ಮೂರ್ಖತನದ ವರ್ತನೆ: ಅಮರನಾಥ ಯಾತ್ರೆಗೆ ತೆರಳಿ ಹಿಮನದಿಗೆ ಕೋಲಿನಿಂದ ಚುಚ್ಚಿದ ವ್ಯಕ್ತಿ! ನೆಟ್ಟಿಗರು ಕಿಡಿ
Viral News: ಸಾರ್ವಜನಿಕ ಸ್ಥಳದಲ್ಲೇ ಮನಬಂದಂತೆ ವರ್ತಿಸಿ ಉಪಯೋಗಕಾರಿ ವಸ್ತುಗಳನ್ನು ಹಾಳುಗೆಡವಿದ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಅಮರನಾಥ ಯಾತ್ರೆಯಲ್ಲಿ ಭಕ್ತನೊಬ್ಬ ಹಿಮನದಿಗೆ ಕೋಲಿನಿಂದ ಚುಚ್ಚಿದ್ದಾನೆ. ಇಲ್ಲಿ ಆತ ಗೌರವದಿಂದ ನಡೆದುಕೊಳ್ಳುವ ಬದಲಿಗೆ ಬೇಜ ವಾಬ್ದಾರಿ ವರ್ತನೆ ತೋರಿದ್ದಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ಮತ್ತು ಕಳವಳಗಳನ್ನು ಹುಟ್ಟುಹಾಕಿದೆ.
ಅಮರನಾಥ ಯಾತ್ರೆಯಲ್ಲಿ ಹಿಮನದಿಗೆ ಕೋಲಿನಿಂದ ಚುಚ್ಚಿದ ಕಿಡಿಗೇಡಿ -
ನವದೆಹಲಿ,ಜು.5: ಇತ್ತೀಚೆಗೆ ನಾಗರಿಕ ಪ್ರಜ್ಞೆ ಕೊರತೆಯ ಹಲವು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತವೆ. ಸಾರ್ವಜನಿಕ ಸ್ಥಳದಲ್ಲೇ ಮನಬಂದಂತೆ ವರ್ತಿಸಿ ಉಪಯೋಗಕಾರಿ ವಸ್ತುಗಳನ್ನು ಹಾಳುಗೆಡವಿದ ಅನೇಕ ಘಟನೆಗಳು ನಡೆದಿವೆ. ಇದಕ್ಕೆ ಸಾಕ್ಷಿ ಎಂಬಂತೆ ಅಮರನಾಥ ಯಾತ್ರೆಯಲ್ಲಿ ಭಕ್ತನೊಬ್ಬ ಹಿಮನದಿಗೆ ಕೋಲಿನಿಂದ ಚುಚ್ಚಿದ್ದಾನೆ. ಇಲ್ಲಿ ಆತ ಗೌರವದಿಂದ ನಡೆದುಕೊಳ್ಳುವ ಬದಲಿಗೆ ಬೇಜ ವಾಬ್ದಾರಿ ವರ್ತನೆ ತೋರಿದ್ದಾನೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ವ್ಯಾಪಕ ಟೀಕೆ ಮತ್ತು ಕಳವಳಗಳನ್ನು ಹುಟ್ಟುಹಾಕಿದೆ.
ಹಿಮಾಲಯದ ಅತ್ಯಂತ ಸೂಕ್ಷ್ಮ ಪರಿಸರದಲ್ಲಿ ಇಂತಹ ಅಗೌರವದ ವರ್ತನೆ ಎಷ್ಟು ಸರಿ? ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಅಮರನಾಥ ತೀರ್ಥ ಯಾತ್ರೆಯ ಮಾರ್ಗದಲ್ಲಿ ಹೆಪ್ಪುಗಟ್ಟಿದ ಹಿಮನದಿಯ ಬಳಿ ನಿಂತು ಕೋಲಿನಿಂದ ಮಂಜುಗಡ್ಡೆ ಯನ್ನು ಪದೇ ಪದೇ ಹೊಡೆಯುವುದನ್ನು ಕ್ಲಿಪ್ ತೋರಿಸುತ್ತದೆ. ಆನ್‌ಲೈನ್ ಬಳಕೆದಾರರು ಈ ನಡವಳಿಕೆಯನ್ನು ಖಂಡಿಸಿದ್ದು ಸೂಕ್ಷ್ಮ ಹಿಮಾಲಯ ಭೂ ಪ್ರದೇಶಕ್ಕೆ ಈ ರೀತಿಯ ಕೃತ್ಯ ಎಸಗುವುದು ಅಜಾಗರೂಕ ಎಂದು ಕರೆದರು.
ವಿಡಿಯೋ ನೋಡಿ:
This man has gone on the Amarnath pilgrimage, and at such a sensitive location, he is hitting a glacier with a stick.
— Saffron Chargers (@SaffronChargers) July 5, 2026
The Amarnath pilgrimage site is located high in the mountains, surrounded by glaciers, and the route itself is dangerous.
Even a small disturbance to the… pic.twitter.com/tWtxlkzdqd
ಅಮರನಾಥ ತೀರ್ಥಯಾತ್ರೆಯ ಸ್ಥಳವು ಪರ್ವತದ ಅತೀ ಎತ್ತರದ ಸ್ಥಾನದಲ್ಲಿದೆ. ಈ ಪ್ರದೇಶ ಹಿಮನದಿಗಳಿಂದಲೇ ಆವೃತವಾಗಿದೆ. ಅಲ್ಲಿನ ಹಿಮನದಿಗಳಿಗೆ ಸಣ್ಣ ಅಡಚಣೆ ಕೂಡ ದೊಡ್ಡ ಭೂಕುಸಿತವನ್ನು ಅಥವಾ ತೊಂದರೆಯನ್ನು ಉಂಟು ಮಾಡಬಹುದು ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು "ಭಾರತೀಯರಿಗೆ ನಾಗರಿಕ ಪ್ರಜ್ಞೆಯ ಕೊರತೆಯಿದೆ" ಎಂದು ಬರೆದಿದ್ದಾರೆ. ಮತ್ತೊಬ್ಬರು ಈತನಿಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದು ದಂಡ ವಿಧಿಸಿ ಜೈಲಿಗೆ ಹಾಕಬೇಕು ಎಂದು ಬರೆದಿದ್ದಾರೆ. ಒಬ್ಬ ವ್ಯಕ್ತಿಯ ಈ ವರ್ತನೆ ಆ ಕ್ಷಣಕ್ಕೆ ಹಾನಿ ಮಾಡದಿದ್ದರೂ, ಇಂತಹ ಕೃತ್ಯಗಳು ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡಬಹುದು..