ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮದುವೆ ಬೇಡವೆಂದು ತಲೆ ಬೋಳಿಸಿಕೊಂಡು ಆಕ್ರೋಶ ವ್ಯಕ್ತ ಪಡಿಸಿದ ಜೆನ್‌ ಝೀ ಯುವತಿ: ವಿಡಿಯೊ ವೈರಲ್

Viral Video: ಒಂದು ನಿರ್ದಿಷ್ಟ ಮದುವೆ ವಯಸ್ಸು ತುಂಬುತ್ತಿದ್ದಂತೆ ಪೋಷಕರು ಮದುವೆ ಮಾಡಲು ಇಚ್ಚಿಸುತ್ತಾರೆ. ಆದರೆ ಇಂದಿನ ಜೆನ್‌ ಝೀ ತಲೆಮಾರಿಗೆ ಬೇಗನೇ ಮದುವೆಯಾಗುವುದ ಇಷ್ಟವಿಲ್ಲ. ಇದೇ ಕಾರಣಕ್ಕೆ ಇಲ್ಲೊಬ್ಬ ಯುವತಿ ತನ್ನ ತಲೆಯನ್ನು ಪೂರ್ತಿಯಾಗಿ ಬೋಳಿಸಿಕೊಂಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಆಕೆಯ ಧೈರ್ಯಕ್ಕೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ತಾಯಿ ಮದುವೆ ನಿಶ್ಚಯಿಸಿದ್ದಕ್ಕೆ ತಲೆಯನ್ನೇ ಬೋಳಿಸಿಕೊಂಡ ಯುವತಿ

ತಾಯಿ ಮದುವೆ ನಿಶ್ಚಯಿಸಿದ್ದಕ್ಕೆ ತಲೆಯನ್ನೇ ಬೋಳಿಸಿಕೊಂಡ ಯುವತಿ -

Profile
Pushpa Kumari Jul 13, 2026 7:08 PM

ನವದೆಹಲಿ, ಜು. 13: ಮದುವೆ ವಿಚಾರದಲ್ಲಿ ಬೇಸೆತ್ತ ಅನೇಕ ಯುವಕ- ಯುವತಿಯರು ಇದ್ದಾರೆ. ಇಷ್ಟದಂತೆ ಬದುಕಲು ಅಥವಾ ಯಾರಿಗೂ ಅವಲಂಬಿತರಾಗಿ ಬದುಕಲು ಇಷ್ಟ ಇಲ್ಲದ ಕೆಲವರು ಮದುವೆ ನಿರಾಕರಿಸುತ್ತಾರೆ. ಅದರಲ್ಲೂ ಭಾರತದಲ್ಲಿ ಮಕ್ಕಳು ಒಂದು ನಿರ್ದಿಷ್ಟ ವಯಸ್ಸು ತುಂಬುತ್ತಿದ್ದಂತೆ ಪೋಷಕರು ಮದುವೆ ಮಾಡಲು ಇಚ್ಚಿಸುತ್ತಾರೆ. ಆದರೆ ಸ್ವಂತ ಕಾಲ ಮೇಲೆ ನಿಂತುಕೊಳ್ಳದೆ ಜೆನ್‌ ಝೀ ತಲೆಮಾರಿನ ಜನತೆ ಮದುವೆ ಮಾಡಿಕೊಳ್ಳಲು ಇಚ್ಚಿಸುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ. ಇಲ್ಲೊಬ್ಬ ಯುವತಿ ತಾಯಿ ಮದುವೆ ಪ್ಲ್ಯಾನ್‌ ಮಾಡಿದ್ದಾರೆ ಎಂಬ ಕಾರಣಕ್ಕೆ ತನ್ನ ತಲೆಯನ್ನು ಪೂರ್ತಿಯಾಗಿ ಬೋಳಿಸಿಕೊಂಡಿದ್ದಾಳೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ಆಕೆಯ ಧೈರ್ಯಕ್ಕೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಕೀರ್ತನಾ ಮೆನನ್ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದು "ತಾಯಿ ನನ್ನ ಮದುವೆಯ ಪ್ಲ್ಯಾನ್‌ ಮಾಡಿದ್ದಾರೆ" ಎಂಬ ಶೀರ್ಷಿಕೆ ನೀಡಿದ್ದಾಳೆ. ತಾಯಿ ಮದುವೆ ನಿಗದಿ ಮಾಡಿದರು ಎಂಬ ಕಾರಣಕ್ಕೆ ಪ್ರತಿಭಟನೆಯ ರೂಪದಲ್ಲಿ ಬೇಸೆತ್ತು ತಲೆಯನ್ನು ಬೋಳಿಸಿಕೊಂಡಿರುವುದಾಗಿ ತಿಳಿಸಿದ್ದಾಳೆ.

ವಿಡಿಯೊ ನೋಡಿ:

ಭಾರತೀಯ ಹೆಚ್ಚಿನ ಕುಟುಂಬಗಳಲ್ಲಿ ಹೆಣ್ಣು ಮಕ್ಕಳಿಗೆ ಮದುವೆ ವಯಸ್ಸು ಬಂತು ಎಂದಾಗ ಹುಡುಗನ ಹುಡುಕಾಟದಲ್ಲಿ ತೊಡಗುತ್ತಾರೆ. ಆದರೆ ಆಧುನಿಕ ಯುಗದ ಮಹಿಳೆಯರು ತಾವು ಸ್ವತಂತ್ರವಾಗಿ ಬದುಕಲು ಇಚ್ಚಿಸುತ್ತಾರೆ. ಇಲ್ಲೂ ಕೂಡ ಯುವತಿ ಈಗಲೇ ಮದುವೆ ಬೇಡ ಎಂದು ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಆಕೆ ತಾಳ್ಮೆಯಿಂದ ಕುಳಿತಿದ್ದು, ಬಾರ್ಬರ್ ಒಬ್ಬರು ಆಕೆಯ ಉದ್ದನೆಯ ಕೂದಲನ್ನು ಕತ್ತರಿಸಿ, ತಲೆಯನ್ನು ಪೂರ್ತಿಯಾಗಿ ಬೋಳಿಸುತ್ತಿರುವುದನ್ನು ಕಾಣಬಹುದು.

ಮೊದಲ ಬಾರಿ ಬೆಂಗಳೂರಿಗೆ ಬಂದ ಹಳ್ಳಿ ಯುವಕರನ್ನು ದೋಚಿದ ಆಟೋ ಚಾಲಕ

ಪೂರ್ತಿ ಕೂದಲನ್ನು ಕತ್ತರಿದರೂ ಆಕೆ ಯಾವುದೇ ಬೇಸರವಿಲ್ಲದೆ ನಗುತ್ತಾ ಕುಳಿತಿದ್ದಾಳೆ. ಮದುವೆಯನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ ತಲೆ ಬೋಳಿಸಿರುವ ಈ ವಿಡಿಯೊ ಅನೇಕ ನೆಟ್ಟಿಗರ ಗಮನ ಸೆಳೆದಿದೆ. ​ಒಬ್ಬರು, "ಮಾಡರ್ನ್ ಸಮಸ್ಯೆಗಳಿಗೆ ಇದೇ ಪರಿಹಾರ" ಎಂದಿದ್ದಾರೆ. ಮತ್ತೊಬ್ಬರು, ʼʼಉತ್ತಮ ನಿರ್ಧಾರ. ನೀವು ಜೀವನದಲ್ಲಿ ದೊಡ್ಡ ಪ್ಲ್ಯಾನ್‌ ಮಾಡುತ್ತೀರಿ ಮತ್ತು ನೀವು ಅದನ್ನು ತಲುಪುತ್ತೀರಿʼʼ ಎಂದು ಬರೆದುಕೊಂಡಿದ್ದಾರೆ.