ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುಗಾದಿ ವರ್ಷ ಭವಿಷ್ಯ: ಸಿಂಹ ರಾಶಿಯವರು ಈ ವರ್ಷ ಪ್ರತಿ‌ ಹೆಜ್ಜೆಯಲ್ಲೂ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು

ಪರಾಭವ ನಾಮ ಸಂವತ್ಸರ ಆರಂಭವಾಗಿದೆ.‌ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಂವತ್ಸರದಲ್ಲಿ ಹಲವು ರೀತಿಯ ಬದಲಾವಣೆ ಕಂಡುಬರಲಿದೆ. ಗ್ರಹಗತಿಗಳ ಸ್ಥಾನ ಪಲ್ಲಟವಾಗಲಿದ್ದು, ಗುರು, ಶನಿ, ರಾಹು, ಮತ್ತು ಕೇತು ಗ್ರಹಗಳ ಸಂಚಾರದಲ್ಲಿ ಪ್ರಮುಖ ಬದಲಾವಣೆ ಆಗಲಿದೆ. ಸಿಂಹ ರಾಶಿಯವರಿಗೆ ಈ ವರ್ಷ ಏನೆಲ್ಲ ಬದಲಾವಣೆ ಆಗಲಿದೆ? ಈ ವರ್ಷ ಶುಭವೋ? ಅಶುಭವೋ? ಎಂದು ಖ್ಯಾತ ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

Profile
Pushpa Kumari Mar 22, 2026 2:42 PM

ಬೆಂಗಳೂರು, ಮಾ. 22: ಈ ವರ್ಷ ರಾಹು, ಕೇತುವಿನ ಪ್ರಭಾವ ಸಿಂಹ ರಾಶಿಗೆ ಹೆಚ್ಚಾಗಿಯೇ ಇರಲಿದ್ದು, ಗಣನೀಯ ಬದಲಾವಣೆ ಆಗಲಿದೆ. ಆರ್ಥಿಕವಾಗಿ ಅಭಿವೃದ್ಧಿಯಾಗಿದ್ದರೂ ಅನಾವಶ್ಯಕ ಖರ್ಚುಗಳು ಜಾಸ್ತಿಯಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಯಾವುದೇ ಹೆಜ್ಜೆಯನ್ನು ಇಡುವುದು ಉತ್ತಮ.‌ ಸುಖಾ ಸುಮ್ಮನೇ ಕೆಲವೊಂದು ಆರೋಪ ಹಾಗೂ ಸನ್ನಿವೇಶಗಳನ್ನು ನೀವು ಎದುರಿಸಬೇಕಾಗಿ ಬರಬಹುದು. ಕೆಲಸದ ಒತ್ತಡ, ಸಿಟ್ಟು , ಕೋಪ ಇತ್ಯಾದಿ ಸಮಸ್ಯೆಗಳು ಹೆಚ್ಚಾಗಬಹುದು. ಈ ವರ್ಷ ನಿಮಗೆ ಅಶುಭ ಫಲವೇ ಹೆಚ್ಚಾಗಿ ಇದ್ದು, ಶಿವನ ಆರಾಧನೆ ಮಾಡುವುದು ಒಳಿತು‌ ಎಂದು ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.