Viral Video: ಬೆಕ್ಕು ಮತ್ತು ಹಾವಿನ ನಡುವೆ ಬಿಗ್ ಫೈಟ್; ಕಹಾನಿ ಮೇ ಟ್ವಿಸ್ಟ್ ನೋಡಿ ಶಾಕ್ ಆದ ನೆಟ್ಟಿಗರು!
ಬೆಕ್ಕು ಮತ್ತು ಹಾವಿನ ನಡುವಿನ ಕಾದಾಟದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ. ನೆಟ್ಟಿಗರ ಕುತೂಹಲವನ್ನು ಕೆರಳಿಸಿದ ಈ ಕಾದಾಟ ಕೊನೆಗೆ ಅನಿರೀಕ್ಷಿತ ತಿರುವು ಪಡೆದುಕೊಂಡು ಎಲ್ಲರನ್ನೂ ಬೆರಗಾಗುವಂತೆ ಮಾಡಿದೆ.ಅಷ್ಟಕ್ಕೂ ಆಗಿದ್ದೇನು ಎಂಬ ಕುತೂಹಲ ನಿಮಗೂ ಇದೆಯಾ...? ಇದರ ವಿಡಿಯೊ ಇಲ್ಲಿದೆ ನೋಡಿ.


ಸೋಶಿಯಲ್ ಮಿಡಿಯಾದಲ್ಲಿ ಆಗಾಗ ಪ್ರಾಣಿಗಳ ನಡುವಿನ ಕಾದಾಟದ ವಿಡಿಯೊ ವೈರಲ್ ಆಗುತ್ತಿರುತ್ತದೆ. ಇತ್ತೀಚೆಗಷ್ಟೇ ಹಾವು ಹಾಗೂ ನಾಯಿ ನಡುವಿನ ಭೀಕರ ಹೋರಾಟದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಬೆಕ್ಕು ಮತ್ತು ಹಾವಿನ ನಡುವೆ ಕಾದಾಟದ ವಿಡಿಯೊ ಕಾಣಿಸಿಕೊಂಡಿದ್ದು ಇದು ಕೊನೆಗೆ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ವಿಡಿಯೊದಲ್ಲಿ ಕಾಂಪೌಂಡ್ ಒಳಗೆ ಹಾವು ತೆವಳುತ್ತಾ ಬರುವುದನ್ನು ನೋಡಿದ ಬೆಕ್ಕು ಕುತೂಹಲದಿಂದ, ಹಾವನ್ನು ಹಿಂಬಾಲಿಸಿದೆ ಆದರೆ, ಗೋಡೆಯ ಕಡೆಗೆ ತೆವಳುತ್ತಿದ್ದ ಹಾವು ಇದ್ದಕ್ಕಿದ್ದಂತೆ ತನ್ನ ದಿಕ್ಕನ್ನು ಬದಲಾಯಿಸಿ ಬೆಕ್ಕಿನ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಿದೆ. ಹಾವು ಬೆಕ್ಕಿನ ಜೊತೆ ಸೆಣಸಾಡುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಹಾವು ಬೆಕ್ಕಿಗೆ ಹೆದರಿ ಜೀವ ರಕ್ಷಣೆಗಾಗಿ ಹೋರಾಡಿದೆ. ಆಗ ಬೆಕ್ಕು ಪ್ರತಿದಾಳಿ ನಡೆಸುತ್ತಿದ್ದಂತೆ ಜಗಳದ ಕಾವು ಹೆಚ್ಚಾಗಿದೆ. ಸ್ವಲ್ಪ ಸಮಯದವರೆಗೆ, ಈ ಹೋರಾಟ ತೀವ್ರ ಗತಿಯಲ್ಲಿ ನಡೆದಿತ್ತು. ಆದರೆ ಈ ಘಟನೆಯು ಅನಿರೀಕ್ಷಿತ ತಿರುವು ಪಡೆದುಕೊಂಡಿದೆ. ಬೆಕ್ಕು ಮತ್ತು ಹಾವು ಎರಡೂ ಇದ್ದಕ್ಕಿದ್ದಂತೆ ಜಗಳವಾಡುವುದನ್ನು ನಿಲ್ಲಿಸಿ ಪರಸ್ಪರ ಪಕ್ಕದಲ್ಲಿ ಕುಳಿತು ವಿಶ್ರಾಂತಿ ಪಡೆದಿವೆ. ಕೊನೆಗೂ ಈ ಉಗ್ರವಾದ ಹೋರಾಟದ ವಿಡಿಯೊ ಶಾಂತ ರೀತಿಯಲ್ಲಿ ಕೊನೆಗೊಂಡಿದೆ. ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಹಾವು ಬೆಕ್ಕಿನ ನಡುವಿನ ಕಾದಾಟದ ವಿಡಿಯೊ ಇಲ್ಲಿದೆ ನೋಡಿ
ಈ ಆಶ್ಚರ್ಯಕರ ಅಂತ್ಯವು ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ. ನೆಟ್ಟಿಗರು ವಿಡಿಯೊದ ಭಾಗ 2 ಅನ್ನು ಪೋಸ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ. ಸೋಶಿಯಲ್ ಮೀಡಿಯಾ ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ಸ್ಮೈಲ್ ಎಮೋಜಿಯನ್ನು ಹಂಚಿಕೊಂಡಿದ್ದಾರೆ. ಸ್ವಲ್ಪ ವಿಶ್ರಾಂತಿಯ ನಂತರ ಹೋರಾಟವನ್ನು ಮುಂದುವರಿಸಬಹುದು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಲೈಬ್ರೇರಿಯಲ್ಲಿ ಪುಸ್ತಕಗಳ ಮೇಲೆ ಮಲಗಿದ್ದ 8 ಅಡಿ ಉದ್ದದ ಹಾವು; ಭಯಗೊಂಡ ವಿದ್ಯಾರ್ಥಿಗಳು ಹೀಗ್ ಮಾಡೋದಾ?
ಹಾವನ್ನು ಎರಡು ತುಂಡು ಮಾಡಿದ ರಾಟ್‍ವೀಲರ್
ಸೋಶಿಯಲ್ ಮೀಡಿಯಾದಲ್ಲಿ ಹಾವು ಮತ್ತು ಇತರ ಪ್ರಾಣಿಗಳ ನಡುವೆ ಕಾಳಗ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಇತ್ತೀಚೆಗಷ್ಟೇ ಮನೆಯ ಹಿತ್ತಲಿಗೆ ಬಂದ ನಾಗರಹಾವಿನ ಮೇಲೆ ರಾಟ್‍ವೀಲರ್ ಭೀಕರವಾಗಿ ದಾಳಿ ಮಾಡಿ ಅದನ್ನು ಎರಡು ತುಂಡಾಗಿ ಕತ್ತರಿಸಿ ಹಾಕಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಾಯಿ ಮಾಲೀಕ ಈ ಘಟನೆಯನ್ನು ವಿಡಿಯೊ ಮಾಡಿದ್ದು, ನಂತರ ಅದನ್ನು ತನ್ನ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೊ ನೋಡಿ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಧೈರ್ಯಶಾಲಿಯಾದ ನಾಯಿಯು ಮನೆಯ ಸದಸ್ಯರ ಸುರಕ್ಷತೆಗಾಗಿ ಮಾಡಿದ ಕಾರ್ಯಕ್ಕಾಗಿ ಅದನ್ನು ಹೊಗಳಿದರೆ, ಇತರರು ನಾಗರಹಾವಿನ ಜೊತೆ ನಾಯಿ ನಡೆದುಕೊಂಡ ಕ್ರೂರ ವರ್ತನೆಯನ್ನು ಖಂಡಿಸಿದ್ದಾರೆ ಮತ್ತು ಅದನ್ನು ತಡೆಯದ ಮಾಲೀಕನ ವಿರುದ್ಧ ಕಿಡಿಕಾರಿದ್ದಾರೆ.