ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಂಡಿಯನ್‌ ಸೂಪರ್‌ ಲೀಗ್‌ ಟೂರ್ನಿಯ ಆರಂಭದ ದಿನಾಂಕವನ್ನು ಪ್ರಕಟಿಸಿದ ಕೇಂದ್ರ ಕ್ರೀಡಾ ಸಚಿವ!

2025-26ರ ಸಾಲಿನ ಇಂಡಿಯನ್ ಸೂಪರ್ ಲೀಗ್ ಋತುವು ಫೆಬ್ರವರಿ 14 ರಂದು ಪ್ರಾರಂಭವಾಗಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಜನವರಿ 6 ರಂದು ಮಂಗಳವಾರ ಘೋಷಿಸಿದ್ದಾರೆ. ಆ ಮೂಲಕ ಇಷ್ಟು ದಿನಗಳ ಕಾಲ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಇದೀಗ ಬ್ರೇಕ್‌ ಬಿದ್ದಿದೆ.

2025-26ರ ಸಾಲಿನ‌ ಇಂಡಿಯನ್ ಸೂಪರ್‌ ಲೀಗ್‌ ದಿನಾಂಕ ಪ್ರಕಟ!

2025-26ರ ಸಾಲಿನ‌ ಇಂಡಿಯನ್ ಸೂಪರ್‌ ಲೀಗ್‌ ದಿನಾಂಕ ಪ್ರಕಟ -

Profile
Ramesh Kote Jan 6, 2026 8:29 PM

ನವದೆಹಲಿ: ಬಹುನಿರೀಕ್ಷಿತ 2025-26ರ ಸಾಲಿನ ಇಂಡಿಯನ್ ಸೂಪರ್ ಲೀಗ್ (ISL 2025-26) ಟೂರ್ನಿಯು ಫೆಬ್ರವರಿ 14 ರಂದು ಪ್ರಾರಂಭವಾಗಲಿದೆ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಮಂಗಳವಾರ ಘೋಷಿಸಿದ್ದಾರೆ. ವಾಣಿಜ್ಯ ಪಾಲುದಾರ (ಪ್ರಾಯೋಜಕರು) ಇಲ್ಲದ ಕಾರಣ ಐಎಸ್‌ಎಲ್ ಸ್ಥಗಿತಗೊಂಡಿತು. ಆದರೆ, ಇದೀಗ ಎಲ್ಲಾ 14 ಕ್ಲಬ್‌ಗಳು 2025-26ರ ಐಎಸ್‌ಎಲ್ ಟೂರ್ನಿಯಲ್ಲಿ ಭಾಗವಹಿಸಲಿವೆ. ಮುಂದೂಡಲ್ಪಟ್ಟ ಐ-ಲೀಗ್ ಕೂಡ ಐಎಸ್‌ಎಲ್‌ನಂತೆಯೇ ನಡೆಯಲಿದೆ, ಎಲ್ಲಾ 11 ಕ್ಲಬ್‌ಗಳು ಭಾಗವಹಿಸುತ್ತವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, "ಐಎಸ್‌ಎಲ್ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದವು, ಆದರೆ ಇಂದು ಸರ್ಕಾರ, ಫುಟ್‌ಬಾಲ್ ಫೆಡರೇಶನ್ ಮತ್ತು ಮೋಹನ್ ಬಗಾನ್ ಹಾಗೂ ಈಸ್ಟ್‌ ಬಂಗಾಳ ಸೇರಿದಂತೆ 14 ಕ್ಲಬ್‌ಗಳು ಸಭೆ ನಡೆಸಿ ಐಎಸ್‌ಎಲ್ ಫೆಬ್ರವರಿ 14 ರಂದು ಟೂರ್ನಿಯನ್ನು ಆರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಎಲ್ಲಾ ಕ್ಲಬ್‌ಗಳು ಭಾಗವಹಿಸುತ್ತವೆ," ಎಂದು ತಿಳಿಸಿದ್ದಾರೆ. ಇಂಡಿಯನ್ ಸೂಪರ್ ಲೀಗ್‌ ಟೂರ್ನಯಲ್ಲಿ ತವರು ಮತ್ತು ವಿದೇಶಿ ಪಂದ್ಯಗಳ ಆಧಾರದ ಮೇಲೆ ಒಟ್ಟು 91 ಪಂದ್ಯಗಳನ್ನು ಆಡಲಾಗುವುದು. ಐ-ಲೀಗ್‌ನಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ.

KAR vs RAJ: ಮಯಾಂಕ್‌ ಅಗರ್ವಾಲ್‌ ಶತಕ, ಕರ್ನಾಟಕ ತಂಡಕ್ಕೆ ಸತತ ಆರನೇ ಜಯ!

ಐಎಫ್‌ಎಫ್‌ ಅಧ್ಯಕ್ಷರ ಹೇಳಿಕೆ

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ, "ಐಎಸ್‌ಎಲ್‌ ಟೂರ್ನಿಒಗಾಗಿ 25 ಕೋಟಿ ರು. ಗಳ ಕೇಂದ್ರ ನಿಧಿಯನ್ನು ರಚಿಸಲಾಗಿದೆ. ಈ ನಿಧಿಯಲ್ಲಿ ಶೇಕಡಾ 10 ರಷ್ಟು ಹಣವನ್ನು ಎಐಎಫ್‌ಎಫ್‌ ಒದಗಿಸುತ್ತದೆ ಮತ್ತು ಶೇಕಡಾ 30 ರಷ್ಟು ಹಣವನ್ನು ವಾಣಿಜ್ಯ ಪಾಲುದಾರರಿಂದ ಬರುತ್ತದೆ. ನಮಗೆ ಪ್ರಸ್ತುತ ವಾಣಿಜ್ಯ ಪಾಲುದಾರರು ಇಲ್ಲದ ಕಾರಣ, AIFF ಸಹ ಕೊಡುಗೆ ನೀಡುತ್ತದೆ," ಎಂದು ಹೇಳಿದ್ದಾರೆ.

"ಒಟ್ಟಾರೆಯಾಗಿ, ಎಐಎಫ್‌ಎಫ್ ಇಂಡಿಯನ್ ಸೂಪರ್ ಲೀಗ್‌ಗೆ 14 ಕೋಟಿ ರು ಮತ್ತು ಐ-ಲೀಗ್‌ಗೆ 3.2 ಕೋಟಿ ರೂ.ಗಳನ್ನು ವಾಣಿಜ್ಯ ಪಾಲುದಾರರು ಸಿಗುವವರೆಗೆ ಒದಗಿಸುತ್ತದೆ," ಎಂದು ಅವರು ತಿಳಿಸಿದ್ದಾರೆ. ಲೀಗ್‌ಗಳನ್ನು ನಿರ್ವಹಿಸಲು ಆಡಳಿತ ಮಂಡಳಿಯನ್ನು ರಚಿಸಲಾಗುವುದು, ಅದು ಎಲ್ಲಾ ವಾಣಿಜ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಚೌಬೆ ಮಾಹಿತಿ ನೀಡಿದ್ದಾರೆ.

AUS vs ENG: ಶತಕ ಬಾರಿಸಿ 96 ವರ್ಷಗಳ ಹಳೆಯ ದಾಖಲೆ ಮುರಿದ ಸ್ಟೀವನ್‌ ಸ್ಮಿತ್‌!

2014ರಲ್ಲಿ ಇಂಡಿಯನ್ ಸೂಪರ್ ಲೀಗ್ ಪ್ರಾರಂಭಿಸಲಾಗಿತ್ತು. ಇದು ಡೆಲ್ ಪಿಯೆರೊ, ಡಿಯಾಗೋ ಫೋರ್ಲಾನ್ ಮತ್ತು ಡಿಮಿಟರ್ ಬರ್ಬಟೋವ್‌ರಂತಹ ವಿದೇಶಿ ಆಟಗಾರರನ್ನು ಒಳಗೊಂಡಿತ್ತು. ಬ್ರೆಜಿಲಿಯನ್ ಲೆಜೆಂಡರಿ ಫುಟ್‌ಬಾಲ್ ಆಟಗಾರ ರಾಬರ್ಟೊ ಕಾರ್ಲೋಸ್ ಕೂಡ ಐಎಸ್‌ಎಲ್‌ನಲ್ಲಿ ಆಡಿದ್ದಾರೆ.

ಐಎಸ್‌ಎಲ್‌ನ ತಂಡಗಳ ವಿವರ

ಮೋಹನ್ ಬಗಾನ್, ಈಸ್ಟ್ ಬೆಂಗಾಲ್ ಮತ್ತು ಮೊಹಮ್ಮದನ್ ಸ್ಪೋರ್ಟಿಂಗ್ ಮುಂಬೈ ಸಿಟಿ, ಬೆಂಗಳೂರು ಎಫ್‌ಸಿ, ಎಫ್‌ಸಿ ಗೋವಾ, ಕೇರಳ ಬ್ಲಾಸ್ಟರ್ಸ್, ಚೆನ್ನೈ, ದೆಹಲಿ, ಪಂಜಾಬ್, ನಾರ್ತ್‌ಈಸ್ಟ್ ಯುನೈಟೆಡ್, ಜೆಮ್‌ಶೆಡ್‌ಪುರ, ಒಡಿಶಾ ಮತ್ತು ಇಂಟರ್ ಕಾಶಿ ಸೇರಿದಂತೆ ಐಎಸ್‌ಎಲ್ ನಿಯಮಿತ ಆಟಗಾರರೊಂದಿಗೆ ಕುಳಿತುಕೊಂಡದ್ದವು. ಭಾರತೀಯ ಫುಟ್ಬಾಲ್‌ನ ಪ್ರಮುಖ ಪಾಲುದಾರರು ಕ್ರೀಡೆಯನ್ನು ಪುನರಾರಂಭಿಸಲು ಮಾರ್ಗಸೂಚಿಯನ್ನು ಒಪ್ಪಿಕೊಂಡರು.