ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

60 ವರ್ಷದ ಫಿಫಾ ವಿಶ್ವಕಪ್‌ ದಾಖಲೆ ಮುರಿದ ಇಂಗ್ಲೆಂಡ್‌ ನಾಯಕ ಹ್ಯಾರಿ ಕೇನ್

Harry Kane: 1966ರ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ಇಂಗ್ಲೆಂಡ್ ತಂಡ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ. ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ದಾಳಿಯ ರಭಸಕ್ಕೆ ಕ್ರೊಯೇಷಿಯಾ ಆಟಗಾರರಿಂದ ಪ್ರತಿರೋಧ ಕಂಡುಬರಲಿಲ್ಲ. ಹಾಗಿದ್ದರೂ 2 ಗೋಲು ಬಾರಿಸಿದರು.

60 ವರ್ಷದ ಫಿಫಾ ವಿಶ್ವಕಪ್‌ ದಾಖಲೆ ಮುರಿದ ಹ್ಯಾರಿ ಕೇನ್

Harry Kane -

Abhilash BC
Abhilash BC Jun 18, 2026 3:23 PM

ಡಲ್ಲಾಸ್, ಜೂ.18: ಬುಧವಾರ (ಜೂನ್ 17) ಆರ್ಲಿಂಗ್ಟನ್‌ನ ಡಲ್ಲಾಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ಕ್ರೊಯೇಷಿಯಾ ನಡುವಿನ 2026 ರ ಫಿಫಾ ವಿಶ್ವಕಪ್ ಪಂದ್ಯದ ಸಂದರ್ಭದಲ್ಲಿ ಹ್ಯಾರಿ ಕೇನ್ ಇತಿಹಾಸ ಸೃಷ್ಟಿಸಿದರು. ಪಂದ್ಯದಲ್ಲಿ ಎರಡು ಗೋಲು ಬಾರಿಸಿ ತಂಡಕ್ಕೆ ಗೆಲುವು ಮಾತ್ರವಲ್ಲದೆ 60 ವರ್ಷಗಳ ದಾಖಲೆಯೊಂದನ್ನು ಮುರಿದರು. ಕ್ರೊಯೇಷಿಯಾ ವಿರುದ್ಧ ಇಂಗ್ಲೆಂಡ್‌ 4-2 ಅಂತರದ ಗೆಲುವು ಸಾಧಿಸಿತು.

12ನೇ ನಿಮಿಷದಲ್ಲಿ ಪೆನಾಲ್ಟಿ ಸ್ಪಾಟ್‌ನಿಂದ ಗೋಲು ಗಳಿಸಿದ ಹ್ಯಾರಿ ಕೇನ್ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಆ ಬಳಿಕ 42 ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ವೃತ್ತಿಜೀವನದಲ್ಲಿ ಐದನೇ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಪೆನಾಲ್ಟಿ ಶೂಟೌಟ್ ಗೋಲು ಗಳಿಸುವ ಮೂಲಕ ಕೇನ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದರು. 2018ರ ಆವೃತ್ತಿಯಿಂದ ಫಿಫಾ ವಿಶ್ವಕಪ್‌ ಆಡುತ್ತಿರುವ ಅವರು ಈ ಕೂಟದಲ್ಲಿ ಅತ್ಯಧಿಕ ಪೆನಾಲ್ಟಿ ಗೋಲು ಬಾರಿಸಿದ ಆಟಗಾರ ಎನಿಸಿಕೊಂಡರು. ಇದೇ ವೇಳೆ 60 ವರ್ಷಗಳ ಕಾಲ ನಾಲ್ವರು ಆಟಗಾರರೊಂದಿಗೆ ಹಂಚಿಕೊಂಡಿದ್ದ ದಾಖಲೆಯನ್ನು ಮುರಿದರು.

ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪೆನಾಲ್ಟಿ ಗೋಲ್‌ ಬಾರಿಸಿದವರು

ಹ್ಯಾರಿ ಕೇನ್- 5

ಯುಸೆಬಿಯೊ- 4

ಗೇಬ್ರಿಯಲ್ ಬ್ಯಾಟಿಸ್ಟುಟಾ- 4

ರಾಬ್ ರೆನ್ಸೆನ್‌ಬ್ರಿಂಕ್-4

ಲಿಯೋನೆಲ್ ಮೆಸ್ಸಿ- 4

ನಡೆಯದ ಪೋರ್ಚುಗಲ್ ಪರಾಕ್ರಮ; ಕಾಂಗೊ ವಿರುದ್ಧ 1-1 ಡ್ರಾಗೆ ತೃಪ್ತಿ

1966ರ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿರುವ ಇಂಗ್ಲೆಂಡ್ ತಂಡ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದೆ. ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ದಾಳಿಯ ರಭಸಕ್ಕೆ ಕ್ರೊಯೇಷಿಯಾ ಆಟಗಾರರಿಂದ ಪ್ರತಿರೋಧ ಕಂಡುಬರಲಿಲ್ಲ. ಹಾಗಿದ್ದರೂ 2 ಗೋಲು ಬಾರಿಸಿದರು.

ಡ್ರಾಗೆ ತೃಪ್ತಿಪಟ್ಟ ಪೋರ್ಚುಗಲ್

ದಿನದ ಮೊದಲ ಪಂದ್ಯದಲ್ಲಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಡಿಆರ್ ಕಾಂಗೊ) ತಂಡದ ವಿರುದ್ಧ 1-1ರಿಂದ ಸಮಬಲ ಸಾಧಿಸುವ ಮೂಲಕ ಪೋರ್ಚುಗಲ್ ನಿರಾಸೆ ಅನುಭವಿಸಿತು. ಪಂದ್ಯ ಆರಂಭವಾದ ಮೊದಲ 6 ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಪೋರ್ಚುಗಲ್ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ, ನಂತರ ಪೋರ್ಚುಗಲ್‌ ತಂಡಕ್ಕೆ ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಮಹಿಳಾ ಟಿ20 ವಿಶ್ವಕಪ್‌ನಿಂದ ಶ್ರೇಯಾಂಕ ಹೊರಬಿದ್ದರೆ ಬದಲಿ ಆಟಗಾರ್ತಿಯ ರೇಸ್‌ನಲ್ಲಿ ಮೂವರ ಪೈಪೋಟಿ

ಎರಡನೇ ಅವಧಿಯಲ್ಲಿ ಪೋರ್ಚುಗಲ್ ಗೋಲು ಗಳಿಸಲು ನಿರಂತರ ಪ್ರಯತ್ನ ನಡೆಸಿತ್ತಾದರೂ ಕಾಂಗೊ ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. 6ನೇ ವಿಶ್ವಕಪ್ ಆಡಲಿಳಿದ ಪೋರ್ಚುಗಲ್‌ನ ತಾರಾ ಆಟಗಾರ ರೊನಾಲ್ಡೊ ಗೋಲು ಗಳಿಸಲು ವಿಫಲರಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.