ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವರುಣದೇವನ ಕೈಯಲ್ಲಿ ಪಾಕ್‌ ಸೂಪರ್‌-8 ಭವಿಷ್ಯ; ಇಂದು ನಮೀಬಿಯಾ ಎದುರಾಳಿ

PAK vs NAM Colombo weather forecast: ಬುಧವಾರ ಕೊಲಂಬೊದಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಪಂದ್ಯದ ಸಮಯದಲ್ಲಿ ಮಳೆಯ ಜತೆಗೆ ಭಾರೀ ಮೋಡ ಕವಿದ ವಾತಾವರಣ 100 ಪ್ರತಿಶತ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪಾಕ್‌-ನಮೀಬಿಯಾ ಪಂದ್ಯ ರದ್ದಾದರೆ; ಅಮೆರಿಕ ಸೂಪರ್‌-8ಕ್ಕೆ ಲಗ್ಗೆ

PAK vs NAM -

Abhilash BC
Abhilash BC Feb 18, 2026 10:25 AM

ಪಲೆಕೆಲೆ, ಫೆ.18: ಮಂಗಳವಾರ ನಡೆಯಬೇಕಿದ್ದ ಐರ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯವು ಮಳೆಯಿಂದಾಗಿ ರದ್ದಾದ ನಂತರ ಜಿಂಬಾಬ್ವೆ ತಂಡವು ಟಿ20 ವಿಶ್ವಕಪ್‌ನ ಸೂಪರ್ 8ರ ಹಂತಕ್ಕೆ ಮುನ್ನಡೆಯಿತು. ಪಂದ್ಯ ರದ್ದಾದ ಕಾರಣ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವೂ ಗುಂಪು ಹಂತದಲ್ಲೇ ಹೊರಬಿತ್ತು. ಇದೀಗ ಪಾಕಿಸ್ತಾನಕ್ಕೂ ಇಂತಹದ್ದೇ ಭೀತಿ ಎದುರಾಗಿದೆ.

ಇಂದು(ಬುಧವಾರ) ಪಾಕಿಸ್ತಾನ ತಂಡ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸೂಪರ್-‌8 ಹಂತದ ಪ್ರವೇಶಕ್ಕೆ ಪಾಕಿಸ್ತಾನ್ಕೆ ಈ ಪಂದ್ಯದಲ್ಲಿ ಗೆಲವು ಅತ್ಯಗತ್ಯ. ಆದರೆ ಪಂದ್ಯಕ್ಕೆ ಮಳೆ ಭೀತಿಯೂ ಇದೆ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದಾದರೆ ಪಾಕ್‌ ಟೂರ್ನಿಯಿಂದ ಹೊರಬೀಳಲಿದೆ. ಅಮೆರಿಕಾ ತಂಡ ಚೊಚ್ಚಲ ಬಾರಿಗೆ ಸೂಪರ್‌-8 ಹಂತಕ್ಕೆ ಲಗ್ಗೆಯಿಡಲಿದೆ.

ಬುಧವಾರ ಕೊಲಂಬೊದಲ್ಲಿ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಪಂದ್ಯದ ಸಮಯದಲ್ಲಿ ಮಳೆಯ ಜತೆಗೆ ಭಾರೀ ಮೋಡ ಕವಿದ ವಾತಾವರಣ 100 ಪ್ರತಿಶತ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಧ್ಯಾಹ್ನ 1 ರಿಂದ 3 ಗಂಟೆಯ ನಡುವೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಆದ್ದರಿಂದ ಪಂದ್ಯ ಆರಂಭ ವಿಳಂಬವಾಗುವ ಸಾಧ್ಯತೆ ಇದೆ. ಪಂದ್ಯಕ್ಕೆ ಸಂಪೂರ್ಣವಾಗಿ ಮಳೆ ಭೀತಿ ಇಲ್ಲ.

ಪಾಕ್‌ನ ಉಸ್ಮಾನ್‌ ತಾರಿಕ್‌ ಕ್ರಿಕೆಟ್‌ ಆಡಲು ಧೋನಿ ಬಯೋಪಿಕ್‌ ಕಾರಣವಂತೆ!

ಭಾರತ ವಿರುದ್ಧದ ಹೀನಾಯ ಸೋಲಿನ ನಂತರ ಪಾಕಿಸ್ತಾನದ ಹಿರಿಯ ಆಟಗಾರರು ತೀವ್ರ ಟೀಕೆಗೆ ಒಳಗಾಗಿದ್ದಾರೆ. ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರು ಬಾಬರ್ ಅಜಮ್ ಮತ್ತು ಅವರ ಅಳಿಯ ಶಾಹೀನ್ ಶಾ ಅಫ್ರಿದಿ ಅವರನ್ನು ತಂಡದಿಂದ ತೆಗೆದುಹಾಕುವಂತೆ ಕರೆ ನೀಡಿದ್ದಾರೆ. ನಮೀಬಿಯಾ ತಂಡದಲ್ಲಿ ಬೆನ್ ಶಿಕೊಂಗೊ ಅವರನ್ನು ಹೊರತುಪಡಿಸಿ, ತಂಡವು ಹೆಚ್ಚಿನ ಬದಲಾವಣೆಗಳಿಲ್ಲದೆ ಮುಂದುವರಿಯುವ ನಿರೀಕ್ಷೆಯಿದೆ.

ಕೊಲಂಬೊ ಪಿಚ್ ವರದಿ

ಕೊಲಂಬೊ ಪಿಚ್‌ ಸಾಂಪ್ರದಾಯಿಕವಾಗಿ ಉತ್ತಮ ಬ್ಯಾಟಿಂಗ್‌ಗೆ ಹೆಸರುವಾಸಿ. ಶನಿವಾರ ಐರ್ಲೆಂಡ್ ತಂಡ ಓಮನ್ ವಿರುದ್ಧ 235 ರನ್ ಗಳಿಸಿತು. ಆದರೆ ಇಂದು ಹಗಲು ಪಂದ್ಯವಾದ್ದರಿಂದ, ಮೇಲ್ಮೈ ಕೊಂಚ ನಿಧಾನವಾಗಿರಬಹುದು.

ಸಂಭಾವ್ಯ ತಂಡಗಳು

ಪಾಕಿಸ್ತಾನ: ಸೈಮ್ ಅಯೂಬ್, ಸಾಹಿಬ್ಜಾದಾ ಫರ್ಹಾನ್, ಸಲ್ಮಾನ್ ಅಘಾ (ನಾಯಕ), ಬಾಬರ್ ಅಜಮ್/ಫಖರ್ ಜಮಾನ್, ಮೊಹಮ್ಮದ್ ನವಾಜ್, ಉಸ್ಮಾನ್ ಖಾನ್ (ವಿ.ಕೀ.), ಶಾದಾಬ್ ಖಾನ್, ಫಹೀಮ್ ಅಶ್ರಫ್, ಸಲ್ಮಾನ್ ಮಿರ್ಜಾ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.

ನಮೀಬಿಯಾ: ಜಾನ್ ಫ್ರಿಲಿಂಕ್, ಲೌರೆನ್ ಸ್ಟೀನ್‌ಕ್ಯಾಂಪ್, ಜಾನ್ ನಿಕೋಲ್ ಲಾಫ್ಟಿ-ಈಟನ್, ಗೆರ್ಹಾರ್ಡ್ ಎರಾಸ್ಮಸ್ (ನಾಯಕ), ಜೆಜೆ ಸ್ಮಿಟ್, ಜೇನ್ ಗ್ರೀನ್ (ವಿ.ಕೀ.), ಡೈಲನ್ ಲೀಚರ್, ರೂಬೆನ್ ಟ್ರಂಪ್ಲೆಮನ್, ವಿಲ್ಲೆಮ್ ಮೈಬರ್ಗ್, ಬರ್ನಾರ್ಡ್ ಸ್ಕೋಲ್ಟ್ಜ್, ಮ್ಯಾಕ್ಸ್ ಹೀಂಗೊ.