Viral Video: ವಿಮಾನದ ಸೀಟುಗಳು ಹೇಗಿವೆ ನೋಡಿ... ಪ್ರಯಾಣಿಕನ ಪಾಡು ಹೇಳ ತೀರದು! ವಿಡಿಯೊ ವೈರಲ್
ಸೇಥಿ ಎಂಬ ವ್ಯಕ್ತಿ ದೆಹಲಿಯಿಂದ ಲಖನೌಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುವಾಗ ತಾನು ಕುಳಿತಿದ್ದ ಸೀಟು ಹಿಂದೆ ಮುಂದೆ ಅಲ್ಲಾಡಿದೆ ಇದರಿಂದ ಆತ ಸಿಕ್ಕಾಪಟ್ಟೆ ಹೆದರಿದ್ದಾನಂತೆ. ಆ ಆಘಾತಕಾರಿ ಅನುಭವವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಇದು ಈಗ ವೈರಲ್(Viral Video) ಆಗಿದೆ.


ನವದೆಹಲಿ: ಕುಳಿತಿರುವ ಸೀಟನ್ನು ಯಾರಾದರೂ ಬಂದು ಅಲುಗಾಡಿಸಿದರೆ ಒಮ್ಮೆಲೆ ಹೌಹಾರುತ್ತೇವೆ. ಇಂತಹ ಅನುಭವ ಹಲವರಿಗೆ ಆಗಿರುತ್ತದೆ. ಇನ್ನು ಆಕಾಶದೆತ್ತರಕ್ಕೆ ಹಾರುವ ವಿಮಾನದಲ್ಲಿ ಪ್ರಯಾಣಿಸುವಾಗ ಕುಳಿತ ಸೀಟು ಅಲುಗಾಡಿದರೆ ಪರಿಸ್ಥಿತಿ ಹೇಗಿರಬೇಡಿ ಹೇಳಿ...? ಇಂಥ ಅನುಭವದ ಕತೆಯೊಂದನ್ನು ಪ್ರಯಾಣಿಕನೊಬ್ಬ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈತ ದೆಹಲಿಯಿಂದ ಲಖನೌಗೆ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುವಾಗ ಆತ ಕುಳಿತಿದ್ದ ಸೀಟು ಹಿಂದೆ ಮುಂದೆ ಹೋಗಲು ಶುರುವಾಗಿತ್ತಂತೆ. ಈ ಆಘಾತಕಾರಿ ಅನುಭವವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೀಗ ವೈರಲ್(Viral Video) ಆಗಿದೆ.
ಸೇಥಿ ಹಾಗೂ ಮತ್ತು ಇತರ ಇಬ್ಬರು ಪ್ರಯಾಣಿಕರ ಸೀಟು ಅಲುಗಾಡಿದೆಯಂತೆ. ಸೇಥಿ ಸೀಟುಗಳನ್ನು ಹಿಂದಕ್ಕೆ ಬಾಗಿಸಲು ಎಷ್ಟೇ ಪ್ರಯತ್ನಿಸಿದರೂ ಸೀಟು ಮುಂದೆ ಚಲಿಸಿದೆಯಂತೆ. ಇದರಿಂದ ಆತ ಶಾಕ್ ಆಗಿದ್ದಾನಂತೆ. ಅದೂ ಅಲ್ಲದೇ ಅವನು ಈ ಕ್ಷಣವನ್ನು "ಮಿನಿ ಹೃದಯಾಘಾತ" ಎಂದು ಹೇಳಿದ್ದಾನೆ. ಈ ಕುರಿತು ಅಲ್ಲಿನ ಸಿಬ್ಬಂದಿಗೆ ತಿಳಿಸಿದ್ದಾನೆ. ಅವರು ಆತನಿಗೆ ಬೇರೆ ಸೀಟಿನ ವ್ಯವಸ್ಥೆ ಮಾಡಿದ್ದಾರಂತೆ. ಅವನ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಮಾನದ ಸೀಟು ಅಲುಗಾಡಿದ ದೃಶ್ಯ ಇಲ್ಲಿದೆ ನೋಡಿ...
ಈ ಘಟನೆಗೆ ಪ್ರತಿಕ್ರಿಯಿಸಿದ ಇಂಡಿಗೊ, ಈ ವಿಷಯವನ್ನು "ಅತ್ಯಂತ ಗಂಭೀರವಾಗಿ" ತೆಗೆದುಕೊಳ್ಳಲಾಗುತ್ತಿದೆ ಎಂದು ಭರವಸೆ ನೀಡಿದೆ ಹಾಗೇ ನಮ್ಮ ಗ್ರಾಹಕರ ಸುರಕ್ಷತೆ ಮತ್ತು ಆರಾಮವು ನಮ್ಮ ಮೊದಲ ಆದ್ಯತೆಯಾಗಿದೆ" ಎಂದು ಏರ್‌ಲೈನ್ ಹೇಳಿದೆಯಂತೆ. ಇಂಡಿಗೊ ಪ್ರಯಾಣಿಕರಿಗೆ ಇಂತಹ ಭಯಾನಕ ಅನುಭವವಾಗಿರುವುದು ಇದೇ ಮೊದಲಲ್ಲ. ಪೊಲೀಸ್ ಅಧಿಕಾರಿಯೊಬ್ಬರು ಅಯೋಧ್ಯೆಯಿಂದ ದೆಹಲಿಗೆ ವಿಮಾನದಲ್ಲಿ ಪ್ರಯಾಣಿಸುವಾಗ ತಾನು ಮತ್ತು ಸಹ ಪ್ರಯಾಣಿಕರು ಅನುಭವಿಸಿದ ಭಯಾನಕ ಅನುಭವ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ವಿಮಾನ ಅಯೋಧ್ಯೆಯಿಂದ ರಾಷ್ಟ್ರ ರಾಜಧಾನಿಗೆ ಹೊರಟು ಸಂಜೆ 4:30 ಕ್ಕೆ ದೆಹಲಿಗೆ ಇಳಿಯಬೇಕಿತ್ತು. ಆದರೆ ವಿಮಾನವು ದೆಹಲಿಯಲ್ಲಿ ಇಳಿಯುವ 15 ನಿಮಿಷಗಳ ಮೊದಲು, ಪೈಲಟ್ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಕೂಲ ಹವಾಮಾನವಿದೆ ಎಂದು ಘೋಷಿಸಿದರು ಮತ್ತು 45 ನಿಮಿಷಗಳ ಇಂಧನ ಉಳಿದಿದೆ ಎಂದು ಪ್ರಯಾಣಿಕರಿಗೆ ತಿಳಿಸಿದ್ದರು. ಪೈಲಟ್ ಎರಡು ಬಾರಿ ವಿಮಾನವನ್ನು ಕೆಳಗೆ ಇಳಿಸಲು ಪ್ರಯತ್ನಿಸಿದ್ದಾರೆ ಆದರೆ ಎರಡೂ ಬಾರಿಯ ಪ್ರಯತ್ನಗಳು ವಿಫಲವಾದವು. ಇದರಿಂದ ಪ್ರಯಾಣಿಕರೆಲ್ಲರೂ ಭಯಭೀತರಾಗಿದ್ದರು. ಸಂಜೆ 5:30 ರ ಸುಮಾರಿಗೆ, ವಿಮಾನವನ್ನು ಚಂಡೀಗಢದಲ್ಲಿ ಇಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಪ್ರವಾಸಿಗನ ಕಂಜೂಸ್ ಬುದ್ಧಿ ನೋಡಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು; ವೈರಲ್ ವಿಡಿಯೊ!
ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಸಮಾಧಾನ
ಅದು ಅಲ್ಲದೇ ಇತ್ತೀಚೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೂಡ ಏರ್ ಇಂಡಿಯಾ ವಿಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ವಿಮಾನದಲ್ಲಿನ ಸೀಟುಗಳು ಸರಿ ಇಲ್ಲದಿರುವುದರ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಭೋಪಾಲ್‌ನಿಂದ ದೆಹಲಿಗೆ ಬರುವಾಗ ಮುರಿದ ಸೀಟನ್ನು ನೀಡಿದ್ದಕ್ಕೆ ಕೃಷಿ ಸಚಿವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.