ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶತಕ, 7 ವಿಕೆಟ್‌ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ವಿಯಾನ್ ಮುಲ್ಡರ್!

ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ವಿಯಾನ್ ಮುಲ್ಡರ್ ಶತಕ ಹಾಗೂ ಏಳು ವಿಕೆಟ್ ಪಡೆದು ಮಿಂಚಿದರು. ತಮ್ಮ ವೃತ್ತಿಜೀವನದಲ್ಲಿ ತ್ರಿಶತಕ ಸಿಡಿಸಿ ಏಳು ವಿಕೆಟ್‌ಗಳ ಗೊಂಚಲು ಪಡೆದ ಮೊದಲ ಆಟಗಾರ ಎಂಬ ಅಪರೂಪದ ದಾಖಲೆಗೆ ಪಾತ್ರರಾದರು. ದಕ್ಷಿಣ ಆಫ್ರಿಕಾ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿತು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ವಿಯಾನ್‌ ಮುಲ್ಡರ್‌!

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದ ವಿಯಾನ್‌ ಮುಲ್ಡರ್‌. -

Profile
Ramesh Kote Nov 25, 2026 11:18 PM

ಸೆಂಚುರಿಯನ್: ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವಿಯಾನ್ ಮುಲ್ಡರ್ ಟೆಸ್ಟ್ ಕ್ರಿಕೆಟ್‌ನ 149 ವರ್ಷಗಳ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಮೋಘ ಆಲ್‌ರೌಂಡ್ ಪ್ರದರ್ಶನ ನೀಡಿದ ಅವರು, ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಹಾಗೂ ಇನ್ನೊಂದು ಪಂದ್ಯದಲ್ಲಿ ಏಳು ವಿಕೆಟ್‌ಗಳ ಗೊಂಚಲು ಪಡೆದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ದಕ್ಷಿಣ ಆಫ್ರಿಕಾ 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಈ ಗೆಲುವಿನೊಂದಿಗೆ 2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ಮಹತ್ವದ ಹೆಜ್ಜೆಯಿಟ್ಟಿದೆ.

ವೈಭವ್‌ ಸೂರ್ಯವಂಶಿ ದ್ವಿಶತಕ ಬಾರಿಸಿದರೂ ಕಳವಳ ವ್ಯಕ್ತಪಡಿಸಿದ ಸಂಜಯ್‌ ಮಾಂಜ್ರೇಕರ್‌!

ಬ್ಯಾಟಿಂಗ್‌ನಲ್ಲಿ ಶತಕ, ಬೌಲಿಂಗ್‌ನಲ್ಲಿ 7 ವಿಕೆಟ್

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮುಲ್ಡರ್ 178 ಎಸೆತಗಳಲ್ಲಿ 100 ರನ್ ಗಳಿಸಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ವೃತ್ತಿಜೀವನದ ಐದನೇ ಶತಕವಾಗಿದೆ. ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ ಬಳಿಕ ಬೌಲಿಂಗ್‌ನಲ್ಲೂ ಮಿಂಚಿದ ಮುಲ್ಡರ್, 11 ಓವರ್‌ಗಳಲ್ಲಿ ಕೇವಲ 31 ರನ್ ನೀಡಿ ಏಳು ವಿಕೆಟ್ ಕಬಳಿಸಿದರು. ಅವರ ಈ ಅದ್ಭುತ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ಇನಿಂಗ್ಸ್ ಮತ್ತು 219 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ

ಕಳೆದ ವರ್ಷ ಜಿಂಬಾಬ್ವೆ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 400 ರನ್ ಗಳಿಸುವ ಅವಕಾಶ ಮುಲ್ಡರ್ ಮುಂದಿತ್ತು. ಆ ಮೂಲಕ ಬ್ರಿಯಾನ್ ಲಾರಾ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ 400 ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಳ್ಳಬಹುದಿತ್ತು. ಆದರೆ ಅವರು ಆ ಅವಕಾಶವನ್ನು ಬಳಸಿಕೊಳ್ಳದೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಆದರೂ ತಮ್ಮ ಹೆಸರನ್ನು ಕ್ರಿಕೆಟ್ ಇತಿಹಾಸದಲ್ಲಿ ದಾಖಲಿಸಿರುವ ಮುಲ್ಡರ್, ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿರುವುದರ ಜೊತೆಗೆ ಏಳು ವಿಕೆಟ್‌ಗಳ ಗೊಂಚಲು ಪಡೆದ ಮೊದಲ ಆಟಗಾರರಾಗಿದ್ದಾರೆ.

ʻವೈಭವ್‌ ಸೂರ್ಯವಂಶಿಯನ್ನು ಬೆಂಚ್‌ ಕಾಯಿಸಬೇಡಿʼ: ಗೌತಮ್‌ ಗಂಭೀರ್‌ಗೆ ಬಾಲ್ಯದ ಕೋಚ್‌ ಮನವಿ!

ಇದಕ್ಕೂ ಮೊದಲು ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿ ಏಳು ವಿಕೆಟ್ ಪಡೆದ ಒಂಬತ್ತು ಆಟಗಾರರಿದ್ದರು. ಡೆರೆಕ್ ಅಟ್ಕಿನ್ಸನ್, ಅಲಾನ್ ಬಾರ್ಡರ್, ಇಯಾನ್ ಬೋಥಮ್, ಜಾರ್ಜ್ ಫಾಲ್ಕ್ನರ್, ಜಾನ್ ಗಿಲ್ಲೆಸ್ಪಿ, ಮಾಧವ್ ಮಂಕಡ್, ಪೀಟರ್ ಮುಲ್ಡರ್, ಶಕಿಬ್ ಅಲ್ ಹಸನ್, ವಾಸಿಮ್ ಅಕ್ರಮ್ ಮತ್ತು ಫ್ರಾಂಕ್ ವೊರೆಲ್ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿದ್ದಾರೆ.

ಇನ್ನು ತಮ್ಮ ವೃತ್ತಿಜೀವನದಲ್ಲಿ ತ್ರಿಶತಕ ಸಿಡಿಸುವುದರ ಜೊತೆಗೆ ಆರು ವಿಕೆಟ್‌ಗಳ ಗೊಂಚಲು ಪಡೆದ ಇಬ್ಬರು ಆಟಗಾರರು ಮಾತ್ರ ಇದ್ದಾರೆ. ಮೈಕಲ್ ಕ್ಲಾರ್ಕ್ ಮತ್ತು ಗ್ಯಾರಿ ಸೋಬರ್ಸ್ ಈ ಸಾಧನೆ ಮಾಡಿದ್ದರು.‌

52 ಎಸೆತಗಳಲ್ಲಿ ದ್ವಿಶತಕ ಬಾರಿಸಿದ ವೈಭವ್‌ ಸೂರ್ಯವಂಶಿಗೆ ಯುವರಾಜ್‌ ಸಿಂಗ್‌ ವಿಶೇಷ ಸಂದೇಶ

ಶತಕ ಮತ್ತು ಏಳು ವಿಕೆಟ್ ಪಡೆದ ಐದನೇ ಆಟಗಾರ

ಏಕೈಕ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಏಳು ವಿಕೆಟ್‌ಗಳ ಗೊಂಚಲು ಪಡೆದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೂ ಮುಲ್ಡರ್ ಪಾತ್ರರಾಗಿದ್ದಾರೆ. 1980ರಲ್ಲಿ ಇಯಾನ್ ಬೋಥಮ್ ಬಳಿಕ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಇದಲ್ಲದೆ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಅಪರೂಪದ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನೂ ಮುಲ್ಡರ್ ತಮ್ಮದಾಗಿಸಿಕೊಂಡಿದ್ದಾರೆ.