ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಮರೆಯಾದ ಮಾನವೀಯತೆ": ಅಪಘಾತಕ್ಕೀಡಾದ ಲಾರಿ ಚಾಲಕನ ಸಹಾಯಕ್ಕೆ ಬಾರದೆ ಜ್ಯೂಸ್ ಬಾಟಲಿ ದೋಚಿದ ಸಾರ್ವಜನಿಕರು

Viral Video: ಅಪಘಾತಕ್ಕೀಡಾದ ಚಾಲಕನ ಸಹಾಯಕ್ಕೆ ಧಾವಿಸದೇ ಜನರು ಜ್ಯೂಸ್ ಬಾಟಲಿಗಳನ್ನು ಕೊಂಡೊಯ್ಯಲು ಮುಗಿಬಿದ್ದ ಘಟನೆ ನಡೆದಿದೆ. ಪಾನೀಯಗಳನ್ನು ಸಾಗಿಸುತ್ತಿದ್ದ ಟ್ರಕ್‌ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಚಾಲಕ ಗಾಯಗೊಂಡಿದ್ದು, ಅಲ್ಲಿನ ಜನ ಮಾತ್ರ ನೆರವಿಗೆ ಬಾರದೇ ಜ್ಯೂಸ್ ಬಾಟಲಿ ದೋಚಿಕೊಳ್ಳಲು ಮುಂದಾಗಿದ್ದಾರೆ. ಈ ವಿಡಿಯೊ ನೋಡಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಾಯಗೊಂಡ ಚಾಲಕನ ನೆರವಿಗೆ ಬಾರದೇ ಜ್ಯೂಸ್ ಬಾಟಲಿ ದೋಚಿದ ಸ್ಥಳೀಯರು

ಅಪಘಾತಕ್ಕೀಡಾದ ಟ್ರಕ್‌ನಿಂದ ಜ್ಯೂಸ್ ಬಾಟಲಿ ದೋಚಿದ ಜನರು -

Profile
Pushpa Kumari Apr 28, 2026 3:23 PM

ನವದೆಹಲಿ, ಏ. 28: ಈ ಆಧುನಿಕ ಜಗತ್ತಿನಲ್ಲಿ ಮಾನವೀಯತೆ ಮರೆಯಾಗಿ ಬಿಟ್ಟಿದೆ. ಯಾವುದೇ ಅನಾಹುತವಾದರೂ ಜನರು ತಮ್ಮ ಸ್ವಾರ್ಥವನ್ನೇ ಮುಖ್ಯವಾಗಿ ಪರಿಗಣಿಸುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅಪಘಾತಕ್ಕೀಡಾದ ಟ್ರಕ್‌ ಚಾಲಕನ ಸಹಾಯಕ್ಕೆ ಧಾವಿಸದೇ ಸಾರ್ವಜನಿಕರು ಜ್ಯೂಸ್ ಬಾಟಲಿಗಳನ್ನು ಕೊಂಡೊಯ್ಯಲು ಮುಗಿಬಿದ್ದ ಘಟನೆ ನಡೆದಿದೆ. ಪಾನೀಯಗಳನ್ನು ಸಾಗಿಸುತ್ತಿದ್ದ ಟ್ರಕ್ ರಸ್ತೆಯಲ್ಲಿ ಪಲ್ಟಿಯಾಗಿ ಬಿದ್ದಿದೆ. ಚಾಲಕ ಗಾಯಗೊಂಡಿದ್ದು ನರಳಾಡುತ್ತಿದ್ದರೂ ಅಲ್ಲಿನ ಜನ ನೆರವಿಗೆ ಬಾರದೆ ಜ್ಯೂಸ್ ಬಾಟಲಿ ದೋಚಿಕೊಳ್ಳಲು ಮುಂದಾಗಿದ್ದಾರೆ. ಈ ವಿಡಿಯೊ ನೋಡಿದ (Viral Video) ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.

ಗಾಯಗೊಂಡ ಚಾಲಕನು ಸಹಾಯಕ್ಕಾಗಿ ಬೇಡಿಕೊಂಡಿದ್ದಾನೆ. ಆದರೂ ಅಲ್ಲಿದ್ದ ಜನರು ಮಾತ್ರ ಜ್ಯೂಸ್ ಬಾಟಲ್‌ ದೋಚಲು ಮುಂದಾಗಿದ್ದಾರೆ ವಿನಃ ಯಾವುದೇ ನೆರವು ನೀಡಲಿಲ್ಲ. ಉರುಳಿಬಿದ್ದ ಟ್ರಕ್‌ನಿಂದ ಬಿದ್ದ ಪಾನೀಯ ಬಾಟಲಿ ಸಂಗ್ರಹಿಸಲು ಜನರ ಗುಂಪು ಪೈಪೋಟಿ ನಡೆಸುತ್ತಿರವುದು ವಿಡಿಯೊದಲ್ಲಿ ಕಂಡು ಬಂದಿದೆ. ಘಟನೆಯ ಸ್ಥಳ ನಿಖರವಾಗಿ ತಿಳಿದು ಬಂದಿಲ್ಲ‌. ಅದಾಗ್ಯೂ ವಿಡಿಯೊ ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಇಂತಹ ಜನರು ನಮ್ಮ ಸಮಾಜದಲ್ಲಿ ಇದ್ದರಾ? ಎಂದು ಅನೇಕರು ಆತಂಕ ವ್ಯಕ್ತ ಪಡಿಸಿದ್ದಾರೆ.

ವಿಡಿಯೊ ನೋಡಿ:



ರಸ್ತೆಯಲ್ಲಿ ಅಪಘಾತವಾಯಿತು ಅಂದಾಗ ಗಾಯಾಳುವನ್ನು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಬೇಕು. ಆದರೆ ಇಲ್ಲಿನ‌ ಜನರು ಮಾನವೀಯತೆ ಇಲ್ಲದಂತೆ ವರ್ತಿಸಿದ್ದಾರೆ. ಗಾಯಗೊಂಡು ಬಿದ್ದಿದ್ದ ಚಾಲಕನ ನೆರವಿಗೆ ಬರುವ ಬದಲು, ಜನ ಬಾಟಲಿಗಳನ್ನು ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.

ಹಸುವಿಗೆ ಚಿಕನ್ ಮೋಮೋಸ್‌ ತಿನ್ನಿಸಿದ ಯುವಕ! ವ್ಯಾಪಕ ಆಕ್ರೋಶ

ವಾಹನವು ರಸ್ತೆಯಲ್ಲಿ ಉರುಳಿಬಿದ್ದಿದ್ದು, ಡಜನ್‌ಗಟ್ಟಲೆ ಬಾಟಲಿ ಬೀದಿಯಲ್ಲಿ ಹರಡಿಕೊಂಡಿವೆ. ಆದರೆ ಜನರು ಸಹಾಯ ಮಾಡುವ ಬದಲು ಕೈಗೆ ಸಿಕ್ಕಿದ್ದಷ್ಟನ್ನು ಕಸಿದುಕೊಳ್ಳುತ್ತಿದ್ದಾರೆ. ಅನೇಕರು ಬಾಟಲಿಗಳನ್ನು ಹೊತ್ತುಕೊಂಡು, ಚೀಲಗಳಲ್ಲಿ ತುಂಬಿಸುತ್ತಿದ್ದಾರೆ. ಚಾಲಕನು ಅಸಹಾಯಕನಾಗಿ ದೋಚುವುದನ್ನು ನಿಲ್ಲಿಸಿ ಸಹಾಯ ಮಾಡುವಂತೆ ಬೇಡಿಕೊಳ್ಳುತ್ತಿದ್ದಾನೆ. ಆದರೆ ಆತನ ಮಾತನ್ನು ನಿರ್ಲಕ್ಷಿಸಲಾಗಿದೆ. ಯಾರೊಬ್ಬರೂ ಆತನ ಸಹಾಯಕ್ಕೆ ಧಾವಿಸಿಲ್ಲ.ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶದ ಅಲೆಯನ್ನೇ ಹುಟ್ಟುಹಾಕಿದ್ದು, ನೆಟ್ಟಿಗರೊಬ್ಬರು ʼʼಇವರು ಮನುಷ್ಯರಲ್ಲ ರಾಕ್ಷಸರುʼʼ ಎಂದಿದ್ದಾರೆ. ಮತ್ತೊಬ್ಬರು, ʼʼನಾಗರಿಕ ಪ್ರಜ್ಞೆಯ ಕೊರತೆʼʼ ಎಂದು ಕಿಡಿಕಾರಿದ್ದಾರೆ.