ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುಗಾದಿ ವರ್ಷ ಭವಿಷ್ಯ: ಕನ್ಯಾ ರಾಶಿಗೆ ಪರಾಭವ ನಾಮ ಸಂವತ್ಸರ ಯಾವ ರೀತಿಯ ಬದಲಾವಣೆ ನೀಡಬಹುದು?

ಪರಾಭವ ನಾಮ ಸಂವತ್ಸರದಿಂದಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲವು ರೀತಿಯ ಬದಲಾವಣೆ ಕಂಡುಬರಲಿದೆ. ಈ ಸಂವತ್ಸರವು ಗ್ರಹಗಳ ಮೇಲೆ ಹಲವು ರೀತಿಯ ಪರಿಣಾಮ ಬೀರಬಹುದು. ಕನ್ಯಾರಾಶಿಯವರ ಜೀವನದ ಮೇಲೆ ಈ ವರ್ಷ ಯಾವ ರೀತಿಯ ಪ್ರಭಾವ ಬೀರಬಹುದು? ಈ ವರ್ಷ ನಿಮಗೆ ಒಳಿತೇ? ಕೆಡುಕೇ? ಎಂದು ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

Profile
Pushpa Kumari Mar 23, 2026 10:45 AM

ಬೆಂಗಳೂರು,ಮಾ.23: ಕನ್ಯಾ ರಾಶಿಗೆ ಅಧಿಪತಿ ಬುಧ ಆಗಿದ್ದಾನೆ. ಹೀಗಾಗಿ ಹೆಚ್ಚಾಗಿಯೇ ಪ್ತಭಾವ ಇರಲಿದ್ದು ಮಿಶ್ರ ಫಲಗಳು ನಿಮಗೆ ಉಂಟಾಗಬಹುದು. ಶನಿಯ ದೃಷ್ಠಿ ನಿಮಗೆ ಇರುವುದರಿಂದ ಜೀವನದಲ್ಲಿ ಬಹಳಷ್ಟು ಏರುಪೇರು ಉಂಟಾಗುವ ಸಾಧ್ಯತೆ ಇರುತ್ತದೆ. ಆದರೆ ಆರ್ಥಿಕವಾಗಿ ನೀವು ಸದೃಢ ವಾಗಲಿದ್ದು ಬೇರೆ ಮೂಲಗಳಿಂದ ಹಣ ಬರುವ ಸಾಧ್ಯತೆ ಇರುತ್ತದೆ. ಅದೇ ರೀತಿ ವ್ಯಾಪಾರ, ವ್ಯವಹಾರವನ್ನು ಶುರು ಮಾಡಲು ಬಹಳ ಲಾಭದಾಯಕವಾಗಿರುತ್ತದೆ. ಶತ್ರುಗಳ ಬಗ್ಗೆ ಜಾಗೃತಿ ವಹಿಸಬೇಕಾಗಿದ್ದು ಈ ಅವಧಿಯಲ್ಲಿ ಹಣಕಾಸಿನ ವಿಷಯವಾಗಿ, ಹೂಡಿಕೆಯ ಭಾಗವಾಗಿ ಬಹಳ ಜಾಗರೂಕರಾಗಿರಿ ಎಂದು ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.