ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಬಂದ ಮಹಿಳೆ; ಹೃದಯ ವಿದ್ರಾವಕ ವಿಡಿಯೊ ವೈರಲ್

ಉತ್ತರಪ್ರದೇಶದ ರಾಯ್‌ಬರೇಲಿಯ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ (ಸಿಎಂಒ) ಬಳಿ ಅಂಗವೈಕಲ್ಯ ಪ್ರಮಾಣಪತ್ರ ನೀಡುವಂತೆ ಕೋರಿ ಆಸ್ಪತ್ರೆಯ ಕಚೇರಿಗೆ ಮಹಿಳೆಯೊಬ್ಬಳು ತನ್ನ ವಿಶೇಷಚೇತನ ಪತಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಬಂದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಬಂದ ಪತ್ನಿ- ವಿಡಿಯೊ ಇದೆ

Profile pavithra Mar 5, 2025 3:42 PM

ಲಖನೌ: ಆ್ಯಂಬುಲೆನ್ಸ್ ಸೌಲಭ್ಯವಿಲ್ಲದ ಕಾರಣ ಮಹಿಳೆಯೊಬ್ಬಳು ತನ್ನ ವಿಕಲಚೇತನ ಪತಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಉತ್ತರಪ್ರದೇಶದ ರಾಯ್‌ಬರೇಲಿಯ ಜಿಲ್ಲಾ ಆಸ್ಪತ್ರೆಯೊಂದಕ್ಕೆ ಹೋಗಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಮಹಿಳೆ ತನ್ನ ಪತಿಗೆ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳ (ಸಿಎಂಒ) ಬಳಿ ಅಂಗವೈಕಲ್ಯ ಪ್ರಮಾಣಪತ್ರ ನೀಡುವಂತೆ ಕೋರಿ ಆಸ್ಪತ್ರೆಯ ಕಚೇರಿಗೆ ಪತಿಯನ್ನು ಕರೆದುಕೊಂಡು ಬಂದಿದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಪ್ರಯಾಣದ ಖರ್ಚನ್ನು ಭರಿಸಲು ಸಾಧ್ಯವಾಗದ ಕಾರಣ ಅವಳು ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯಬೇಕಾಯಿತು ಎಂದು ವರದಿಯಾಗಿದೆ.

ಈ ವಿಡಿಯೊ ರಾಜ್ಯದ ಆರೋಗ್ಯ ವ್ಯವಸ್ಥೆಯ ವಾಸ್ತವ ಸ್ಥಿತಿಯನ್ನು ಬಹಿರಂಗಪಡಿಸಿದೆ. ವೈರಲ್ ಆದ ವಿಡಿಯೊದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಬೆನ್ನ ಮೇಲೆ ಹೊತ್ತುಕೊಂಡು ಸಿಎಂಒ ಕಚೇರಿಗೆ ಬರುವುದನ್ನು ಸೆರೆಹಿಡಿಯಲಾಗಿದೆ. ಆಸ್ಪತ್ರೆಯ ಬಳಿ ಕುಳಿತಿದ್ದವರ್ಯಾರು ಕೂಡ ಆಕೆಗೆ ಸಹಾಯ ಮಾಡಲು ಬರಲಿಲ್ಲವಂತೆ!



ವರದಿ ಪ್ರಕಾರ, ಹಣದ ಇಲ್ಲದ ಕಾರಣ ಮಹಿಳೆ ಅವನನ್ನು ಸ್ವತಃ ಹೊತ್ತುಕೊಂಡು ಹೋಗಬೇಕಾಯಿತು ಎನ್ನಲಾಗಿದೆ. ಆ ವ್ಯಕ್ತಿಗೆ ಅಂಗವೈಕಲ್ಯ ಪ್ರಮಾಣಪತ್ರವನ್ನು ಪಡೆಯಲು ದಂಪತಿ ಆಸ್ಪತ್ರೆಯ ಕಚೇರಿಗೆ ಬಂದಿದ್ದಾರೆ. ಈ ಅವ್ಯವಸ್ಥೆಯ ಕುರಿತು ಉತ್ತರಪ್ರದೇಶದ ಸರ್ಕಾರವನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಎಕ್ಸ್ ಬಳಕೆದಾರರು ಈ ವಿಷಯವನ್ನು ಪರಿಶೀಲಿಸಲು ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ರೀತಿಯ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಮಥುರಾದ ಮುಖ್ಯ ವೈದ್ಯಾಧಿಕಾರಿ ಕಚೇರಿಯಿಂದ ಅಂಗವೈಕಲ್ಯ ಪ್ರಮಾಣಪತ್ರ ಪಡೆಯಲು ಮಹಿಳೆಯೊಬ್ಬಳು ತನ್ನ ವಿಕಲಚೇತನ ಪತಿಯನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಹೋಗಿರುವ ಹೃದಯ ವಿದ್ರಾವಕ ಘಟನೆ ನಡೆದಿತ್ತು. ವರದಿಯ ಪ್ರಕಾರ, ವಿಮಲಾ ಎಂಬ ಮಹಿಳೆ ತನ್ನ ಪತಿ ಬದನ್ ಸಿಂಗ್ ಅವನನ್ನು ಬೆನ್ನಿನ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ಕೆಲವು ತಿಂಗಳ ಹಿಂದೆ ನರಗಳ ಕಾಯಿಲೆಯಿಂದಾಗಿ ಅವನ ಕಾಲನ್ನು ಕತ್ತರಿಸಬೇಕಾಯಿತು. ಆದರೆ ಟ್ರೈಸೈಕಲ್ ಇಲ್ಲದ ಕಾರಣ, ಅವನನ್ನು ಕಚೇರಿಗೆ ಈ ರೀತಿ ಕರೆದೊಯ್ಯುವುದನ್ನು ಬಿಟ್ಟು ಅವಳಿಗೆ ಬೇರೆ ದಾರಿ ಇರಲಿಲ್ಲ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Murder Case: ಪತ್ನಿಯ ಕೈಯಲ್ಲೇ ಕೊಲೆಯಾದ ಕುಡುಕ ಶ್ರೀಮಂತ; ಶವ ಪೀಸ್‌ ಪೀಸ್‌ ಮಾಡಿ ಕಾಡಿಗೆಸೆದ ಪತ್ನಿ!

ಇತ್ತೀಚೆಗೆ ಕುಡಿದು ಬಂದು ಸತಾಯಿಸುತ್ತಿದ್ದ ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದ ಗಂಡನನ್ನು ಆತನ ಪತ್ನಿಯೇ ಉಸಿರುಗಟ್ಟಿಸಿ ಜಜ್ಜಿ ಕೊಂದುಹಾಕಿದ್ದಾಳೆ. ಜೊತೆಗೆ ಶವವನ್ನು ತುಂಡು ಮಾಡಿ ಕಾಡಿಗೆಸೆದಿದ್ದಾಳೆ. ಈ ಬರ್ಬರ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ವರದಿಯಾಗಿದೆ.

ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಕೆ ಪತಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ, ನಂತರ ಕಲ್ಲಿನಿಂದ ಜಜ್ಜಿ ಶವವನ್ನು ತುಂಡು ಮಾಡಿ ಚಿಕ್ಕ ಬ್ಯಾರೆಲ್‌ನಲ್ಲಿ ಹಾಕಿಕೊಂಡು ಬಂದು ಹೊಲದ ಪಕ್ಕದ ಕಾಡಿನಲ್ಲಿ ಎಸೆದಿದ್ದಾಳೆ.ಪತಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ಆರೋಪಿ ಸಾವಿತ್ರಿ ಒಪ್ಪಿಕೊಂಡಿದ್ದಾಳಂತೆ.