ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂಬೈನಲ್ಲಿ 18 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ವಿರಾಟ್ ಕೊಹ್ಲಿ ದಂಪತಿ

Virat Kohli-Anushka Sharma: ಅಲಿಬಾಗ್ ಮುಂಬೈನ ಅತ್ಯಂತ ದುಬಾರಿ ಪ್ರದೇಶವಾಗಿದೆ. ಸಮುದ್ರಕ್ಕೆ ಸಮೀಪವಿರುವ ಕಾರಣ ಇಲ್ಲಿ ವಾಸಿಸಲು ಅನೇಕ ಸೆಲೆಬ್ರಿಟಿಗಳು ಮತ್ತು ದೊಡ್ಡ ಉದ್ಯಮಿಗಳು ಆಸಕ್ತಿ ಹೊಂದಿದ್ದಾರೆ. ಅಮಿತಾ ಬಚ್ಚನ್ ಕೂಡ ಇಲ್ಲಿ ಹಾಲಿಡೇ ಹೌಸ್​ ಹೊಂದಿದ್ದಾರೆ.

ಮುಂಬೈನಲ್ಲಿ 18 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಖರೀದಿಸಿದ ಕೊಹ್ಲಿ

Kohli and Anushka -

Abhilash BC
Abhilash BC Jul 27, 2026 4:34 PM

ಮುಂಬಯಿ, ಜು.27: ಟೀಮ್‌ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಭಾರತ ತೊರೆದು ಶಾಶ್ವತವಾಗಿ ಕುಟುಂಬ ಸಮೇತರಾಗಿ ಲಂಡನ್​ನಲ್ಲಿ ನೆಲೆಯಾಗಲಿದ್ದಾರೆ ಎಂಬ ಮಾತುಗಳು ಕಳೆದೊಂದು ವರ್ಷದಿಂದ ಕೇಳಿಬರುತ್ತಿದೆ. ಆದರೆ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಮುಂಬೈನಲ್ಲಿ ಹೊಸ ಐಷಾರಾಮಿ ಅಪಾರ್ಟ್ಮೆಂಟ್ ಒಂದನ್ನು ಖರೀದಿಸಿದ್ದಾರೆ.

ಮುಂಬೈನ ವರ್ಸೋವಾದಲ್ಲಿಸುಮಾರು 2,644 ಚದರ ಅಡಿ ವಿಸ್ತೀರ್ಣ ಹೊಂದಿರುವ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದಾರೆ. ಇದರ ಬೆಲೆ 18.29 ಕೋಟಿ ರೂ. ಎನ್ನಲಾಗಿದೆ. ಇದು ವರ್ಸೋವಾದ ಗೋದ್ರೆಜ್ ಸ್ಕೈಶೋರ್ ಕಟ್ಟಡದ ಮೇಲಿನ ಮಹಡಿಯಲ್ಲಿದೆ. ಈ ಮನೆಯಲ್ಲಿ 316 ಚದರ ಅಡಿ ವಿಶೇಷ ತೆರೆದ ಜಾಗ ಹಾಗೂ ಮೂರು ಕಾರುಗಳ ಪಾರ್ಕಿಂಗ್ ಸೌಲಭ್ಯವೂ ಇದೆ ಎಂದು ಹೇಳಲಾಗಿದೆ.

ಜುಲೈ 21, 2026ರಂದು ಆಸ್ತಿಯ ನೋಂದಣಿ ನಡೆದಿದೆ. ಇದಕ್ಕಾಗಿ 1.09 ಕೋಟಿ ಸ್ಟಾಂಪ್ ಡ್ಯೂಟಿ ಹಾಗೂ 30 ಸಾವಿರ ನೋಂದಣಿ ಶುಲ್ಕವನ್ನು ದಂಪತಿ ಪಾವತಿಸಿದ್ದಾರೆ. ಒಂದು ಚದರ ಅಡಿಗೆ ಸುಮಾರು 69,159 ದರದಲ್ಲಿ ಈ ವ್ಯವಹಾರ ನಡೆದಿರುವುದಾಗಿ ವರದಿಯಾಗಿದೆ.

ಶೂಟಿಂಗ್ ವಿಶ್ವಕಪ್‌; ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಸೋಲಿಸಿ ಚಿನ್ನ ಗೆದ್ದ ಇಶಾ ಸಿಂಗ್

ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2022ರಲ್ಲಿ ಈ ಅಲಿಬಾಗ್ ಪ್ರದೇಶದಲ್ಲಿ 8 ಎಕರೆ ಜಾಗವನ್ನು ಖರೀದಿಸಿದ್ದರು. ಈ 8 ಎಕರೆ ಜಾಗಕ್ಕೆ ವಿರುಷ್ಕಾ ದಂಪತಿ ಬರೋಬ್ಬರಿ 19 ಕೋಟಿ ರೂ. ನೀಡಿದರು. ಈ 8 ಎಕರೆ ಜಾಗದಲ್ಲಿ ಮನೆ, ಉದ್ಯಾನ, ಈಜುಕೊಳ ಹೀಗೆ ನಾನಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಲ್ಲದೆ, 13 ಕೋಟಿ ರೂ.ಗಳಲ್ಲಿ ಐಷಾರಾಮಿ ಮನೆಯನ್ನು ಕೊಹ್ಲಿ ಮತ್ತು ಅನುಷ್ಕಾ ಅವರ ಅಭಿರುಚಿಗೆ ತಕ್ಕಂತೆ ನಿರ್ಮಿಸಲಾಗಿದೆ. ಈ ಮನೆಯನ್ನು ಜಾಗತಿಕ ಖ್ಯಾತಿಯ ಎಸ್‌ಎಒಟಿಎ (SAOTA) ವಾಸ್ತುಶಿಲ್ಪಿಗಳು ಕ್ಯಾಲಿಫೋರ್ನಿಯಾದ ಕೊಂಕಣ ಶೈಲಿಯಲ್ಲಿ ವಿನ್ಯಾಸಗೊಳಿಸಿದ್ದಾರೆ.

ಅಲಿಬಾಗ್ ಮುಂಬೈನ ಅತ್ಯಂತ ದುಬಾರಿ ಪ್ರದೇಶವಾಗಿದೆ. ಸಮುದ್ರಕ್ಕೆ ಸಮೀಪವಿರುವ ಕಾರಣ ಇಲ್ಲಿ ವಾಸಿಸಲು ಅನೇಕ ಸೆಲೆಬ್ರಿಟಿಗಳು ಮತ್ತು ದೊಡ್ಡ ಉದ್ಯಮಿಗಳು ಆಸಕ್ತಿ ಹೊಂದಿದ್ದಾರೆ. ಅಮಿತಾ ಬಚ್ಚನ್ ಕೂಡ ಇಲ್ಲಿ ಹಾಲಿಡೇ ಹೌಸ್​ ಹೊಂದಿದ್ದಾರೆ.