ಪೊಲೀಸ್ ಕೆಲಸ ಸಿಕ್ಕ ಸಂಭ್ರಮಕ್ಕೆ ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಮಗಳು; ವಿಡಿಯೋ ನೋಡಿ
Viral Video: ಯುವತಿಯೊಬ್ಬಳು ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಆಯ್ಕೆಯಾಗಿದ್ದು ಈ ಸಂಭ್ರಮವನ್ನು ತಂದೆಯೊಂದಿಗೆ ಆಚರಿಸಿದ್ದಾರೆ. ಯುವತಿಯೂ ಹೆಮ್ಮೆಯಿಂದ ನಗುತ್ತಾ, ತಮ್ಮ ತಂದೆಯನ್ನು ಹೆಗಲ ಮೇಲೆ ಎತ್ತಿಕೊಂಡು, ಇಬ್ಬರೂ ಸಾರ್ವಜನಿಕವಾಗಿ ಸಂತೋಷದಿಂದ ನೃತ್ಯ ಮಾಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
ತಂದೆಯನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ ಯುವತಿ -
ಮಹಾರಾಷ್ಟ್ರ,ಎ.12: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಹೃದಯಸ್ಪರ್ಶಿ ಘಟನೆಯೊಂದು ಕಂಡು ಬಂದಿದೆ. ಯುವತಿ ಯೊಬ್ಬಳು ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಆಯ್ಕೆಯಾಗಿದ್ದು ಈ ಸಂಭ್ರಮವನ್ನು ತಂದೆಯೊಂದಿಗೆ ಆಚರಿಸಿದ್ದಾರೆ. ಯುವತಿಯೂ ಹೆಮ್ಮೆ ಯಿಂದ ನಗುತ್ತಾ, ತಮ್ಮ ತಂದೆಯನ್ನು ಹೆಗಲ ಮೇಲೆ ಎತ್ತಿಕೊಂಡು, ಇಬ್ಬರೂ ಸಾರ್ವಜನಿಕವಾಗಿ ಸಂತೋಷದಿಂದ ನೃತ್ಯ ಮಾಡಿದ್ದಾರೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ
ಮಹಾರಾಷ್ಟ್ರದಲ್ಲಿ ಪೊಲೀಸ್ ನೇಮಕಾತಿಯಲ್ಲಿ ಪಾಸಾದ ಯುವತಿಯೊಬ್ಬಳ ಸಾಧನೆಯು ಹೆಮ್ಮೆಯ ಮತ್ತು ಭಾವನಾತ್ಮಕ ಕ್ಷಣವಾಯಿತು, ಇದು ಅವರ ಕುಟುಂಬಕ್ಕೆ ಮಾತ್ರವಲ್ಲದೆ ಸಾವಿರಾರು ಜನರನ್ನು ಆಕರ್ಷಣೆ ಮಾಡಿದೆ. ಯುವತಿಯೂ ತಮ್ಮ ಸಾಧನೆಯನ್ನು ತಂದೆಯೊಂದಿಗೆ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದ್ದಾರೆ.
ವಿಡಿಯೋ ನೋಡಿ:
அப்பாவின் கனவை நனவாக்கிய மகள்
— Rajini (@rajini198080) April 11, 2026
தேர்வில் வென்று பெண் போலீஸ் அதிகாரியாகி, தன் அப்பாவை தோளில் தூக்கி பெருமை கொண்டாள் pic.twitter.com/x6LCvFTqDn
ವೈರಲ್ ಆಗಿರುವ ವೀಡಿಯೊದಲ್ಲಿ ಹೊಸದಾಗಿ ನೇಮಕಗೊಂಡ ಪೊಲೀಸ್ ಅಧಿಕಾರಿ ಸುಮೇಧಾ ಶೇಖ್ ತಮ್ಮ ಸಾಧನೆಯನ್ನು ವಿಶೇಷವಾಗಿ ಆಚರಿಸುತ್ತಿರುವುದನ್ನು ತೋರಿಸುತ್ತದೆ. ಹೆಮ್ಮೆಯಿಂದ ನಗುತ್ತಾ, ಅವರು ತಮ್ಮ ತಂದೆಯನ್ನು ಹೆಗಲ ಮೇಲೆ ಎತ್ತಿಕೊಂಡು, ಇಬ್ಬರೂ ಸಾರ್ವಜನಿಕವಾಗಿ ಸಂತೋಷದಿಂದ ನೃತ್ಯ ಮಾಡುತ್ತಿದ್ದರು. ವೀಕ್ಷಕರು ಸುತ್ತಲೂ ನೆರೆದಿದ್ದು ತಂದೆ- ಮಗಳ ಭಾವುಕ ಕ್ಷಣವನ್ನು ಆನಂದಿಸುತ್ತಿದ್ದರು.
Viral Video: ನಿದ್ರೆಯಲ್ಲೂ 'ರೀಲ್ಸ್' ಸ್ಕ್ರಾಲ್' ಮಾಡುವ ಪುಟ್ಟ ಬಾಲಕಿ; ಪೋಷಕರ ಆತಂಕ!
ಪೊಲೀಸ್ ಸಮವಸ್ತ್ರ ಧರಿಸುವ ಕನಸು ಈಡೇರಿದ ತಕ್ಷಣ ಸುಮೇಧಾ ತಮ್ಮ ತಂದೆಯನ್ನು ಹೆಗಲ ಮೇಲೆ ಎತ್ತಿಕೊಂಡು ಸಾರ್ವಜನಿಕವಾಗಿಯೇ ನೃತ್ಯ ಮಾಡಿದರು.ಈ ದೃಶ್ಯ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಖತೆ ಬಳಕೆದಾರರು ಕಾಮೆಂಟ್‌ಗಳ ವಿಭಾಗದಲ್ಲಿ ಭಾವನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ಆ ಕ್ಷಣವನ್ನು "ಹೃದಯಸ್ಪರ್ಶಿ" ಎಂದಿದ್ದಾರೆ. ಈ ದೃಶ್ಯವು ತಂದೆ-ಮಗಳ ಉದ್ಯೋಗ ನೇಮಕಾತಿಯ ಆಚರಣೆಯಾಗಿರಲಿಲ್ಲ, ಅದು ಇಬ್ಬರ ಕನಸು- ತ್ಯಾಗಗಳನ್ನು ಆಚರಿಸಿಕೊಳ್ಳುವ ಹೆಮ್ಮೆಯ ಮೈಲಿಗಲ್ಲಾಯಿತು.