ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದ ಸುರಕ್ಷತೆ ಬಗ್ಗೆ ರಷ್ಯಾ ಪ್ರವಾಸಿಯ ರೇಟಿಂಗ್: ದೆಹಲಿ ಅಸುರಕ್ಷಿತ ಎಂದ ಯುವತಿ!

Viral Video: ರಷ್ಯಾ ಮೂಲದ ಯುವತಿಯೊಬ್ಬರು ಭಾರತದ ನಗರದ ಸುರಕ್ಷತೆ ಬಗ್ಗೆ ರೇಟಿಂಗ್ ನೀಡಿದ್ದಾರೆ. ಗೋವಾದಂತಹ ಕರಾವಳಿ ಸ್ಥಳಗಳಿಂದ ಹಿಡಿದು ಋಷಿಕೇಶದಂತಹ ಆಧ್ಯಾತ್ಮಿಕ ರಾಜಧಾ ನಿಗಳ ವರೆಗೆ ಅವರು ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿದ ಪ್ರತಿಯೊಂದು ಸ್ಥಳಗಳಲ್ಲಿ ಎಷ್ಟು ಸುರಕ್ಷಿತವೆಂದು ಶೇರ್ ಮಾಡಿಕೊಂಡಿದ್ದಾರೆ..

ಭಾರತದ ನಗರದ ಬಗ್ಗೆ ರೇಟಿಂಗ್ ನೀಡಿದ ರಷ್ಯಾ ಪ್ರವಾಸಿ: ವಿಡಿಯೊ ವೈರಲ್!

ಭಾರತದ ಸುರಕ್ಷತೆ ಬಗ್ಗೆ ರಷ್ಯಾ ಪ್ರವಾಸಿಯ ರೇಟಿಂಗ್ -

Profile
Pushpa Kumari Apr 12, 2026 12:53 PM

ನವದೆಹಲಿ,ಎ.12: ಭಾರತದ ಸಂಸ್ಕೃತಿ, ಪರಂಪರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅನೇಕ ವಿದೇಶಿಗರು ಇದ್ದಾರೆ. ಈ ನಡುವೆ ರಷ್ಯಾ ಮೂಲದ ಯುವತಿಯೊಬ್ಬರು ಭಾರತದ ನಗರದ ಸುರಕ್ಷತೆ ಬಗ್ಗೆ ರೇಟಿಂಗ್ ನೀಡಿದ್ದಾರೆ. ಗೋವಾದಂತಹ ಕರಾವಳಿ ಸ್ಥಳಗಳಿಂದ ಹಿಡಿದು ಋಷಿಕೇಶದಂತಹ ಆಧ್ಯಾತ್ಮಿಕ ರಾಜಧಾನಿಗಳ ವರೆಗೆ ಅವರು ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿದ ಪ್ರತಿಯೊಂದು ಸ್ಥಳಗಳಲ್ಲಿ ಎಷ್ಟು ಸುರಕ್ಷಿತವೆಂದು ಶೇರ್ (Viral News) ಮಾಡಿಕೊಂಡಿದ್ದಾರೆ.

ರಷ್ಯಾ ಮೂಲದ 'ಅಲಿಸಾ' ಎಂಬ ಯುವತಿಯೂ ಭಾರತದ ವಿವಿಧ ನಗರಗಳಲ್ಲಿ ತಮಗಾದ ಅನುಭವದ ಆಧಾರದ ಮೇಲೆ ರೇಟಿಂಗ್ ನೀಡಿದ್ದಾರೆ. ಇದರಲ್ಲಿ ದೆಹಲಿ ಮತ್ತು ಆಗ್ರಾ ನಗರಗಳು ಅತ್ಯಂತ ಅಸುರಕ್ಷಿತ ಎಂದು ಅವರು ಹೇಳಿದ್ದಾರೆ.

ವಿಡಿಯೋ ನೋಡಿ:

ದೆಹಲಿಗೆ 2/10 ರೇಟಿಂಗ್ ನೀಡಲಾಗಿದ್ದರೆ, ಆಗ್ರಾಕ್ಕೆ 3/10 ರೇಟಿಂಗ್ ನೀಡಲಾಯಿತು. ಇದಕ್ಕೆ ವ್ಯತಿರಿಕ್ತವಾಗಿ, ಮನಾಲಿ ಮತ್ತು ಋಷಿಕೇಶ ಎರಡಕ್ಕೂ ಸುರಕ್ಷಿತ ವಾತಾವರಣಕ್ಕಾಗಿ 9/10 ನೀಡಲಾಗಿದೆ. ಜೈಪುರ: 8/10, ಗೋವಾ: 8/10, ಜೋಧ್‌ಪುರ 7/10 ನೀಡಿದ್ದಾರೆ.

Viral News: ಬೆಳಗ್ಗೆ 6:30ಕ್ಕೆ ಆಫೀಸ್‌ಗೆ ಹಾಜರಾಗಬೇಕು ಎಂಬ ಆದೇಶಕ್ಕೆ ಜೆನ್‌ ಝೀ ಉದ್ಯೋಗಿಯ ಖಡಕ್ ರೆಸ್ಪಾನ್ಸ್

ರಾಜಧಾನಿ ದೆಹಲಿಗೆ ಕೇವಲ 2 ಅಂಕ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ದೆಹಲಿಯಲ್ಲಿ ಮಹಿಳೆಯರಿಗೆ ಗೌರವ ಮತ್ತು ಸುರಕ್ಷತೆಯ ಕೊರತೆ ಇದೆ ಎಂದು ಅಲಿಸಾ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರ ರೊಬ್ಬರು ಭಾರತೀಯರು ಭಾರತದಲ್ಲಿ ಸುರಕ್ಷಿತವಾಗಿಲ್ಲ ಎಂದು ಭಾವಿಸುತ್ತಾರೆ..ಇನ್ನು ವಿದೇಶಿಯರು ಹೇಗೆ ಸುರಕ್ಷಿತವಾಗಿರುತ್ತಾರೆ? ಎಂದು ಬರೆದಿದ್ದಾರೆ.