ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

GT vs MI: ಚೊಚ್ಚಲ ಐಪಿಎಲ್‌ ಶತಕ ಬಾರಿಸಿ ಹಲವು ದಾಖಲೆ ಬರೆದ ತಿಲಕ್‌ ವರ್ಮಾ

IPL 2026: ಪಂದ್ಯದ ಬಗ್ಗೆ ಹೇಳುವುದಾದರೆ ಮೊದಲು ಬ್ಯಾಟಿಂಗ್‌ ನೆಡೆಸಿದ ಮುಂಬೈ 5 ವಿಕೆಟ್‌ಗೆ 199 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್‌ ಟೈಟಾನ್ಸ್‌ ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಂಡು 100 ರನ್‌ಗೆ ಸರ್ವಪತನ ಕಂಡಿತು. ಮುಂಬೈ ಭರ್ಜರಿ 99 ರನ್‌ ಅಂತರದ ಗೆಲುವು ಸಾಧಿಸಿತು.

ಚೊಚ್ಚಲ ಐಪಿಎಲ್‌ ಶತಕ ಬಾರಿಸಿ ಹಲವು ದಾಖಲೆ ಬರೆದ ತಿಲಕ್‌ ವರ್ಮಾ

Tilak Varma -

Abhilash BC
Abhilash BC Apr 21, 2026 7:21 AM

ಅಹಮದಾಬಾದ್‌, ಎ.21: ಎಪ್ರಿಲ್ 20, ಸೋಮವಾರ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026(IPL 2026) ರ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್(GT vs MI) ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 99 ರನ್‌ ಅಂತರದ ಗೆಲವು ಸಾಧಿಸಿತು. ಈ ಪಂದ್ಯದಲ್ಲಿ ಶತಕ ಬಾರಿಸಿ ಸಂಭ್ರಮಿಸಿದ ತಿಲಕ್‌ ವರ್ಮಾ(Tilak Varma) ಐಪಿಎಲ್‌ ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ತಿಲಕ್ 45 ಎಸೆತಗಳಲ್ಲಿ 101 ರನ್ ಗಳಿಸುವ ಮೂಲಕ ತಮ್ಮ ಮೊದಲ ಐಪಿಎಲ್ ಶತಕವನ್ನು ತಲುಪಿದರು. ಇದರೊಂದಿಗೆ ತಿಲಕ್ ಕೆಲವು ದಾಖಲೆಗಳನ್ನು ಸೃಷ್ಟಿಸಿದರು.

ಕೊನೆಯ 6 ಓವರ್‌ಗಳಲ್ಲಿ 82 ರನ್‌ ಗಳಿಸಿದ ತಿಲಕ್‌ ವರ್ಮಾ, ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್‌ನ ಕೊನೆಯ ಆರು ಓವರ್‌ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿ‌ದ ಮೊದಲ ಆಟಗಾರ ಎನಿಸಿದರು. ಇದಕ್ಕೂ ಮುನ್ನ ಈ ದಾಖಲೆ ಕ್ವಿಂಟನ್ ಡಿ ಕಾಕ್ ಅವರದ್ದಾಗಿತ್ತು. ಅವರು 2022 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕೊನೆಯ ಆರು ಓವರ್‌ಗಳಲ್ಲಿ 80 ರನ್ ಗಳಿಸಿದ್ದರು.

ಐಪಿಎಲ್ ಇನ್ನಿಂಗ್ಸ್‌ನ ಕೊನೆಯ ಆರು ಓವರ್‌ಗಳಲ್ಲಿ ಅತಿ ಹೆಚ್ಚು ರನ್‌ಗಳು

ತಿಲಕ್ ವರ್ಮಾ: 2026ರಲ್ಲಿ ಗುಜರಾತ್‌ ವಿರುದ್ಧ 82 ರನ್‌ಗಳು

ಕ್ವಿಂಟನ್ ಡಿ ಕಾಕ್: 2022ರಲ್ಲಿ ಕೆಕೆಆರ್ ವಿರುದ್ಧ 80 ರನ್‌ಗಳು

ರಿಷಭ್ ಪಂತ್: 2018ರಲ್ಲಿ ಸನ್‌ರೈಸರ್ಸ್‌ ವಿರುದ್ಧ 79 ರನ್‌ಗಳು

ಬ್ರೆಂಡನ್ ಮೆಕಲಮ್: 2008 ರಲ್ಲಿ ಕೆಕೆಆರ್ ವಿರುದ್ಧ 75 ರನ್‌ಗಳು

GT vs MI: ತಿಲಕ್‌ ಚೊಚ್ಚಲ ಶತಕ; ಗೆಲುವಿನ ಹಳಿಗೆ ಮರಳಿದ ಮುಂಬೈ ಇಂಡಿಯನ್ಸ್‌

ಏತನ್ಮಧ್ಯೆ, ತಿಲಕ್ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರ ಐತಿಹಾಸಿಕ ದಾಖಲೆಯನ್ನು ಸರಿಗಟ್ಟಿದ್ದಾರೆ. ತಿಲಕ್ ಅವರ 45 ಎಸೆತಗಳಲ್ಲಿ ಶತಕವು ಐಪಿಎಲ್‌ನಲ್ಲಿ ಮುಂಬೈ ಬ್ಯಾಟ್ಸ್‌ಮನ್‌ನಿಂದ ಜಂಟಿಯಾಗಿ ಗಳಿಸಿದ ಅತ್ಯಂತ ವೇಗದ ಶತಕವಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಸನತ್ ಜಯಸೂರ್ಯ ಹೆಸರಿನಲ್ಲಿತ್ತು. ಜಯಸೂರ್ಯ 2008 ರಲ್ಲಿ 45 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಐಪಿಎಲ್‌ನಲ್ಲಿ ಮುಂಬೈ ಪರ ವೇಗದ ಶತಕಗಳು

ಸನತ್ ಜಯಸೂರ್ಯ-45 ಎಸೆತ (2008)

ತಿಲಕ್ ವರ್ಮಾ- 45 ಎಸೆತ (2026)

ಕ್ಯಾಮರೂನ್ ಗ್ರೀನ್-47 ಎಸೆತ(2023)

ಸೂರ್ಯಕುಮಾರ್ ಯಾದವ್‌-49 ಎಸೆತ(2023)

ಪಂದ್ಯ ಗೆದ್ದ ಮುಂಬೈ

ಪಂದ್ಯದ ಬಗ್ಗೆ ಹೇಳುವುದಾದರೆ ಮೊದಲು ಬ್ಯಾಟಿಂಗ್‌ ನೆಡೆಸಿದ ಮುಂಬೈ 5 ವಿಕೆಟ್‌ಗೆ 199 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಗುಜರಾತ್‌ ಟೈಟಾನ್ಸ್‌ ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಂಡು 100 ರನ್‌ಗೆ ಸರ್ವಪತನ ಕಂಡಿತು. ಮುಂಬೈ ಭರ್ಜರಿ 99 ರನ್‌ ಅಂತರದ ಗೆಲುವು ಸಾಧಿಸಿತು.