ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MS Dhoni: ಐಪಿಎಲ್‌ ಆಡಲು ಧೋನಿ ರೆಡಿ; ಹೊಸ ವಿಡಿಯೊ ಹಂಚಿಕೊಂಡ ಫ್ರಾಂಚೈಸಿ

IPL 2026: ಮುಂಬೈ ವಿರುದ್ಧದ ಪಂದ್ಯಕ್ಕೆ ಎರಡು ದಿನಗಳ ಮೊದಲು ನಡೆದ ತಂಡದ ಅಭ್ಯಾಸ ಅವಧಿಯಲ್ಲಿ ಧೋನಿ ವಿಕೆಟ್‌ ಕೀಪಿಂಗ್‌ ನಡೆಸಿದ ವಿಡಿಯೊವನ್ನು ಫ್ರಾಂಚೈಸಿ ತನ್ನ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಹೀಗಾಗಿ ಧೋನಿ ಆಡುವ ಸಾಧ್ಯತೆ ಗೋರಿಸಿದೆ.

ಐಪಿಎಲ್‌ ಆಡಲು ಧೋನಿ ರೆಡಿ; ಹೊಸ ವಿಡಿಯೊ ಹಂಚಿಕೊಂಡ ಫ್ರಾಂಚೈಸಿ

MS Dhoni -

Abhilash BC
Abhilash BC Apr 22, 2026 10:11 AM

ಮುಂಬಯಿ, ಎ.22: ಕ್ರಿಕೆಟ್‌ ಅಭಿಮಾನಿಗಳು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ಕಾದು ಕುಳಿತಿದ್ದ ಮಹೇಂದ್ರ ಸಿಂಗ್‌ ಧೋನಿಯ(MS Dhoni) ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್)‌ ಕಮ್‌ಬ್ಯಾಕ್‌ಗೆ ವೇದಿಕೆ ಸಿದ್ಧಗೊಂಡಿದೆ. ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುರುವಾರ ಐದು ಬಾರಿ ವಿಜೇತ ಮುಂಬೈ ಇಂಡಿಯನ್ಸ್(MI vs CSK) ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಧೋನಿ ಆಡುವುದು ಬಹತೇಕ ಖಚಿತವಾಗಿದೆ. ಇದರ ಸುಳಿವನ್ನು ಫ್ರಾಂಚೈಸಿ ಬಿಟ್ಟುಕೊಟ್ಟಿದೆ.

ಮುಂಬೈ ವಿರುದ್ಧದ ಪಂದ್ಯಕ್ಕೆ ಎರಡು ದಿನಗಳ ಮೊದಲು ನಡೆದ ತಂಡದ ಅಭ್ಯಾಸ ಅವಧಿಯಲ್ಲಿ ಧೋನಿ ವಿಕೆಟ್‌ ಕೀಪಿಂಗ್‌ ನಡೆಸಿದ ವಿಡಿಯೊವನ್ನು ಫ್ರಾಂಚೈಸಿ ತನ್ನ ಟ್ವಿಟರ್‌ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ಹೀಗಾಗಿ ಧೋನಿ ಆಡುವ ಸಾಧ್ಯತೆ ಗೋರಿಸಿದೆ.

ಧೋನಿ ಅಭ್ಯಾಸದ ವಿಡಿಯೊ



ಧೋನಿ ಅಭ್ಯಾಸದಲ್ಲಿ ಪ್ರಗತಿ ಕಾಣುತ್ತಿದ್ದರೂ, ಧೋನಿ ಯಾವಾಗ ಮತ್ತೆ ತಂಡಕ್ಕೆ ಮರಳುತ್ತಾರೆ ಎಂಬುದರ ಕುರಿತು ಇನ್ನೂ ಯಾವುದೇ ದೃಢೀಕರಣವಿಲ್ಲ. ಧೋನಿ ತಂಡಕ್ಕೆ ಮರಳುವ ಬಗ್ಗೆ ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ ಅವರನ್ನು ಕೇಳಿದಾಗ, ನನಗೆ ಖಚಿತವಿಲ್ಲ ಎಂದು ಹೇಳಿದರು. "ಅವರು(ಧೋನಿ ತಮ್ಮ ಪುನಶ್ಚೇತನದಲ್ಲಿ ಚೆನ್ನಾಗಿ ಪ್ರಗತಿ ಸಾಧಿಸುತ್ತಿದ್ದಾರೆ, ಮತ್ತು ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿಯಿಂದ ನನಗೆ ಸಂತೋಷವಾಗಿದೆ" ಎಂದರು.

ಧೋನಿ ಎಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಚೆನ್ನೈ ಪಂದ್ಯಕ್ಕಾಗಿ ಹೈದರಾಬಾದ್‌ಗೆ ಹೋಗಿದ್ದರು. ಆದಾಗ್ಯೂ, ಅವರು ಆಡಲಿಲ್ಲ. ಇತ್ತೀಚೆಗೆ, ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಸಿಎಸ್‌ಕೆ ತಂಡದ ಧೋನಿ ನಿರ್ವಹಣೆಯನ್ನು ಟೀಕಿಸಿದ್ದರು.

SRH vs DC: ಇಂದು ಸನ್‌ರೈಸರ್ಸ್‌ ವಿರುದ್ಧ ರಾಹುಲ್‌ ಅರ್ಧಶತಕ ಬಾರಿಸಿದರೆ ಧೋನಿ ದಾಖಲೆ ಪತನ

44 ವರ್ಷದ ಧೋನಿ ಈವರೆಗೆ 278 ಪಂದ್ಯಗಳು ಮತ್ತು 5439 ರನ್‌ಗಳೊಂದಿಗೆ, ಸಿಎಸ್‌ಕೆ ಪ್ರಯಾಣದಲ್ಲಿ ಕೇಂದ್ರಬಿಂದುವಾಗಿದ್ದಾರೆ. 2024 ರ ಸೀಸನ್‌ಗೆ ಮುಂಚಿತವಾಗಿ ನಾಯಕತ್ವದಿಂದ ಕೆಳಗಿಳಿಯುವ ಮೊದಲು ಫ್ರಾಂಚೈಸಿಯನ್ನು ಐದು ಐಪಿಎಲ್ ಪ್ರಶಸ್ತಿಗಳಿಗೆ ಮುನ್ನಡೆಸಿದ್ದರು. ಕಳೆದ ಆವೃತ್ತಿಯಲ್ಲಿ ಗಾಯದ ಕಾರಣದಿಂದಾಗಿ ಋತುರಾಜ್ ಗಾಯಕ್ವಾಡ್ ಹೊರಗುಳಿದ ಕಾರಣ ಧೋನಿ ನಾಯಕತ್ವವಹಿಸಿದ್ದರು. ಆದರೆ ನಿರೀಕ್ಷಿತ ಪ್ರದರ್ಶನ ಕಂಡು ಬಂದಿರಲಿಲ್ಲ.