ಭೀಕರ ರಸ್ತೆ ಅಪಘಾತದ ದೃಶ್ಯ: ಕಾರು ರಭಸವಾಗಿ ಡಿಕ್ಕಿ ಹೊಡೆದರೂ ಪವಾಡಸದೃಶವಾಗಿ ಬದುಕುಳಿದ ಯುವಕ!
Viral Video: ಮುತ್ತಾರಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತರು ತಮ್ಮ ದ್ವಿಚಕ್ರ ವಾಹನಗಳನ್ನು ಚಹಾ ಅಂಗಡಿಯ ಹೊರಗೆ ನಿಲ್ಲಿಸಿ ಚಹಾ ಕುಡಿಯುತ್ತಿದ್ದರು. ಅದರಲ್ಲಿ ಒಬ್ಬ ಯುವಕ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲ್ ವೀಕ್ಷಿಸುತ್ತಿದ್ದ. ಆ ಕೂಡಲೇ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.
ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಕಾರ್ -
ತಮಿಳುನಾಡು,ಅ.12: ವೇಗವಾಗಿ ಬಂದ ಕಾರೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಆಘತಕಾರಿ ಘಟನೆಯೊಂದು ನಡೆದಿದೆ. ತಮಿಳುನಾಡುನ ತೂತುಕುಡಿ ಜಿಲ್ಲೆಯ ಸಾಥಂಕುಳಂ ಸಮೀಪದ ಮಣಿನಗರ ಸೇತುವೆ ಬಳಿ ಈ ಘಟನೆ (Viral News) ನಡೆದಿದೆ. ರೋಡ್ ಸೈಡ್ ಯುವಕನೊಬ್ಬ ಬೈಕ್ ನಿಲ್ಲಿಸಿ ಮೊಬೈಲ್ ವೀಕ್ಷಿಸುತ್ತಾ ಕುಳಿತಿದ್ದ. ಆಗ ವೇಗವಾಗಿ ಬಂದ ಕಾರೊಂದು ನೇರವಾಗಿ ಡಿಕ್ಕಿ ಹೊಡೆದಿದೆ. ರಭಸಕ್ಕೆ ಆ ವ್ಯಕ್ತಿ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದರೂ, ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯು ಭಾನುವಾರ, ಅಕ್ಟೋಬರ್ 11 ರಂದು ಮಣಿನಗರ ನದಿ ಸೇತುವೆಯ ಬಳಿ ನಡೆದಿದೆ. ಮುತ್ತಾರಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತರು ತಮ್ಮ ದ್ವಿಚಕ್ರ ವಾಹನಗಳನ್ನು ಚಹಾ ಅಂಗಡಿಯ ಹೊರಗೆ ನಿಲ್ಲಿಸಿ ಚಹಾ ಕುಡಿಯುತ್ತಿದ್ದರು. ಅದರಲ್ಲಿ ಒಬ್ಬ ಯುವಕ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲ್ ವೀಕ್ಷಿಸುತ್ತಿದ್ದ. ಆ ಕೂಡಲೇ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ.
ವಿಡಿಯೋ ನೋಡಿ:
🚨😱 SHOCKING HIT-AND-RUN CAUGHT ON CCTV! A speeding car hit a parked bike in #Tuticorin, Tamil Nadu. The rider escaped unharmed, but another man suffered serious head injuries. The driver allegedly fled! 💔 https://t.co/mnIX9yR3tS
— sunil kumar rana (@1984sunil) October 11, 2026
ಬೈಕ್ ಮೇಲೆ ಕುಳಿತಿದ್ದ ಯುವಕ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಾಳಿಯಲ್ಲಿ ಹಾರಿದ ಬೈಕ್, ಸಮೀಪದಲ್ಲೇ ಕುಳಿತಿದ್ದ ಮತ್ತೊಬ್ಬ ವ್ಯಕ್ತಿಗೆ ತೀವ್ರವಾಗಿ ಅಪ್ಪಳಿಸಿದೆ. ಇದರ ಪರಿಣಾಮ ತೀವ್ರ ತಲೆಗೆ ಪೆಟ್ಟಾಗಿದ್ದು ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತದ ನಂತರ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಸ್ಥಳೀಯರು ವಾಹನವನ್ನು ಪತ್ತೆ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಬೈಕ್ ಅನ್ನು ರಸ್ತೆಯ ಮೇಲೆ ನಿಲ್ಲಿಸಿದ್ದು ತಪ್ಪು, ಆದರೆ ಅದಕ್ಕಾಗಿ ಕಾರಿನ ಕ್ರಮ ಸರಿಯಾಗಿತ್ತು ಎಂದರ್ಥವಲ್ಲ. ಆದರೆ ರಸ್ತೆಯ ಮೇಲೆ ಅಕ್ರಮವಾಗಿ ವಾಹನವನ್ನು ನಿಲ್ಲಿಸುವ ಹಕ್ಕು ಯಾರಿಗೂ ಇಲ್ಲ ಎಂದು ಕಿಡಿಕಾರಿದ್ದಾರೆ.