ವಿಮಾನ ಹಾರಾಟದ ವೇಳೆ ಎಮರ್ಜೆನ್ಸಿ ಡೋರ್ ತೆರೆಯಲು ಯತ್ನಿಸಿದ ಪ್ರಯಾಣಿಕ: ಸಮಯ ಪ್ರಜ್ಞೆ ಮೆರೆದ ಸಿಬ್ಬಂದಿಗಳು!
Viral Video: ಪ್ರಯಾಣಿಕನೊಬ್ಬ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಎಮರ್ಜೆನ್ಸಿ ಬಾಗಿಲು ತೆರೆಯಲು ಯತ್ನಿಸಿದ ಘಟನೆಯೊಂದು ನಡೆದಿದೆ. ವಿಮಾನದಲ್ಲಿದ್ದ ಸಿಬ್ಬಂದಿಗಳು ಹಾಗೂ ಸಹ ಪ್ರಯಾಣಿಕರು ತಕ್ಷಣವೇ ಕ್ರಾಯಪ್ರವೃತ್ತರಾಗಿ ಆತನನ್ನು ತಡೆದಿದ್ದಾರೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಮಾನ ಪ್ರಯಾಣದಲ್ಲಿ ಎಮರ್ಜೆನ್ಸಿ ಬಾಗಿಲು ತೆರೆಯಲು ಯತ್ನ -
ನವದೆಹಲಿ,ಆ.7: ಕೇರಳದಿಂದ ಕೊಚ್ಚಿಗೆ ಹೋಗುವ ಬಾಟಿಕ್ ಏರ್ ವಿಮಾನದಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಪ್ರಯಾಣಿಕನೊಬ್ಬ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿ ಎಮರ್ಜೆನ್ಸಿ ಬಾಗಿಲು ತೆರೆಯಲು ಯತ್ನಿಸಿದ ಘಟನೆಯೊಂದು ನಡೆದಿದೆ. ವಿಮಾನದಲ್ಲಿದ್ದ ಸಿಬ್ಬಂದಿಗಳು ಹಾಗೂ ಸಹ ಪ್ರಯಾಣಿಕರು ತಕ್ಷಣವೇ ಕ್ರಾಯಪ್ರವೃತ್ತರಾಗಿ ಆತನನ್ನು ತಡೆದಿದ್ದಾರೆ. ಈ ಅಘಾತಕಾರಿ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಈ ಅನುಭವವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಯಾಣಿಕರೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಈ ಘಟನೆಯನ್ನು ಅವರು "ಭಯಾನಕ" ಎಂದು ವಿವರಿಸಿದ್ದಾರೆ. ಇದು ಮಧ್ಯರಾತ್ರಿಯ ಹಾರಾಟವಾದ್ದರಿಂದ ಹೆಚ್ಚಿನ ಪ್ರಯಾಣಿಕರು ನಿದ್ರಿಸುತ್ತಿದ್ದರು ಇದ್ದಕ್ಕಿದ್ದಂತೆ ಗಾಳಿಯ ರಭಸದ ಶಬ್ದ ಕೇಳಿಸಿದೆ. ಏನೆಂದು ಎಲ್ಲರೂ ಗಾಬರಿಯಾಗುತ್ತಿದ್ದಂತೆ ಈ ವೇಳೆ ತುರ್ತು ನಿರ್ಗಮನ ಸಾಲಿನಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ಕಿಟಕಿ ಪ್ಯಾನಲ್ ಅನ್ನು ಮುರಿದು, ಎಮರ್ಜೆನ್ಸಿ ಡೋರ್ ಅನ್ನು ಬಲವಂತವಾಗಿ ತೆರೆಯಲು ಪ್ರಯತ್ನಿಸಿದ್ದಾನೆ.
ವಿಡಿಯೋ ನೋಡಿ:
ಈ ಘಟನೆಯ ಬಗ್ಗೆ ಸಮಯ ಪ್ರಜ್ಞೆ ಮೆರೆದ ವಿಮಾನ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ತಕ್ಷಣವೇ ಆತನನ್ನು ತಡೆದಿದ್ದಾರೆ. ಅದೃಷ್ಟವಶಾತ್, ವಿಮಾನದ ತಾಂತ್ರಿಕ ವಿನ್ಯಾಸದಿಂದ ಯಾವುದೇ ಬಾಗಿಲು ತೆರೆದುಕೊಂಡಿಲ್ಲ. ವೈರಲ್ ಆದ ಕ್ಲಿಪ್‌ನಲ್ಲಿ ಪ್ರಯಾಣಿಕರೆಲ್ಲರು ಭಯಭೀತ ರಾಗಿದ್ದು ಕ್ಯಾಬಿನ್ ಸಿಬ್ಬಂದಿಗಳು ಮಧ್ಯಪ್ರವೇಶಿಸುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿ ಗಂಭೀರವಾಗುವ ಮುನ್ನವೇ ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿ ಆತನನ್ನು ಗಟ್ಟಿಯಾಗಿ ಕಟ್ಟಿಹಾಕಿದ್ದಾರೆ.
Viral Video: ಅಳಿಲಿನ ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಪುಟಾಣಿಗಳು; 'ಇಂತಹ ಮಕ್ಕಳನ್ನು ಬೆಳೆಸಬೇಕು' ಎಂದ ನಟಿ ರಮ್ಯಾ
ವಿಮಾನ ಸುರಕ್ಷಿತವಾಗಿ ಇಳಿಯುವವರೆಗೂ ಆತನ ಕೈ ಕಾಲುಗಳನ್ನು ಕಟ್ಟಿಹಾಕಲಾಗಿತ್ತು. ವಿಮಾನ ಲ್ಯಾಂಡ್ ಆದ ತಕ್ಷಣ ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಈ ಘಟನೆಯೂ ಭಾರೀ ವೈರಲ್ ಆಗಿದ್ದು ಅನೇಕ ಬಳಕೆದಾರರು ಪ್ರಯಾಣಿಕರು ಮತ್ತು ಸಿಬ್ಬಂದಿಯ ಸಕಾಲಿಕ ಕಾರ್ಯ ಪ್ರಜ್ಞೆ ಗಾಗಿ ಹೊಗಳಿದ್ದಾರೆ. ಬಳಕೆದಾರರೊಬ್ಬರು ನಿಜಕ್ಕೂ ಸಿಬ್ಬಂದಿಗಳ ಕಾರ್ಯವೈಖರಿಗೆ ಮೆಚ್ಚಲೆ ಬೇಕು ಎಂದು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ. ಮತ್ತೊಬ್ಬರು "ಈತನನ್ನು ಬಂಧಿಸಿ ಸರಿಯಾದ ಕ್ರಮ ಕೈಗೊಳ್ಳಬೇಕು, ಮತ್ತು ಮುಂದಿನ ವಿಮಾನ ಪ್ರಯಾಣದಿಂದ ನಿಷೇಧಿಸಬೇಕು” ಎಂದು ಕಾಮೆಂಟ್ ಮಾಡಿದ್ದಾರೆ.