ಅರಣ್ಯ ರಕ್ಷಣೆಗಾಗಿ ಜೆಸಿಬಿಯನ್ನೇ ಅಡ್ಡಗಟ್ಟಿದ ಗಜರಾಜ: ಇಲ್ಲಿದೆ ನೋಡಿ ಭಯಾನಕ ವಿಡಿಯೊ!
Viral Video: ತನ್ನ ವಾಸಸ್ಥಾನ ಅರಣ್ಯವನ್ನು ರಕ್ಷಣೆ ಮಾಡಲು ಆನೆಯೊಂದು ಹೋರಾಟ ಮಾಡಿರುವ ಘಟನೆ ನಡೆದಿದೆ. ಆನೆಯೊಂದು ಬೃಹತ್ ಜೆಸಿಬಿ ಅಗೆಯುವ ಯಂತ್ರದ ಮುಂದೆ ನಿಂತು, ಯಂತ್ರವು ತನ್ನ ಅರಣ್ಯವನ್ನು ನಾಶಮಾಡಲು ಬಿಡದಂತೆ ಧೈರ್ಯದಿಂದ ನಿಂತಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ...
ಅರಣ್ಯ ರಕ್ಷಣೆಗಾಗಿ ಜೆಸಿಬಿ ಅಡ್ಡಗಟ್ಟಿದ ಆನೆ -
ನವದೆಹಲಿ,ಏ.28: ಇತ್ತೀಚೆಗೆ ಹಳ್ಳಿಗಳನ್ನು ನಗರ ಪ್ರದೇಶಗಳಾಗಿ ಮಾರ್ಪಾಡು ಮಾಡಲು ವಿವಿಧ ಕಡೆ ಮರ- ಗಿಡಗಳೆನ್ನೆಲ್ಲ ನಾಶ ಮಾಡುತ್ತಿದ್ದಾರೆ. ಅದರಲ್ಲೂ ಅರಣ್ಯ ಪ್ರದೇಶದಲ್ಲಿ ರಸ್ತೆ ಕಾಮಗಾರಿಗಾಗಿ ಪರಿಸರವನ್ನೆ ನಾಶ ಮಾಡುತ್ತಿದ್ದಾರೆ. ಈ ನಡುವೆ ತನ್ನ ವಾಸಸ್ಥಾನ ಅರಣ್ಯವನ್ನು ರಕ್ಷಣೆ ಮಾಡಲು ಆನೆಯೊಂದು ಹೋರಾಟ ಮಾಡಿರುವ ಘಟನೆ ನಡೆದಿದೆ. ಆನೆಯೊಂದು ಬೃಹತ್ ಜೆಸಿಬಿ ಅಗೆಯುವ ಯಂತ್ರದ ಮುಂದೆ ನಿಂತು, ಯಂತ್ರವು ತನ್ನ ಅರಣ್ಯವನ್ನು ನಾಶಮಾಡಲು ಬಿಡದಂತೆ ಧೈರ್ಯದಿಂದ ನಿಂತಿದೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಇಂದು ಅಭಿವೃದ್ಧಿ ಹೆಸರಿನಲ್ಲಿ ಎಲ್ಲೆಡೆ ಅರಣ್ಯ ನಾಶ ಮಾಡುತ್ತಿದ್ದು ಈಗಾಗಲೇ ಹಲವಾರು ಮಂದಿ ಇದಕ್ಕೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದೀಗ ಅರಣ್ಯ ನಾಶ ಮಾಡುತ್ತಿದ್ದ ತನ್ನ ಕಾಡನ್ನು ಉಳಿಸಿ ಕೊಳ್ಳಲು ಒಂಟಿ ಆನೆಯೂ ಜೆಸಿಬಿ ಯಂತ್ರವನ್ನು ಧೈರ್ಯದಿಂದ ತಡೆದಿದೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ಎಲ್ಲರೂ ಭಾವುಕರಾಗಿದ್ದಾರೆ. ಪ್ರಾಣಿಗಳಿಗಾದರೂ ಬುದ್ದಿವಂತಿಕೆ ಇದೆ..ನೀಚ ಮನುಷ್ಯರಿಗೆ ಇಲ್ಲ ಎಂದು ಹಲವಾರು ಕಿಡಿಕಾರಿದ್ದಾರೆ.
ವಿಡಿಯೋ ನೋಡಿ:
A heartbreaking reminder of Conflict between Development and Wildlife
— D (@Deb_livnletliv) April 25, 2026
An elephant stands firmly in front of a JCB machine to stop the destruction of the Forest it calls HOME while business houses and govt are on RAMPAGE mode to destroy every remaining Forest cover pic.twitter.com/HqejQNhPF7
ಅಧಿಕಾರಿಗಳು ಮತ್ತು ಖಾಸಗಿ ಕಂಪನಿಗಳು ಪರಿಸರ ವಿಜ್ಞಾನಕ್ಕಿಂತ ಲಾಭಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಹೆಚ್ಚಿನವರು ಆರೋಪಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಮರಗಳನ್ನು ಕಡಿಯಲು ಜೆಸಿಬಿ ಯಂತ್ರವೊಂದು ಮುಂದೆ ಬಂದಿತ್ತು. ಆಗ ಬೃಹತ್ ಗಾತ್ರದ ಆನೆಯೊಂದು ಇದಕ್ಕೆ ಅಡ್ಡವಾಗಿ ಬಂದು ನಿಂತಿದೆ. ಅದು ಯಂತ್ರವನ್ನು ತಡೆದು ನಿಂತಿರುವುದು ನಿಜಕ್ಕೂ ನೋಡುಗರಿಗೆ ಆಶ್ಚರ್ಯ ಉಂಟು ಮಾಡಿದೆ.
Viral Video: ರೀಲ್ಸ್‌ಗಾಗಿ ಇದೆಂಥ ಹುಚ್ಚಾಟ? ಚಲಿಸುವ ಟ್ರಕ್ ಕೆಳಗೆ ಬೈಕ್ ಓಡಿಸಿದ ಯುವಕ
ಕಾರ್ಮಿಕರು ಅರಣ್ಯ ಪ್ರದೇಶವನ್ನು ತೆರವುಗೊಳಿಸಲು ಪ್ರಯತ್ನಿ ಸುತ್ತಿರುವಾಗ ಅದು JCB ಯನ್ನು ನಿರ್ಬಂಧಿಸುತ್ತದೆ. ಕ್ಲಿಪ್ ಈಗಾಗಲೇ ಸುಮಾರು 5,000 ಲೈಕ್‌ಗಳು, 92,000 ವೀಕ್ಷಣೆಗಳನ್ನು ಗಳಿಸಿದೆ. ಅಭಿವೃದ್ಧಿ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷದ ಹೃದಯವಿದ್ರಾವಕ ಘಟನೆ ಇದಾಗಿದ್ದು ಅರಣ್ಯ ಪ್ರದೇಶವನ್ನು ನಾಶಮಾಡಲು ವ್ಯಾಪಾರ ಸಂಸ್ಥೆಗಳು ಹುಟ್ಟಿಕೊಂಡಿವೆ ಎಂದು ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಒಬ್ಬ ಬಳಕೆದಾರರು ಇದು ನಾಚಿಕೆಗೇಡಿನ ಸಂಗತಿ ಎಂದು ಬರೆದಿದ್ದಾರೆ. ಮತ್ತೊಬ್ಬರು ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ನಿಜಕ್ಕೂ ಬೇಸರದ ಸಂಗತಿ ಎಂದಿದ್ದಾರೆ.