ಮರ್ಸಿಡಿಸ್ ಕಾರ್ ಡಿಕ್ಕಿ ಹೊಡೆದು ಬಿದ್ದರೂ ಮರುಕ್ಷಣ ಎದ್ದು ನಡೆದ ಪಾದಾಚಾರಿ; ಅಚ್ಚರಿಯ ವಿಡಿಯೊ ವೈರಲ್
Viral Video: ಹರಿಯಾಣದ ಚಂಡೀಗಢದ ಐಷಾರಾಮಿ ಪ್ರದೇಶ ಸೆಕ್ಟರ್ 26ರಲ್ಲಿ ಮರ್ಸಿಡಿಸ್ ಕಾರ್ ಚಾಲಕ ಪಾದಾಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ದೃಶ್ಯ ಮೊಬೈಲ್ ವಿಡಿಯೊದಲ್ಲಿ ಸೆರೆಯಾಗಿದೆ. ಧೂಳು ಮತ್ತು ಗುಂಡಿ ತುಂಬಿದ ರಸ್ತೆಯಲ್ಲಿ ಮರ್ಸಿಡಿಸ್ ಕಾರು ಅತೀ ವೇಗವಾಗಿ ಬಂದಿದ್ದು ಇದನ್ನು ಸಾರ್ವ ಜನಿಕರು ಅರ್ಧದಲ್ಲೆ ತಡೆದಿದ್ದಾರೆ. ಆದರೂ ಆತ ಕಾರನ್ನು ರಿವರ್ಸ್ ಚಲಾಯಿಸಿ ಅಲ್ಲಿಯೇ ನಿಂತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಅಚ್ಚರಿ ಎಂದರೆ ಕಾರ್ ಡಿಕ್ಕಿಯಾಗಿ ಬಿದ್ದಿದ್ದರೂ ಆತ ಪಾರಾಗಿದ್ದು, ತಕ್ಷಣ ಎದ್ದು ನಡೆದಿದ್ದಾನೆ.
ಚಂಡೀಗಢದಲ್ಲಿ ಪಾದಾಚಾರಿಗೆ ಡಿಕ್ಕಿ ಹೊಡೆದ ಕಾರ್ -
ಚಂಡೀಗಢ, ಜು. 13: ಇತ್ತೀಚೆಗೆ ಹಿಟ್ ಆ್ಯಂಡ್ ರನ್ ಪ್ರಕರಣ ದಿನಕ್ಕೊಂದಾದರೂ ವರದಿಯಾಗುತ್ತಲೇ ಇರುತ್ತದೆ. ಇದೀಗ ಹರಿಯಾಣದ ಚಂಡೀಗಢದ ಐಷಾರಾಮಿ ಪ್ರದೇಶ ಸೆಕ್ಟರ್ 26ರಲ್ಲಿ ಮರ್ಸಿಡಿಸ್ ಕಾರ್ ಚಾಲಕ ಪಾದಾಚಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿವೆ. ಧೂಳು ಮತ್ತು ಗುಂಡಿ ತುಂಬಿದ ರಸ್ತೆಯಲ್ಲಿ ಮರ್ಸಿಡಿಸ್ ಕಾರು ಅತೀ ವೇಗವಾಗಿ ಬಂದಿದ್ದು ಇದನ್ನು ಸಾರ್ವಜನಿಕರು ಅರ್ಧದಲ್ಲೆ ತಡೆದಿದ್ದಾರೆ. ಆದರೂ ಆತ ಕಾರನ್ನು ರಿವರ್ಸ್ ಚಲಾಯಿಸಿ ಅಲ್ಲಿಯೇ ನಿಂತಿದ್ದ ವ್ಯಕ್ತಿಗೆ ಜೋರಾಗಿ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಶನಿವಾರ (ಜುಲೈ 11) ಸಂಜೆ ನಗರದ ಕ್ಲಬ್‌ನ ಹೊರಗೆ ಈ ಘಟನೆ ನಡೆದಿದ್ದು ಕಾರಿನ ಚಾಲಕ ಪರಾರಿಯಾಗುವ ಮೊದಲು ಓರ್ವ ವ್ಯಕ್ತಿಯನ್ನು ಗಾಯಗೊಳಿಸಿದ್ದಾನೆ. ಪೊಲೀಸರು ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಧೂಳು ತುಂಬಿದ, ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ಮರ್ಸಿಡಿಸ್ ಕಾರು ರಭಸದಿಂದ ವೇಗವಾಗಿ ಬಂದಿದೆ. ಮರ್ಸಿಡಿಸ್ ಕಾರು ಮುಂದೆ ಸಾಗುತ್ತಿದ್ದಂತೆ ಜನಸಮೂಹ ಅದನ್ನು ನಿಲ್ಲಿಸಿದೆ. ಕಾರ್ ಹಿಂದಕ್ಕೆ ಚಲಿಸಿ ಡಿಕ್ಕಿ ಹೊಡೆದಿದೆ.
ವಿಡಿಯೊ ನೋಡಿ:
It’s not the car brand’s, it’s the Indian drivers. Over-speeding Mercedes first hit two boys and then, while reversing, rammed another person in Sector 26, Chandigarh. All this happened in broad daylight yesterday. The highest number of police deployment should be in 26 IYKWIM pic.twitter.com/OFZWGFpXzN
— Nikhil saini (@iNikhilsaini) July 12, 2026
ಪೊಲೀಸರ ಮಾಹಿತಿ ಪ್ರಕಾರ, ಸೆಕ್ಟರ್ 26ರ ಬಾಬುಧಾಮ್ ಕಾಲೋನಿಯ ನಿವಾಸಿ ಅಮನ್‌ಜಾತ್ ಮತ್ತು ಸೆಕ್ಟರ್ 44ರ ವ್ಯಕ್ತೊ ಅಲನ್ಸ್ ಪ್ರೀತ್ ಶನಿವಾರ ಸಂಜೆ ಡಿಸ್ಕೋ ಕ್ಲಬ್‌ಗೆ ಹೋಗಿದ್ದರು. ಅವರು ಕ್ಲಬ್‌ನಿಂದ ಹೊರಗೆ ಬರುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ.
ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ
ವೇಗದಲ್ಲಿ ಧಾವಿಸಿದ ಕಾರ್ ಓರ್ವನ ಮೇಲೆ ಹರಿದು ಹೋಗಿದ್ದರೂ, ಆತ ಕೆಲವೇ ನಿಮಿಷದಲ್ಲಿ ಎದ್ದು ನಡೆದುಕೊಂಡು ಹೋಗಿ ಪವಾಡ ಸದೃಶವಾಗಿ ಪರಾಗಿದ್ದಾರೆ. ಈ ಮಾಹಿತಿ ಪಡೆದ ನಂತರ, ಸೆಕ್ಟರ್ 26 ಪೊಲೀಸರು ಸ್ಥಳಕ್ಕೆ ಆಗಮಿಸಿ, ಗಾಯಗೊಂಡ ಇಬ್ಬರನ್ನು ಆಸ್ಪತ್ರೆ ಗೆ ಕರೆದೊಯ್ದರು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಪೊಲೀಸರು ಸ್ಥಳದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ವಶಪಡಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ. ವಾಹನ ಸಂಖ್ಯೆ ಮತ್ತು ಚಾಲಕನನ್ನು ಗುರುತಿಸಲು ಕಾರ್ಯಾಚರಣೆ ನಡೆಯುತ್ತಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ಇತರ ಪುರಾವೆಗಳ ಆಧಾರದ ಮೇಲೆ, ಆರೋಪಿಗಳನ್ನು ಶೀಘ್ರದಲ್ಲೇ ಗುರುತಿಸಿ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.