ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

6 ವರ್ಷದ ಮೊಮ್ಮಗಳಿಗೆ ಚಲಾಯಿಸಲು ಕಾರ್‌ ಬಿಟ್ಟು ಕೊಟ್ಟ ಪೊಲೀಸ್‌ ಅಧಿಕಾರಿ; ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂದ ನೆಟ್ಟಿಗರು

Viral News: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಜನದಟ್ಟಣೆಯ ರಸ್ತೆಯಲ್ಲಿಯೇ 6 ವರ್ಷದ ಮೊಮ್ಮಗಳಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಾರ್‌ ಚಲಾಯಿಸಲು ಅವಕಾಶ ನೀಡಿದ ಘಟನೆ ಬೆಳಕಿಗೆ ಬಂದಿದೆ. ಇದೀಗ ಆ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.

ಅಪ್ರಾಪ್ತ ಬಾಲಕಿಗೆ ಕಾರು ಚಲಾಯಿಸಲು ಅವಕಾಶ ನೀಡಿದ ಪೊಲೀಸ್ ಅಧಿಕಾರಿ

ಅಪ್ರಾಪ್ತ ಮೊಮ್ಮಗಳಿಗೆ ಕಾರ್‌ ಚಲಾಯಿಸಲು ಕೊಟ್ಟ ಪೊಲೀಸ್ ಅಧಿಕಾರಿ -

Profile
Pushpa Kumari Jul 13, 2026 6:28 PM

ಹೈದರಾಬಾದ್‌, ಜು‌.1 3: ಕಾನೂನುಗಳನ್ನು ಜಾರಿಗೊಳಿಸಬೇಕಾದ ಪೊಲೀಸ್ ಅಧಿಕಾರಿಯೇ ನಿಯಮ ಉಲ್ಲಂಘಿಸಿದರೆ ಏನೆಲ್ಲ ಸಮಸ್ಯೆಯಾಗುತ್ತದೆ ಎಂಬುದಕ್ಕೆ ಈ ಘಟನೆ (Viral News) ಸಾಕ್ಷಿ. ಹೈದರಾಬಾದ್‌ನ ಜನದಟ್ಟಣೆಯ ರಸ್ತೆಯಲ್ಲಿಯೇ 6 ವರ್ಷದ ಅಪ್ರಾಪ್ತ ಮೊಮ್ಮಗಳಿಗೆ ಪೊಲೀಸ್ ಅಧಿಕಾರಿಯೊಬ್ಬರು ಕಾರ್‌ ಚಲಾಯಿಸಲು ಅವಕಾಶ ನೀಡಿದ ಘಟನೆ ಕಂಡು ಬಂದಿದೆ. ಇದರ ಬಗ್ಗೆ ಮಾಹಿತಿ ಪಡೆದ ನಂತರ, ಆರೋಪಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು ಕ್ರಿಮಿನಲ್ ಮೊಕದ್ದಮೆ ಹೂಡಲಾಯಿತು.

ಪುಜಾರಿ ತಿರುಪತಿ ಎಂಬವರು ಹೈದರಾಬಾದ್ ಪೊಲೀಸ್ ಸಿಬ್ಬಂದಿಯಾಗಿದ್ದು, ಅಪ್ರಾಪ್ತ ಮೊಮ್ಮಗಳಿಗೆ ಕಾರು ಚಲಾಯಿಸಲು ಅವಕಾಶ ನೀಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅದರಲ್ಲೂ ವಾಹನ ದಟ್ಟಣೆ ಹೆಚ್ಚಿರುವ ರಸ್ತೆಯಲ್ಲಿ ಈ ಅಧಿಕಾರಿ ತನ್ನ ಚಿಕ್ಕ ವಯಸ್ಸಿನ ಮೊಮ್ಮಗಳಿಗೆ ಕಾರು ಚಲಾಯಿಸಲು ಸ್ಟೀರಿಂಗ್ ನೀಡಿದ್ದು ಆಘಾತ ತಂದಿದೆ. ಅಪ್ರಾಪ್ತ ಬಾಲಕಿ ಕಾರು ಚಲಾಯಿಸಿದ್ದರಿಂದ ರಸ್ತೆಯಲ್ಲಿ ಟ್ರಾಫಿಕ್ ಉಂಟಾಗಿ ಇತರ ವಾಹನ ಸವಾರರು ಆತಂಕಕ್ಕೆ ಒಳಗಾದರು.

ವೈರಲ್‌ ಪೋಸ್ಟ್‌ ಇಲ್ಲಿದೆ:



ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣವೇ ಅಧಿಕಾರಿಯನ್ನು ಪ್ರಶ್ನಿಸಿದರು. ಜನರು ತರಾಟೆಗೆ ತೆಗೆದುಕೊಂಡಾಗ, ಪೊಲೀಸ್ ಅಧಿಕಾರಿ ಪುಜಾರಿ ತಿರುಪತಿ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು ತನ್ನದೆ ಸರಿ ಎಂಬಂತೆ ವಾದ ಮಾಡಿದರು. ಪೊಲೀಸ್‌ ಕರ್ತವ್ಯ ನಿರ್ಲಕ್ಷ್ಯ ಮಾತ್ರ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರ್‌ ನೋಡಿ ಮಾಲಕ ಭಾವುಕ

ಸಂಚಾರ ಪೊಲೀಸರು ಈಗ ಪ್ರಕರಣ ದಾಖಲಿಸಿದ್ದಾರೆ. ನರಸಿಂಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಗೆ ವಾಹನ ಚಲಾಯಿಸಲು ಅನುಮತಿ ನೀಡಿದ್ದಕ್ಕಾಗಿ ಪೂಜಾರಿ ತಿರುಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಮತ್ತು ತನಿಖೆಯನ್ನು ಪ್ರಾರಂಭಿಸುವಂತೆ ಡಿಜಿಪಿ ಸೂಚಿಸಿದ್ದಾರೆ.