಂಪನ್ನು ಗುಣಗಾಣ ಮಾಡಿದ್ದಾರೆ. ಆಲ್‌ರೌಂಡರ್ ರವೀಂದ್ರ ಜಡೇಜಾ ಸೇರ್ಪಡೆಯಿಂದ ಈ ತಂಡ ಇನ್ನಷ್ಟು ಬಲಿಷ್ಠವಾಗಿದೆ. ಫ್ರಾಂಚೈಸಿ ನಿರಂತರವಾಗಿ ಧ್ರುವ್‌ ಜುರೆಲ್‌, ರಿಯಾನ್‌ ಮತ್ತು ಯಶಸ್ವಿ ಜೈಸ್ವಾಲ್‌ ಅವರನ್ನು ಉಳಿಸಿಕೊಂಡು, ತನ್ನ ಬಲಿಷ್ಠ ಭಾರತೀಯ ಆಟಗಾರರನ್ನು ಕಟ್ಟಿಕೊಂಡಿದೆ.

IPL 2026: ಕಾಲ್ತುಳಿದಲ್ಲಿ ಮೃತರಾದವರಿಗೆ ಗೌರವಾರ್ಥವಾಗಿ 11 ಆಸನಗಳನ್ನು ಕಾಯ್ದಿರಿಸಿದ ಆರ್‌ಸಿಬಿ!

“ಈ ತಂಡವನ್ನು ನೋಡಿದಾಗ ಸ್ಪಷ್ಟವಾದ ಭಾರತೀಯ ಆಟಗಾರರು ಕಾಣಿಸುತ್ತಾರೆ. ಅಲ್ಲಿ ಅನುಭವ ಮತ್ತು ಅನಾನುಭವದ ಒಳ್ಳೆಯ ಸಂಯೋಜನೆ ಇದೆ. ಯಶಸ್ವಿ ಜೈಸ್ವಾಲ್ ಬಗ್ಗೆ ಮಾತನಾಡಿದರೆ, ಅವರು ತಮ್ಮೊಂದಿಗೆ ಅನುಭವವನ್ನು ತರುತ್ತಾರೆ. ರಿಯಾನ್ ಪರಾಗ್ ಕೂಡ ಹಲವು ವರ್ಷಗಳಿಂದ ಆಡುತ್ತಿದ್ದಾರೆ ಮತ್ತು ಈಗ ಅವರು ನಾಯಕತ್ವ ವಹಿಸಲಿದ್ದಾರೆ. ಧ್ರುವ್ ಜುರೇಲ್ ಕೂಡ ಈಗ ಅನುಭವ ಹೊಂದಿದ್ದಾರೆ. ರವೀಂದ್ರ ಜಡೇಜಾ ಅವರ ಸೇರ್ಪಡೆದಿಂದ ಭಾರತೀಯ ಕೋರ್‌ಗೆ ಹೆಚ್ಚಿನ ಅನುಭವ ಸೇರ್ಪಡೆಯಾಗಿದೆ,” ಎಂದು ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.