ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RR vs DC: ಟೀಕಾಕಾರರಿಗೆ ಉತ್ತರಿಸುವ ಅಗತ್ಯವಿಲ್ಲ, ಪಂದ್ಯ ಸೋಲಿಗೆ ಬೌಲಿಂಗ್‌ ವೈಫಲ್ಯ ಕಾರಣ; ರಿಯಾನ್ ಪರಾಗ್

IPL 2026: ತಮ್ಮ ವಿರುದ್ಧದ ಟೀಕೆಗಳಿಗೂ ತಕ್ಕ ತಿರುಗೇಟು ನೀಡಿದ ಪರಾಗ್‌, "ಯಾವುದೇ ಟೀಕಾಕಾರರಿಗೆ ಅಥವಾ ಅದರ ಬಗ್ಗೆ ಮಾತನಾಡುವ ಯಾರಿಗಾದರೂ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ದಿನದ ಕೊನೆಯಲ್ಲಿ, ನನ್ನ ಕೆಲಸ ಎರಡು ಅಂಕಗಳನ್ನು ಪಡೆಯುವುದು, ಮತ್ತು ನಾವು ಪಂದ್ಯವನ್ನು ಸೋತಿದ್ದರೂ ನನ್ನ ಇನ್ನಿಂಗ್ಸ್ ನಿಜವಾಗಿಯೂ ಅಪ್ರಸ್ತುತವಾಗುತ್ತದೆ" ಎಂದು ಪರಾಗ್ ಹೇಳಿದರು.

ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ ರಾಜಸ್ಥಾನ್‌ ನಾಯಕ ಪರಾಗ್‌

Riyan Parag -

Abhilash BC
Abhilash BC May 2, 2026 7:33 AM

ಜೈಪುರ, ಮೇ 2: ಕಳಪೆ ಫಾರ್ಮ್‌ ಮತ್ತು ಇ-ಸಿಗರೇಟ್‌ ಸೇದಿ ಹಲವು ಟೀಕೆಗಳನ್ನು ಎದುರಿಸಿದ್ದ ರಿಯಾನ್‌ ಪರಾಗ್‌(Riyan Parag) ಡೆಲ್ಲಿ ಕ್ಯಾಪಿಟಲ್ಸ್‌(RR vs DC) ವಿರುದ್ಧದ ಪಂದ್ಯದಲ್ಲಿ 90 ರನ್‌ ಬಾರಿಸಿದ ಬಳಿಕ ಟೀಕಾಕಾರರಿಗೆ ಉತ್ತರಿಸುವ ಅಗತ್ಯವಿಲ್ಲ ಎಂದು ಹೇಳಿದರು. ಜತೆಗೆ ಬೌಲಿಂಗ್‌ ವೈಫಲ್ಯ ಸೋಲಿಗೆ ಕಾರಣವಾಯಿತು ಎಂದರು.

ಶುಕ್ರವಾರ ನಡೆದಿದ್ದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 225 ರನ್‌ ಬಾರಿಸಿದರೂ ಇದನ್ನು ರಕ್ಷಿಸಿಕೊಳ್ಳಲು ವಿಫಲವಾಗಿ ರಾಜಸ್ಥಾನ್‌ ತಂಡ ಏಳು ವಿಕೆಟ್‌ಗಳಿಂದ ಸೋಲು ಕಂಡಿತ್ತು. ಪಂದ್ಯದ ಬಳಿಕ ಮಾತನಾಡಿದ ಪರಾಗ್‌, ಸ್ಕೋರ್ ಸಾಕಷ್ಟು ಉತ್ತಮವಾಗಿತ್ತು, ಆದರೆ ಬೌಲರ್‌ಗಳು ಸಾಕಷ್ಟು ಉತ್ತಮವಾಗಿರಲಿಲ್ಲ ಎಂದು ಹೇಳಿದರು.

"ಇದು ಉತ್ತಮ ಸ್ಕೋರ್ ಎಂದು ನಾನು ಭಾವಿಸುತ್ತೇನೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, 200 ರನ್‌ಗಳು ಸರಿಸಮಾನವಾಗಿದ್ದವು. ಆದರೆ ನಾವು ಮಧ್ಯದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಬಹುದಿತ್ತು ಎಂದು ನಾನು ಭಾವಿಸುತ್ತೇನೆ. ನಾವು ತಂತ್ರವನ್ನು ತಪ್ಪಿಸಿಕೊಂಡಿದ್ದೇವೆ ಎಂದು ನನಗೆ ಅನಿಸಿತು" ಎಂದು ಪರಾಗ್ ಸೋಲಿಗೆ ಕಾರಣ ತಿಳಿಸಿದರು.

ಇದೇ ವೇಳೆ ತಮ್ಮ ವಿರುದ್ಧದ ಟೀಕೆಗಳಿಗೂ ತಕ್ಕ ತಿರುಗೇಟು ನೀಡಿದ ಪರಾಗ್‌, "ಯಾವುದೇ ಟೀಕಾಕಾರರಿಗೆ ಅಥವಾ ಅದರ ಬಗ್ಗೆ ಮಾತನಾಡುವ ಯಾರಿಗಾದರೂ ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ದಿನದ ಕೊನೆಯಲ್ಲಿ, ನನ್ನ ಕೆಲಸ ಎರಡು ಅಂಕಗಳನ್ನು ಪಡೆಯುವುದು, ಮತ್ತು ನಾವು ಪಂದ್ಯವನ್ನು ಸೋತಿದ್ದರೂ ನನ್ನ ಇನ್ನಿಂಗ್ಸ್ ನಿಜವಾಗಿಯೂ ಅಪ್ರಸ್ತುತವಾಗುತ್ತದೆ" ಎಂದು ಪರಾಗ್ ಹೇಳಿದರು.

ಈ ಪ್ರತಿಕ್ರಿಯೆಯನ್ನು ಕೇಳಿದ ನ್ಯೂಜಿಲೆಂಡ್‌ನ ಮಾಜಿ ವೇಗಿ ಡ್ಯಾನಿ ಮಾರಿಸನ್, "ನೀವು ರನ್ ಗಳಿಸುವುದನ್ನು ನಾನು ಇಷ್ಟಪಡುತ್ತೇನೆ. ದಿನದ ಕೊನೆಯಲ್ಲಿ, ಒಂದು ನಗುವನ್ನು ನೋಡೋಣ. ಆ ಹಲ್ಲುಗಳನ್ನು ನೋಡೋಣ" ಎಂದು ಪರಾಗ್‌ಗೆ ಪ್ರೋತ್ಸಾಹದ ಮಾತುಗಳನ್ನು ವ್ಯಕ್ತಪಡಿಸಿದರು. ಈ ಪ್ರತಿಕ್ರಿಯೆಯು ಪರಾಗ್‌ನಿಂದ ಒಂದು ಸಣ್ಣ ನಗುವನ್ನು ಹೊರಹೊಮ್ಮಿಸಿತು.

ರಾಜಸ್ಥಾನ್‌ ಮಣಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದ ಡೆಲ್ಲಿ ಕ್ಯಾಪಿಟಲ್ಸ್‌

ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 6ಕ್ಕೆ225 ರನ್‌ಗಳನ್ನು ಪೇರಿಸಿತು. ದೊಡ್ಡ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಪಥುಮ್‌ (62) ಹಾಗೂ ರಾಹುಲ್‌ (75) ಅಮೋಘ ಆರಂಭ ಒದಗಿಸಿದರು. ಈ ಜೋಡಿ, ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 110 ರನ್‌ ಸೇರಿಸಿತು. ಅಂತಿಮವಾಗಿ ತಂಡ 19.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 226 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

ಸಂಕ್ಷಿಪ್ತ ಸೋರ್

ರಾಜಸ್ಥಾನ್‌ ರಾಯಲ್ಸ್‌; 6 ವಿಕೆಟ್‌ಗೆ 225(ರಿಯಾನ್‌ ಪರಾಗ್‌, 90, ಫೆರಿಯೆರಾ ಔಟಾಗದೆ 47, ಜುರೆಲ್ 42, ಜಡೇಜಾ 20, ಮಿಚೆಲ್‌ ಸ್ಟಾರ್ಕ್‌ 40ಕ್ಕೆ 3). ಡೆಲ್ಲಿ ಕ್ಯಾಪಿಟಲ್ಸ್‌; 3 ವಿಕೆಟ್‌ಗೆ 226 (ಕೆ.ಎಲ್‌ ರಾಹುಲ್‌ 75 ಪಾತುಮ್ ನಿಸ್ಸಂಕಾ 62, ನಿತೇಶ್‌ ರಾಣಾ 33, ಜಡೇಜಾ 33ಕ್ಕೆ 1).