ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂಬೈ ರಣಜಿ ತಂಡದ ನೂತನ ನಾಯಕನಾಗಿ ಸಿದ್ಧೇಶ್ ಲಾಡ್ ನೇಮಕ; ಶಾರ್ದೂಲ್ ಠಾಕೂರ್‌ಗೆ ಕೊಕ್‌

2026-27 Ranji Trophy season: 42 ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ, ಕಳೆದ ಋತುವಿನಲ್ಲಿ ಶಾರ್ದೂಲ್‌ ನಾಯಕತ್ವದಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು. ರಣಜಿ ಟ್ರೋಫಿ ಸೀಸನ್ ಅಕ್ಟೋಬರ್ 11 ರಂದು ಆರಂಭವಾಗಲಿದ್ದು, ತಂಡವು ಚಂಡೀಗಢ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ.

ರಣಜಿ ಟ್ರೋಫಿ; ಮುಂಬೈ ತಂಡದ ನಾಯಕತ್ವದಿಂದ ಶಾರ್ದೂಲ್‌ಗೆ ಕೊಕ್‌

Siddhesh Lad -

Abhilash BC
Abhilash BC Sep 1, 2026 4:54 PM

ಮುಂಬಯಿ, ಸೆ.1: ಮುಂಬರುವ ರಣಜಿ ಟ್ರೋಫಿ ಋತುವಿನಲ್ಲಿ ಸಿದ್ಧೇಶ್ ಲಾಡ್ ಮುಂಬೈ ತಂಡವನ್ನು ಮುನ್ನಡೆಸಲಿದ್ದು, ಶಾರ್ದೂಲ್ ಠಾಕೂರ್ ಅವರನ್ನು ನಾಯಕತ್ವದಿಂದ ಕೈ ಬಿಡಲಾಗಿದೆ. ಠಾಕೂರ್ ಅವರ ಕೆಲಸದ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗಿದೆ. 2025-26ರ ಋತುವಿಗೆ ಅಜಿಂಕ್ಯ ರಹಾನೆ ಅವರಿಂದ ಠಾಕೂರ್ ಮುಂಬೈ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು.

42 ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ, ಕಳೆದ ಋತುವಿನಲ್ಲಿ ಶಾರ್ದೂಲ್‌ ನಾಯಕತ್ವದಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು. ರಣಜಿ ಟ್ರೋಫಿ ಸೀಸನ್ ಅಕ್ಟೋಬರ್ 11 ರಂದು ಆರಂಭವಾಗಲಿದ್ದು, ತಂಡವು ಚಂಡೀಗಢ ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿದೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ನ ಹಿರಿಯ ಅಧಿಕಾರಿಯೊಬ್ಬರು ಲಾಡ್ ಅವರ ನೇಮಕಾತಿಯನ್ನು ದೃಢಪಡಿಸಿದ್ದಾರೆ.

ಐಪಿಎಲ್ 2027 ರಲ್ಲಿಯೂ ಮುಂಬೈಗೆ ಮಹೇಲ ಜಯವರ್ಧನೆ ಕೋಚ್

ಗೋವಾಕ್ಕೆ ತೆರಳಿದ ನಂತರ ಒಂದು ವರ್ಷದ ಕೂಲಿಂಗ್-ಆಫ್ ಅವಧಿಯ ನಂತರ 34 ವರ್ಷ ವಯಸ್ಸಿನ ಅವರು 2024-25 ರಲ್ಲಿ ಮುಂಬೈ ಸೆಟಪ್‌ಗೆ ಮರಳಿದರು. ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಲಾಡ್ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದರು. ಅವರು ಎಂಟು ಪಂದ್ಯಗಳಿಂದ 77.40 ಸರಾಸರಿಯಲ್ಲಿ ಐದು ಶತಕಗಳು ಮತ್ತು ಒಂದು ಅರ್ಧಶತಕ ಸೇರಿದಂತೆ 774 ರನ್ ಗಳಿಸಿದ್ದರು.

ಮುಂಬೈ ಸಂಭಾವ್ಯ ತಂಡ

ಸಿದ್ಧೇಶ್ ಲಾಡ್ (ನಾಯಕ), ಆಯುಷ್ ಮ್ಹಾತ್ರೆ, ಮುಶೀರ್ ಖಾನ್, ಆಂಗ್ಕ್ರಿಶ್ ರಘುವಂಶಿ, ಅಖಿಲ್ ಹೆರ್ವಾಡ್ಕರ್, ಅಜಿಂಕ್ಯ ರಹಾನೆ, ಸರ್ಫರಾಜ್ ಖಾನ್, ಶಾರ್ದೂಲ್ ಠಾಕೂರ್ , ಸುವೇದ್ ಪಾರ್ಕರ್, ಸೂರ್ಯಾಂಶ್ ಶೆಡ್ಜ್, ಆಕಾಶ್ ಪಾರ್ಕರ್, ತುಷಾರ್ ದೇಶಪಾಂಡೆ, ಸಿಲ್ವೆಸ್ಟರ್ ಡಿಸೋಜಾ, ಇರ್ಫಾನ್ ಉಮೈರ್, ರಾಯ್ಸ್ಟಾನ್ ಡಯಾಸ್, ಪ್ರತೀಕ್ ಮಿಶ್ರಾ, ಆಕಾಶ್ ಆನಂದ್ (ವಿ.ಕೀ.), ಹಾರ್ದಿಕ್ ತಮೋರ್ (ವಿ.ಕೀ.), ಪ್ರಸಾದ್ ಪವಾರ್ (ವಾಕ್), ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಹಿಮಾಂಶು ಸಿಂಗ್, ಅಥರ್ವ ಅಂಕೋಲೇಕರ್, ಇಶಾನ್ ಮುಲ್ಚಂದಾನಿ.