ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಂಜುಗೆ ಗೇಟ್‌ಪಾಸ್‌; ಇಶಾನ್‌ ಕಿಶನ್‌ಗೆ ಆರಂಭಿಕ ಸ್ಥಾನ?

IND vs NZ: ಇಶಾನ್‌ ಆರಂಭಿಕ ಬ್ಯಾಟರ್‌ ಜತೆಗೆ ವಿಕೆಟ್‌ ಕೀಪರ್‌ ಕೂಡ ಆಗಿರುವ ಕಾರಣ ನಾಲ್ಕನೇ ಮತ್ತು ಐದನೇ ಟಿ20 ಯಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ಮಾಡಿದ್ದೇ ಆದರೆ ಟಿ20 ವಿಶ್ವಕಪ್‌ನಲ್ಲಿಯೂ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ತಿಲಕ್‌ ವರ್ಮ ಕೂಡ ತಂಡದಕ್ಕೆ ಆಗಮಿಸುವ ಕಾರಣ ಆಗ ಸಂಜು ಬೆಂಚ್‌ ಕಾಯಬೇಕಾಗಬಹುದು.

4ನೇ ಟಿ20ಗೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ

sanju samson -

Abhilash BC
Abhilash BC Jan 28, 2026 9:36 AM

ವಿಶಾಖಪಟ್ಟಣ, ಜ.28: ಭಾರತ ಮತ್ತು ನ್ಯೂಜಿಲೆಂಡ್ ಇಂದು ವಿಶಾಖಪಟ್ಟಣದಲ್ಲಿ ನಾಲ್ಕನೇ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಸರಣಿ ಈಗಾಗಲೇ ಮುಕ್ತಾಯಗೊಂಡಿದ್ದು, ಫೆ.7ರಂದು ಆರಂಭಗೊಳ್ಳುವ ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಕೊನೆ ಹಂತದ ಕಸರತ್ತು ಎಂಬಂತೆ ಭಾರತ ತಂಡವು ಈ ಪಂದ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕಿದೆ. ಆರಂಭಿಕ ಬ್ಯಾಟರ್‌ ಸಂಜು ಸ್ಯಾಮ್ಸನ್ ಅವರನ್ನು ಇಂದಿನ ಪಂದ್ಯದಿಂದ ಕೈಬಿಡುವ ಸಾಧ್ಯತೆ ಅಧಿಕವಾಗಿದೆ.

ಅನಿರೀಕ್ಷಿತ ಎಂಬಂತೆ ಆರಂಭ ಆಟಗಾರ ಸಂಜು ಸ್ಯಾಮ್ಸನ್ ನಿರಾಶೆ ಮೂಡಿಸಿದ್ದಾರೆ. ಅವರು ಆಡಿದ ಮೂರು ಪಂದ್ಯಗಳಲ್ಲಿ 5.33 ಸರಾಸರಿಯಲ್ಲಿ ಕೇವಲ 16 ರನ್ ಗಳಿಸಿದ್ದಾರೆ. ಹೀಗಾಗಿ ಅವರನ್ನು ಈ ಪಂದ್ಯದಿಂದ ಕೈಬಿಟ್ಟು ಅಭಿಷೇಕ್‌ ಶರ್ಮ ಜತೆ ಇಶಾನ್‌ ಕಿಶನ್‌ ಅವರನ್ನು ಆರಂಭಿಕನಾಗಿ ಆಡಿಸುವ ಸಾಧ್ಯತೆ ಅಧಿಕವಾಗಿದೆ. ಇಶಾನ್‌ ಕಿಶನ್‌ ಕೂಡ ಆರಂಭಿಕ ಬ್ಯಾಟರ್‌ ಆಗಿದ್ದು ಈ ಸರಣಿಯಲ್ಲಿ ಅವರು ಮೂರನೇ ಸ್ಥಾನದಲ್ಲಿ ಪೂರ್ಣ ಪ್ರಮಾಣದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಅವರು ಮೂರು ಪಂದ್ಯಗಳಲ್ಲಿ 224 ರ ಅವಾಸ್ತವಿಕ ಸ್ಟ್ರೈಕ್ ರೇಟ್‌ನಲ್ಲಿ 112 ರನ್‌ಗಳನ್ನು ಗಳಿಸಿದ್ದಾರೆ.

ಇಶಾನ್‌ ಆರಂಭಿಕ ಬ್ಯಾಟರ್‌ ಜತೆಗೆ ವಿಕೆಟ್‌ ಕೀಪರ್‌ ಕೂಡ ಆಗಿರುವ ಕಾರಣ ನಾಲ್ಕನೇ ಮತ್ತು ಐದನೇ ಟಿ20 ಯಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ಮಾಡಿದ್ದೇ ಆದರೆ ಟಿ20 ವಿಶ್ವಕಪ್‌ನಲ್ಲಿಯೂ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ತಿಲಕ್‌ ವರ್ಮ ಕೂಡ ತಂಡದಕ್ಕೆ ಆಗಮಿಸುವ ಕಾರಣ ಆಗ ಸಂಜು ಬೆಂಚ್‌ ಕಾಯಬೇಕಾಗಬಹುದು.

ಇದನ್ನೂ ಓದಿ ಚಿನ್ನಸ್ವಾಮಿಯಲ್ಲಿ ಪಂದ್ಯ ಆಡಲು ಆರ್‌ಸಿಬಿ ಬಹುತೇಕ ಒಪ್ಪಿಗೆ?

ಮೂರನೇ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಕಳಪೆ ಪ್ರದರ್ಶನ ನೀಡಿದರು, ಆದರೆ ರವಿ ಬಿಷ್ಣೋಯ್ ತಮ್ಮ ಸ್ಪಿನ್ ಬೌಲಿಂಗ್‌ನಿಂದ ಪ್ರಭಾವಿತರಾದರು. ತಂಡದ ಆಡಳಿತ ಮಂಡಳಿಯು ಬಿಷ್ಣೋಯ್ ಅವರನ್ನು XI ನಲ್ಲಿ ಮುಂದುವರಿಸುವ ಸಾಧ್ಯತೆ ಇದೆ.

4ನೇ ಟಿ20 ಪಂದ್ಯಕ್ಕೆ ಭಾರತ ತಂಡ

ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿ.ಕೀ.), ಸೂರ್ಯಕುಮಾರ್ ಯಾದವ್ (ನಾಯಕ), ಶಿವಂ ದುಬೆ, ಅಕ್ಷರ್‌ ಪಟೇಲ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ.