ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಲು ಸೂರ್ಯವಂಶಿ ರೆಡಿ!

Vaibhav Sooryavanshi: ಕಳೆದ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸೂರ್ಯವಂಶಿ, ಲೀಗ್ ವೃತ್ತಿಜೀವನದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ನಂತರ, ಅವರು 35 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಟೂರ್ನಿಯ ಇತಿಹಾಸದಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಂತ ವೇಗದ ಶತಕವಾಗಿದೆ.

ಐರ್ಲೆಂಡ್‌ ಸರಣಿಗೆ ಸೂರ್ಯವಂಶಿ ಆಯ್ಕೆ ಸಾಧ್ಯತೆ

Vaibhav Sooryavanshi -

Abhilash BC
Abhilash BC Apr 14, 2026 11:44 AM

ಮುಂಬಯಿ, ಎ.14: ತನ್ನ ಸ್ಫೋಟಕ ಬ್ಯಾಟಿಂಗ್‌ ಮೂಲಕ ಈಗಾಗಲೇ ವಿಶ್ವ ಕ್ರಿಕೆಟ್‌ನಲ್ಲಿ ಗಮನಸೆಳೆದಿರುವ 15 ವರ್ಷದ ವೈಭವ್ ಸೂರ್ಯವಂಶಿ(Vaibhav Sooryavanshi)) ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ವರ್ಷದ ಜೂನ್‌ನಲ್ಲಿ ನಡೆಯಲಿರುವ ಭಾರತದ ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆ ಮಾಡಬಹುದಾದವರ ಪಟ್ಟಿಯಲ್ಲಿ ಈ ಹದಿಹರೆಯದ ಆಟಗಾರನ ಸ್ಥಾನ ಸಿಗಲಿದೆ ಎಂದು ವರದಿಯಾಗಿದೆ.

ದೇಶೀಯ ಕ್ರಿಕೆಟ್‌ನಲ್ಲಿ ಬಿಹಾರವನ್ನು ಪ್ರತಿನಿಧಿಸುವ ಸೂರ್ಯವಂಶಿ, ತಮ್ಮ ನಿರ್ಭೀತ ಬ್ಯಾಟಿಂಗ್ ಮೂಲಕ ಐಪಿಎಲ್ 2026ರಲ್ಲಿ ಮಿಂಚುತ್ತಿದ್ದಾರೆ. ಐದು ಇನ್ನಿಂಗ್ಸ್‌ಗಳಲ್ಲಿ 263.16 ರ ಅದ್ಭುತ ಸ್ಟ್ರೈಕ್-ರೇಟ್‌ನಲ್ಲಿ 200 ರನ್‌ಗಳನ್ನು ಗಳಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಅನ್ನು ಪ್ರತಿನಿಧಿಸುವ ಅವರು ಇಲ್ಲಿಯವರೆಗೆ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಮತ್ತು ಜಸ್ಪ್ರೀತ್ ಬುಮ್ರಾ, ಜೋಶ್‌ ಹ್ಯಾಜಲ್‌ವುಡ್‌ ಅವರಂತಹ ಅನುಭವಿ ಬೌಲರ್‌ಗಳಿಗೂ ಲೀಲಾಜಾಲವಾಗಿ ಸಿಕ್ಸರ್‌, ಬಾಂಡರಿ ಬಾರಿಸು ಸಾಮರ್ಥ್ಯ ಹೊಂದಿದ್ದಾರೆ.

"ಸೂರ್ಯವಂಶಿ ಐರ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಲಿದ್ದಾರೆ. ಆಯ್ಕೆದಾರರು ಅವರ ಹೆಸರನ್ನು ಇತರ ಅನೇಕ ಆಟಗಾರರ ಜೊತೆಗೆ ಶಾರ್ಟ್‌ಲಿಸ್ಟ್ ಮಾಡಿದ್ದಾರೆ" ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಮೂಲವೊಂದು ಹೇಳಿರುವುದಾಗಿ ವರದಿಯಾಗಿದೆ.

ಐಪಿಎಲ್‌ ಚೊಚ್ಚಲ ಪಂದ್ಯದಲ್ಲೇ ಸಂಚಲನ ಮೂಡಿಸಿದ 21 ವರ್ಷದ ಸಕಿಬ್ ಹುಸೇನ್ ಯಾರು?

ಕಳೆದ ವರ್ಷ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸೂರ್ಯವಂಶಿ, ಲೀಗ್ ವೃತ್ತಿಜೀವನದ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ನಂತರ, ಅವರು 35 ಎಸೆತಗಳಲ್ಲಿ ಶತಕ ಗಳಿಸಿದರು. ಇದು ಟೂರ್ನಿಯ ಇತಿಹಾಸದಲ್ಲಿ ಭಾರತೀಯನೊಬ್ಬ ಗಳಿಸಿದ ಅತ್ಯಂತ ವೇಗದ ಶತಕವಾಗಿದೆ.

ಇತ್ತೀಚೆಗೆ, ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ವೈಭವ್ ಸೂರ್ಯವಂಶಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಮೆಚ್ಚುಗೆ ಸೂಚಿಸಿದ್ದರು. 'ಈ ಅದ್ಭುತ ಆಟಗಾರ ಖಂಡಿತವಾಗಿಯೂ ಟೀಮ್ ಇಂಡಿಯಾಗೆ ಅತ್ಯಂತ ಕಿರಿಯ ಆಟಗಾರನಾಗಿ ಪದಾರ್ಪಣೆ ಮಾಡಲು ಅರ್ಹ. ಅವರಂತಹ ಪ್ರತಿಭಾನ್ವಿತ ಮತ್ತು ತುಂಬಾ ಚಿಕ್ಕ ವಯಸ್ಸಿನ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಸಿಗುವುದು ಅಪರೂಪ. ಭಾರತಕ್ಕಾಗಿ ಅತ್ಯಂತ ಕಿರಿಯ ಆಟಗಾರನಾಗಿ ದಾಖಲಾಗಲು ಅವರ ಹೆಸರು ಖಂಡಿತವಾಗಿಯೂ ಅರ್ಹರು" ಎಂದು ಧುಮಾಲ್ X ನಲ್ಲಿ ಬರೆದಿದ್ದರು.

ಒಂದೊಮ್ಮೆ ಭಾರತ ಪರ ಸೂರ್ಯವಂಶಿ ಪದಾರ್ಪಣೆ ಮಾಡಿದರೆ, ಅವರು ಭಾರತಕ್ಕಾಗಿ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಲಿದ್ದಾರೆ. ಪ್ರಸ್ತುತ ದಾಖಲೆ ಶಫಾಲಿ ವರ್ಮಾ ಹೆಸರಿನಲ್ಲಿದೆ. ಶಫಾಲಿ 15 ವರ್ಷ(7 ತಿಂಗಳು ಮತ್ತು 27 ದಿನ)ದಲ್ಲಿ ಪದಾರ್ಪಣೆ ಮಾಡಿದ್ದರು.