ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೆರಿಕಕ್ಕೆ ಕೇವಲ ಉದ್ಯೋಗಕ್ಕಾಗಿ ಬರಬೇಡಿ: ಭಾರತೀಯ ಯುವಜನತೆಗೆ ಸಲಹೆ ನೀಡಿದ ದಂಪತಿ

Viral News: ಭಾರತೀಯ ಯುವಕರಿಗೆ ಅಮೆರಿಕದಲ್ಲಿ ನೆಲೆಸಿರುವ ದಂಪತಿ ಮುಖ್ಯವಾದ ಸಲಹೆಯೊಂದನ್ನು ನೀಡಿದ್ದಾರೆ. ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ ಇಲ್ಲಿಗೆ ಬರಬೇಡಿ, ಈಗ ಭಾರತದಲ್ಲೇ ಉತ್ತಮ ಅವಕಾಶಗಳಿದೆ. ಯುವ ಭಾರತೀಯರು ವಿದೇಶಕ್ಕೆ ಬರುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಉದ್ಯೋಗಕ್ಕಾಗಿ ಅಮೆರಿಕ ತೆರಳುವ ಭಾರತೀಯರಿಗೆ ಎಚ್ಚರಿಕೆ ನೀಡಿದ ದಂಪತಿ

ಉದ್ಯೋಗಕ್ಕಾಗಿ ಅಮೆರಿಕ ತೆರಳುವ ಭಾರತೀಯರಿಗೆ ಎಚ್ಚರಿಕೆ ನೀಡಿದ ದಂಪತಿ -

Profile
Pushpa Kumari Aug 20, 2026 4:17 PM

ವಾಷಿಂಗ್ಟನ್, ಆ. 20: ಇಂದು ಉದ್ಯೋಗದ ಕನಸು ಕಟ್ಟಿಕೊಂಡು ಅನೇಕರು ವಿದೇಶದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಜೀವನ ಶೈಲಿ, ಪ್ರತಿಷ್ಟಿತ ಕಂಪನಿ, ಹೆಚ್ಚಿನ ಪ್ಯಾಕೇಜ್ ಹೀಗೆ ನಾನಾ ಕಾರಣದಿಂದ ವಿದೇಶದಲ್ಲಿ ನೆಲೆಸಿದ್ದಾರೆ. ಈ ನಡುವೆ ಭಾರತೀಯ ಯುವಜನತೆಗೆ ಅಮೆರಿಕದಲ್ಲಿ ನೆಲೆಸಿರುವ ದಂಪತಿ ಮುಖ್ಯ ಸಲಹೆಯೊಂದನ್ನು ನೀಡಿದ್ದಾರೆ. ಉದ್ಯೋಗಕ್ಕಾಗಿ, ಶಿಕ್ಷಣಕ್ಕಾಗಿ ಇಲ್ಲಿಗೆ ಬರಬೇಡಿ, ಈಗ ಭಾರತದಲ್ಲೇ ಉತ್ತಮ ಅವಕಾಶಗಳಿದೆ ಎಂದು ಅಭಿಪ್ರಾಯ (Viral News) ಹಂಚಿಕೊಂಡಿದ್ದಾರೆ.

ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ದಂಪತಿ ಯುವ ಭಾರತೀಯರು ವಿದೇಶಕ್ಕೆ ಬರುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಅಂದಿದ್ದಾರೆ. "ನಾವು ಇಲ್ಲಿಗೆ ಬಂದಿದ್ದೇವೆ. ಏಕೆಂದರೆ, ಆ ಸಮಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯುವುದು ತುಂಬಾ ಕಷ್ಟವಾಗಿತ್ತು. ಉತ್ತಮ ಗುಣಮಟ್ಟದ ಜೀವನವನ್ನು ಹೊಂದುವುದು ತುಂಬಾ ಕಷ್ಟವಾಗಿತ್ತು. ಆದರೆ ಇಂದು ಭಾರತದಲ್ಲಿ ಬೇಕಾದಷ್ಟು ಪ್ರತಿಷ್ಠಿತ ಕಂಪನಿಗಳಿವೆ" ಎಂದು ಸಲಹೆ ನೀಡಿದ್ದಾರೆ.

ವಿಡಿಯೊ ನೋಡಿ:

ʼʼಅದರಲ್ಲೂ ಕುಟುಂಬ, ಸ್ನೇಹಿತರು ಹಾಗೂ ಮನೆ ತೊರೆದು ವಿದೇಶದಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭವಲ್ಲ. ನಾವು ವರ್ಷಗಳ ಕಾಲ ಇಲ್ಲಿದ್ದರೂ ಸಾರ್ಥಕ ಭಾವ ಮೂಡುವುದಿಲ್ಲ. ವಿದೇಶದಲ್ಲಿ ಹಣ ಮತ್ತು ವೃತ್ತಿ ಅವಕಾಶಗಳು ನಿರ್ಧಾರದ ಒಂದು ಭಾಗ ಮಾತ್ರ. ಆದರೆ ಕುಟುಂಬದಿಂದ ದೂರ ಕಳೆದ ವರ್ಷಗಳು ಮತ್ತು ಹೊಸ ಜೀವನವನ್ನು ನಿರ್ಮಿಸಲು ಬೇಕಾದ ಪ್ರಯತ್ನಗಳು ಕೂಡ ಮುಖ್ಯವಾಗುತ್ತದೆʼʼ ಎಂದಿದ್ದಾರೆ.

ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!

ʼʼಅದೇ ರೀತಿ ಭಾರತೀಯರಿಗೆ ಗ್ರೀನ್ ಕಾರ್ಡ್‌ ಪಡೆಯಲು ಹೆಚ್ಚು ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಚೀನಾದ ವಿದ್ಯಾರ್ಥಿಗಳು ವಿದೇಶಕ್ಕೆ ಬಂದು ಶಿಕ್ಷಣ ಪಡೆದು ಅವರ ದೇಶಕ್ಕೆ ಹೋಗಿ ಕೆಲಸ ಮಾಡುತ್ತಾರೆ. ಆದರೆ ಭಾರತೀಯರಲ್ಲಿ ಈ ಮನೋಭಾವ ಕಡಿಮೆʼʼ ಎಂದು ದಂಪತಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತ ಉತ್ತಮ ಆಯ್ಕೆ ಎಂದು ಅವರು ನಂಬಿದ್ದರೆ, ಈ ದಂಪತಿ ಅಮೆರಿಕದಲ್ಲಿ ವಾಸಿಸುವುದನ್ನು ಏಕೆ ಮುಂದುವರಿಸಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ.

ʼʼಇದಕ್ಕೆ ಉತ್ತರಿಸಿದ ದಂಪತಿ ವಿದೇಶದಲ್ಲಿ ಜೀವನವನ್ನು ಕಟ್ಟಿಕೊಂಡ ನಂತರ ಹಿಂದಿರುಗುವುದು ಕಷ್ಟ. ನಾವು ಈಗಾಗಲೇ ಇಲ್ಲಿದ್ದು ಹೊಸ ಜೀವನ ಕಟ್ಟಿಕೊಂಡಿದ್ದೇವೆ. ಈಗ ಮತ್ತೆ ಭಾರತಕ್ಕೆ ಮರಳುವುದು ಸವಾಲಿನ ಕೆಲಸ. ಆದರೆ ಇಂದಿನ ಪರಿಸ್ಥಿತಿಯಲ್ಲಿ ನಾನು ಭಾರತದಲ್ಲಿದ್ದರೆ ಖಂಡಿತ ಈ ನಿರ್ಧಾರ ಮಾಡುತ್ತಿರಲಿಲ್ಲʼʼ ಎಂದು ಹೇಳಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು, ʼʼನಿಮ್ಮ ಮಾತು ನಿಜ. ವೃತ್ತಿ, ಹಣಕ್ಕಿಂತ ಕುಟುಂಬದೊಂದಿಗೆ ಬದುಕುವ ಅಮೂಲ್ಯ ಕ್ಷಣಗಳು ಮುಖ್ಯʼʼ ಎಂದು ತಿಳಿಸಿದ್ದಾರೆ. ಮತ್ತೊಬ್ಬರು, "ನಮ್ಮ ಭಾರತವೇ ನಮಗೆ ಹೆಮ್ಮೆ" ಎಂದು ಹೇಳಿದ್ದಾರೆ.