ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಟಾಪ್‌-10ಗೆ ಎಂಟ್ರಿಕೊಟ್ಟ ಇಶಾನ್‌ ಕಿಶನ್‌

ICC T20 Rankings: ಬೌಲಿಂಗ್‌ ಶ್ರೇಯಾಂಕದಲ್ಲಿ ಜಿಂಬಾಬ್ವೆಯ ಬ್ರಾಡ್ ಇವಾನ್ಸ್ 10 ಸ್ಥಾನಗಳ ಜಿಗಿತ ಕಂಡು ಐದನೇ ಸ್ಥಾನದಲ್ಲಿದ್ದಾರೆ ಮತ್ತು ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ 680 ಅಂಕ ಪಡೆದಿದ್ದಾರೆ. ಭಾರತದ ವರುಣ್ ಚಕ್ರವರ್ತಿ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

ಸತತ ಎರಡು ಶೂನ್ಯ ಸುತ್ತಿದರೂ ಟಿ20 ನಂ.1 ಸ್ಥಾನ ಉಳಿಸಿಕೊಂಡ ಅಭಿಷೇಕ್‌

Ishan Kishan -

Abhilash BC
Abhilash BC Feb 18, 2026 3:12 PM

ದುಬೈ, ಫೆ.18: ಟಿ20 ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿರುವ ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟರ್‌ ಇಶಾನ್‌ ಕಿಶನ್‌ ಅವರು ನೂತನ ಐಸಿಸಿ ಟಿ20 ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಅಗ್ರ 10 ರಲ್ಲಿ ಸ್ಥಾನ ಪಡೆದಿದ್ದಾರೆ. ಅವರು 732 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಶ್ರೇಯಾಂಕದಲ್ಲಿ ಎಂಟನೇ ಸ್ಥಾನಕ್ಕೆ ಜಿಗಿದಿದ್ದಾರೆ. ಐಸಿಸಿ ಶ್ರೇಯಾಂಕದಲ್ಲಿ ಟಾಪ್ 10 ರಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತೀಯ ಬ್ಯಾಟ್ಸ್‌ಮನ್ ಆಗಿರುವ ಅವರು, ನ್ಯೂಜಿಲೆಂಡ್‌ನ ಟಿಮ್ ಸೀಫರ್ಟ್ ಮತ್ತು ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್‌ರನ್ನು ಹಿಂದಿಕ್ಕಿದ್ದಾರೆ.

ಹಾಲಿ ಟೂರ್ನಿಯಲ್ಲಿ ಇಶಾನ್‌ ಕಿಶನ್‌ ಆಡಿದ ಮೂರು ಪಂದ್ಯಗಳಿಂದ 158 ರನ್‌ ಗಳಿಸಿದ್ದಾರೆ. ನಮೀಬಿಯಾ ಮತ್ತು ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿದ್ದರು. ಏತನ್ಮಧ್ಯೆ, ಟಿ 20 ವಿಶ್ವಕಪ್‌ನಲ್ಲಿ ಹಲವಾರು ಬಾರಿ ಶೂನ್ಯಕ್ಕೆ ಔಟಾಗಿದ್ದರೂ, ಅಭಿಷೇಕ್ ಶರ್ಮಾ 891 ರೇಟಿಂಗ್ ಅಂಕಗಳೊಂದಿಗೆ ಶ್ರೇಯಾಂಕದಲ್ಲಿ ತಮ್ಮ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಫಿಲ್ ಸಾಲ್ಟ್‌ಗಿಂತ 2ನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಟಾಪ್ 10 ರಲ್ಲಿ ಸ್ಥಾನ ಪಡೆದಿರುವ ಇತರ ಭಾರತೀಯ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಭಾರತದ ವಿರುದ್ಧ ಶೂನ್ಯಕ್ಕೆ ಔಟಾಗಿದ್ದ ಪಾಕಿಸ್ತಾನದ ಸಾಹಿಬ್‌ಜಾದಾ ಫರ್ಹಾನ್ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸ್ಟ್ರೇಲಿಯಾವನ್ನು ಟಿ20 ವಿಶ್ವಕಪ್‌ನಿಂದ ಹೊರದಬ್ಬುವಲ್ಲಿ ಅದ್ಭುತ ಶತಕ ಬಾರಿಸಿ ಮಿಂಚಿದ ಶ್ರೀಲಂಕಾದ ಪಾಥುಮ್ ನಿಸ್ಸಂಕಾ ಅವರು ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ವರುಣದೇವನ ಕೈಯಲ್ಲಿ ಪಾಕ್‌ ಸೂಪರ್‌-8 ಭವಿಷ್ಯ; ಇಂದು ನಮೀಬಿಯಾ ಎದುರಾಳಿ

ಪಾಕಿಸ್ತಾನದ ಆಲ್‌ರೌಂಡರ್ ಸೈಮ್ ಅಯೂಬ್ ಐಸಿಸಿ ಟಿ20ಐ ಆಲ್‌ರೌಂಡರ್ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಹಾರ್ದಿಕ್ ಪಾಂಡ್ಯ ಮೂರನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಜಿಂಬಾಬ್ವೆ ನಾಯಕ ಸಿಕಂದರ್ ರಜಾ ಅವರನ್ನು ಅಗ್ರ ಸ್ಥಾನದಿಂದ ಕೆಳಗಿಳಿದರು. ಅವರು ಅಯೂಬ್‌ಗಿಂತ ಕೇವಲ ಆರು ರೇಟಿಂಗ್ ಪಾಯಿಂಟ್‌ಗಳ ಹಿಂದಿದ್ದಾರೆ.

ಬೌಲಿಂಗ್‌ ಶ್ರೇಯಾಂಕದಲ್ಲಿ ಜಿಂಬಾಬ್ವೆಯ ಬ್ರಾಡ್ ಇವಾನ್ಸ್ 10 ಸ್ಥಾನಗಳ ಜಿಗಿತ ಕಂಡು ಐದನೇ ಸ್ಥಾನದಲ್ಲಿದ್ದಾರೆ ಮತ್ತು ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ 680 ಅಂಕ ಪಡೆದಿದ್ದಾರೆ. ಭಾರತದ ವರುಣ್ ಚಕ್ರವರ್ತಿ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಇತರ ಭಾರತೀಯ ಬೌಲರ್‌ಗಳಲ್ಲಿ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್‌ದೀಪ್ ಸಿಂಗ್ ಕ್ರಮವಾಗಿ 14, 15 ಮತ್ತು 16 ನೇ ಸ್ಥಾನಗಳಲ್ಲಿದ್ದಾರೆ. ಮುಂದಿನ ವಾರದಲ್ಲಿ ಶ್ರೇಯಾಂಕದಲ್ಲಿ ಮೇಲೇರುವ ಸಾಧ್ಯತೆಯಿದೆ. ಮುಂದಿನ ನವೀಕರಣದ ಮೊದಲು ಭಾರತ ಇನ್ನೂ ಒಂದೆರಡು ಪಂದ್ಯಗಳನ್ನು ಆಡಲಿದೆ.