IPL 2026 Points Table: ಅಂಕಪಟ್ಟಿಯಲ್ಲಿ 7ನೇ ಸ್ಥಾನದಿಂದ ಮೂರಕ್ಕೇರಿದ ಸನ್‌ರೈಸರ್ಸ್
IPL 2026: ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತ ಶ್ರೀಲಂಕಾದ ವೇಗಿ ಇಶಾನ್ ಮಾಲಿಂಗ(12 ವಿಕೆಟ್) ಪರ್ಪಲ್ ಕ್ಯಾಪ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದರು. ಅಂಶುಲ್ ಕಾಂಬೋಜ್(13 ವಿಕೆಟ್) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಭಿಷೇಕ್ ಶರ್ಮಾ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು.
Sakib Hussain started a mini-collapse -
ಹೈದರಾಬಾದ್, ಎ.22: ಮಂಗಳವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2026) 31ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್(SRH vs DC) ತಂಡವನ್ನು 47 ರನ್‌ಗಳಿಂದ ಮಣಿಸಿ ಪಯಿಂಟ್ಸ್ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿತು. ಈ ಗೆಲುವಿನೊಂದಿಗೆ ಎಸ್‌ಆರ್‌ಎಚ್ ಆರು ಪಂದ್ಯಗಳಿಂದ ನಾಲ್ಕು ಗೆಲುವುಗಳೊಂದಿಗೆ ಪಾಯಿಂಟ್ ಪಟ್ಟಿ(IPL 2026 Points Table)ಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಸೋಲು ಕಂಡ ಡೆಲ್ಲಿ ಐದನೇ ಸ್ಥಾನಕ್ಕೆ ಕುಸಿಯಿತು. ಇದುವರೆಗಿನ ಆರು ಪಂದ್ಯಗಳಿಂದ ಮೂರು ಗೆಲುವು ಮತ್ತು ಮೂರು ಸೋಲು ಕಂಡಿದೆ.
ಮಂಗಳವಾರದ ಪಂದ್ಯಕ್ಕೂ ಮುನ್ನ ಅಭಿಷೇಕ್ ಶರ್ಮಾ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿಯೂ ಇರಲಿಲ್ಲ. ಆದರೆ ಶತಕ ಬಾರಿಸಿದ ಪರಿಣಾಮ ಅವರು ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಈ ಹಾದಿಯಲ್ಲಿ ಅವರು ತಂಡದ ಸಹ ಆಟಗಾರ ಹೆನ್ರಿಕ್ ಕ್ಲಾಸೆನ್ ಅವರನ್ನು ಹಿಂದಿಕ್ಕಿದರು.
ಪಂದ್ಯದಲ್ಲಿ ನಾಲ್ಕು ವಿಕೆಟ್ ಕಿತ್ತ ಶ್ರೀಲಂಕಾದ ವೇಗಿ ಇಶಾನ್ ಮಾಲಿಂಗ(12 ವಿಕೆಟ್) ಪರ್ಪಲ್ ಕ್ಯಾಪ್ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದರು. ಅಂಶುಲ್ ಕಾಂಬೋಜ್(13 ವಿಕೆಟ್) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಅಂಕಪಟ್ಟಿ
🚨 IPL 2026 POINTS TABLE ANALYSIS 🚨
— Suresh N (@TheDugoutStats) April 22, 2026
After Match 31 — SRH vs DC
TOP 4 RACE 🏆
1. PBKS — 11 pts | NRR +1.42 — Runaway leaders 💪
2. RCB — 8 pts | NRR +1.17 — Solid second
3. SRH — 8 pts | NRR +0.82 — Jumped to 3rd 🔥
4. RR — 8 pts | NRR +0.60 — Clinging on to 4th
THE MIDDLE… pic.twitter.com/qOsbTfz8BW
ರಾಜೀವ್ ಗಾಂಧಿ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 242 ರನ್ ಗಳಿಸಿದೆ. ಗೆಲ್ಲಲು ಕಠಿಣ ಗುರಿ ಪಡೆದ ಡೆಲ್ಲಿ ತಂಡವು ನಿತೀಶ್ ರಾಣಾ ಅವರ ಅರ್ಧಶತಕದ(57 ರನ್, 30 ಎಸೆತ, 7 ಬೌಂಡರಿ,3 ಸಿಕ್ಸರ್)ಕೊಡುಗೆಯ ಹೊರತಾಗಿಯೂ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಡೆಲ್ಲಿ ಪರ ಸಮೀರ್ ರಿಝ್ವಿ(41, 28 ಎಸೆತ, 2 ಬೌಂಡರಿ, 2 ಸಿಕ್ಸರ್), ಕೆ.ಎಲ್.ರಾಹುಲ್(37 ರನ್, 23 ಎಸೆತ)ಹಾಗೂ ಟ್ರಿಸ್ಟನ್ ಸ್ಟಬ್ಸ್(27 ರನ್, 16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
SRH vs DC: ರಾಹುಲ್ ಮಾಡಿದ ರನೌಟ್ ಎಡವಟ್ಟು ಸೋಲಿಗೆ ಕಾರಣ ಎಂದ ಅಕ್ಷರ್ ಪಟೇಲ್
ಸಂಕ್ಷಿಪ್ತ ಸ್ಕೋರ್
ಸನ್‌ರೈಸರ್ಸ್ ಹೈದರಾಬಾದ್: 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 242 (ಅಭಿಷೇಕ್ ಶರ್ಮಾ ಔಟಾಗದೇ 135, ಟ್ರಾವಿಸ್ ಹೆಡ್ 37, ಇಶಾನ್ ಕಿಶನ್ 25, ಹೆನ್ರಿಚ್ ಕ್ಲಾಸನ್ ಔಟಾಗದೇ 37; ಅಕ್ಷರ್ ಪಟೇಲ್ 23ಕ್ಕೆ1).
ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 195 (ಕೆ.ಎಲ್.ರಾಹುಲ್ 37, ನಿತೀಶ್ ರಾಣಾ 57, ಸಮೀರ್ ರಿಜ್ವಿ 41, ಟ್ರಿಸ್ಟನ್ ಸ್ಟಬ್ಸ್ 27, ಇಶಾನ್ ಮಾಲಿಂಗ 32ಕ್ಕೆ4, ಹರ್ಷ್ ದುಬೆ 12ಕ್ಕೆ3).