ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಯಾಣದ ವೇಳೆ ಹೆಲ್ಮೆಟ್‌ಗೆ ಕ್ಯಾಮರಾ ಅಳವಡಿಸಿಕೊಂಡ ಯುವತಿ: ಕಾರಣವೇನಿರಬಹುದು?

Viral News: ಸಾರ್ವಜನಿಕ ಸ್ಥಳದಲ್ಲೂ ಮಹಿಳೆಯರಿಗೆ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ತಮ್ಮ ಸುರಕ್ಷತೆ ದೃಷ್ಟಿಯಿಂದ ಯುವತಿಯೊಬ್ಬರು ತಮ್ಮ ಸ್ಕೂಟಿ ಹೆಲ್ಮೆಟ್‌ಗೆ ಪ್ರತ್ಯೇಕ ಕ್ಯಾಮೆರಾ ಅಳವಡಿಸಿಕೊಂಡು ಪ್ರಯಾಣ ಮಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಹೆಲ್ಮೆಟ್‌ನಲ್ಲಿ ಕ್ಯಾಮೆರಾವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇಕೆ ಎಂಬುದನ್ನು ಯುವತಿ ಹಂಚಿಕೊಂಡಿದ್ದಾರೆ.

ಹಿಂದೆ ನಡೆದ ಕಹಿ ಘಟನೆ ತಪ್ಪಿಸಲು ಹೆಲ್ಮೆಟ್ ಕ್ಯಾಮೆರಾ ಬಳಸುತ್ತಿರುವ ಯುವತಿ!

ಪ್ರಯಾಣದ ವೇಳೆ ಹೆಲ್ಮೆಟ್‌ಗೆ ಕ್ಯಾಮರಾ ಅಳವಡಿಸಿಕೊಂಡ ಯುವತಿ -

Profile
Pushpa Kumari Oct 8, 2026 4:10 PM

ಬೆಂಗಳೂರು,ಅ.8: ಇಂದು ಒಬ್ಬಂಟಿ ಮಹಿಳೆ ಪ್ರಯಾಣ ಮಾಡುವಾಗ ಸುರಕ್ಷತೆ ಬಗ್ಗೆ ನೂರೆಂಟು ಪ್ರಶ್ನೆಗಳು ಹುಟ್ಟುತ್ತವೆ. ಸಾರ್ವಜನಿಕ ಸ್ಥಳದಲ್ಲೂ ಮಹಿಳೆಯರಿಗೆ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಸಿಲಿಕಾನ್ ಸಿಟಿಯಲ್ಲಿ ತಮ್ಮ ಸುರಕ್ಷತೆ ದೃಷ್ಟಿಯಿಂದ ಯುವತಿಯೊಬ್ಬರು ತಮ್ಮ ಸ್ಕೂಟಿ ಹೆಲ್ಮೆಟ್‌ಗೆ ಪ್ರತ್ಯೇಕ ಕ್ಯಾಮೆರಾ ಅಳವಡಿಸಿಕೊಂಡು ಪ್ರಯಾಣ ಮಾಡುತ್ತಿರುವ ದೃಶ್ಯವೊಂದು ವೈರಲ್ ಆಗಿದೆ. ಹೆಲ್ಮೆಟ್‌ನಲ್ಲಿ ಕ್ಯಾಮೆರಾವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇಕೆ ಎಂಬುದನ್ನು ಯುವತಿ (Viral News) ಹಂಚಿಕೊಂಡಿದ್ದಾರೆ. ಕೆಲವು ಸವಾರರಿಗೆ ದುಬಾರಿ ಗ್ಯಾಜೆಟ್‌ನಂತೆ ಕಂಡರೂ, ಭಯಾನಕ ಅನುಭವವೊಂದನ್ನು ಎದುರಿಸಿದ ನಂತರ ಈ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

ಇದನ್ನು ಪ್ಯಾಷನ್ ಗಾಗಿ ಬಳಕೆ ಮಾಡಿಲ್ಲ,ಬದಲಿಗೆ ತಮ್ಮ ಸ್ವಂತ ಸುರಕ್ಷತೆಗಾಗಿ ಅಳವಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಕ್ಯಾಮೆರಾವನ್ನು ಗಮನಿಸಿದ ಮತ್ತೊಬ್ಬ ಸವಾರ ಆ ಮಹಿಳೆ ಯನ್ನು ಸಮೀಪಿಸಿ, ಅದರ ಬೆಲೆ ಎಷ್ಟು ಎಂದು ಕೇಳಿದಾಗ ಸಂಭಾಷಣೆಯ ಸಮಯದಲ್ಲಿ ಈ ಕ್ಯಾಮರಾ ಅಳವಡಿಸಲು ಕಾರಣವೇನು? ಎಂದು ತಿಳಿಸಿದ್ದಾರೆ.

ವಿಡಿಯೋ ನೋಡಿ:

ಹಿಂದೊಮ್ಮೆ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯನ್ನು ಮನೆಯವರೆಗೂ ಹಿಂಬಾಲಿಸಿಕೊಂಡು ಬಂದಿದ್ದ. ಹಾಗಾಗಿ ಮತ್ತೆ ಅಂತಹ ಅಪಾಯವನ್ನು ತೆಗೆದುಕೊಳ್ಳಲು ಇಷ್ಟವಿರಲಿಲ್ಲ. ಸುರಕ್ಷತೆಯ ಕಾರಣಕ್ಕಾಗಿ ಈ ಕ್ಯಾಮೆರಾ ಖರೀದಿಸಿದೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಹಿಳೆಯರು ನಿಜವಾಗಿಯೂ ಸುರಕ್ಷಿತವಾಗಿದ್ದಾರೆಯೇ? ಅಥವಾ ಎಲ್ಲವೂ ಸರಿಯಾಗಿದೆ ಎಂದು ನಾವು ಸುಮ್ಮನೆ ಭಾವಿಸುತ್ತಿದ್ದೇವೆಯೇ? ಎಂದು ಈ ಘಟನೆ ಚರ್ಚೆಗೆ ಕಾರಣವಾಗಿದೆ.

Viral Video: ವಾಹನ ಸಂಚರಿಸುತ್ತಿದ್ದಂತೆ ಬಿರುಕು ಬಿಟ್ಟು ರಸ್ತೆಯಿಂದ ಜಿನುಗಿತು ನೀರು! ಮ್ಯಾಜಿಕ್‌ ಅಲ್ಲ, ಕಳಪೆ ಕಾಮಗಾರಿಯ ಎಫೆಕ್ಟ್‌

ಸಾಮಾನ್ಯ ಸವಾರರು ವ್ಲಾಗ್‌ ಮಾಡಲು ಹಾಗೂ ಕಂಟೆಂಟ್ ಕ್ರಿಯೇಟ್ ಮಾಡಲು ಕ್ಯಾಮೆರಾ ಬಳಸಿದರೆ, ಮಹಿಳೆಯರು ರಕ್ಷಣೆಗಾಗಿ ಕ್ಯಾಮೆರಾ ಬಳಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು ಇಂತಹ ಘಟನೆಗಳು ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ. ಪ್ರಪಂಚದ ವಿವಿಧ ಭಾಗಗಳಲ್ಲಿ ಮಹಿಳೆಯರ ದೌರ್ಜನ್ಯ ಹೆಚ್ಚಾಗಿದೆ ಎಂದು ಕೆಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.