ಬೆಟ್ಟದಲ್ಲೊಂದು ಎಲ್ಲೂ ಸಿಗದ ಉದ್ಯೋಗಾವಕಾಶ: ಪ್ರಕೃತಿಯ ಸೌಂದರ್ಯ ಸೆರೆಹಿಡಿದು ತಿಂಗಳಿಗೆ 8.5 ಲಕ್ಷ ರೂ. ಸಂಪಾದಿಸಿದ ಯುವಕ!
Viral News: ಚೀನಾದಲ್ಲಿ 23 ವರ್ಷದ ಯುವಕನೊಬ್ಬ ಕೆಲಸದ ಭಾಗವಾಗಿ ಪರ್ವತದ ಮೇಲೆ ವಾಸಿ ಸುತ್ತಾ, ಮೋಡಗಳು ಮತ್ತು ದೃಶ್ಯಾವಳಿಗಳನ್ನು ಚಿತ್ರೀಕರಿಸುತ್ತಾ ಒಂದು ತಿಂಗಳು ಕಳೆದಿದ್ದಾನೆ. ಪ್ರಕೃತಿ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ಮೂಲಕ ಈತ ಪ್ರಸಿದ್ಧಿ ಪಡೆದಿದ್ದಾನೆ.
ಇಂಟರ್ ನೆಟ್ ಚಿತ್ರ -
ಚೀನಾ,ಆ.20: ಇಂದು ಸೋಷಿಯಲ್ ಮೀಡಿಯಾ ಅನ್ನೋದು ಕೇವಲ ಫೇಮ್ ಗಿಟ್ಟಿಸಿಕೊಳ್ಳಲು ಮಾತ್ರವಲ್ಲ, ಹಣ ಸಂಪಾದಿ ಸಲು ಉತ್ತಮ ಅವಕಾಶವಾಗಿದೆ. ಹೀಗಾಗಿ ಪ್ರತಿಷ್ಠಿತ ಕಂಪನಿಯ ಕೆಲಸ ಬಿಟ್ಟು ರೀಲ್ಸ್, ಪ್ರಮೋಷನ್ ಎಂದು ಇದರಲ್ಲಿಯೇ ದುಡಿಯುವರು ಇದ್ದಾರೆ. ಇದೀಗ 23 ವರ್ಷದ ಯುವಕನೊಬ್ಬ ಬೆಟ್ಟದ ಮೇಲಿನ ಪ್ರಕೃತಿ ಸೌಂದರ್ಯ ಸೆರೆಹಿಡಿಯುತ್ತಾ ಒಂದು ತಿಂಗಳಿನಲ್ಲಿ ಬರೋಬ್ಬರಿ 8.5 ಲಕ್ಷ ರೂ. ಸಂಪಾದನೆ ಮಾಡಿ (Viral News) ಸುದ್ದಿಯಾಗಿದ್ದಾರೆ.
ಚೀನಾದಲ್ಲಿ 23 ವರ್ಷದ ಯುವಕನೊಬ್ಬ ಕೆಲಸದ ಭಾಗವಾಗಿ ಪರ್ವತದ ಮೇಲೆ ವಾಸಿಸುತ್ತಾ, ಮೋಡಗಳು ಮತ್ತು ದೃಶ್ಯಾ ವಳಿಗಳನ್ನು ಚಿತ್ರೀಕರಿಸುತ್ತಾ ಒಂದು ತಿಂಗಳು ಕಳೆದಿದ್ದಾನೆ. ಪ್ರಕೃತಿ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯುವ ಮೂಲಕ ಈತ ಪ್ರಸಿದ್ಧಿ ಪಡೆದಿದ್ದಾನೆ. ಹೆನಾನ್ ಪ್ರಾಂತ್ಯದ ಲಾವೊಜುನ್ ಪರ್ವತದ ಪ್ರದೇಶವನ್ನು ಸೆರೆಹಿಡಿಯಲು ಇಲ್ಲಿನ ಪ್ರವಾಸಿ ತಾಣವು "ಕ್ಲೌಡ್‌ಸ್ಕೇಪ್ ವೀಕ್ಷಕ"ವಾಗಿ ಕೆಲಸ ಮಾಡಲು ಮತ್ತು ಪರ್ವತದಿಂದ ದೈನಂದಿನ ವೀಡಿಯೊಗಳನ್ನು ಮಾಡಲು ಉದ್ಯೋಗಿಯನ್ನು ಹುಡುಕುತ್ತಿತ್ತು.
ಈ ಒಂದು ತಿಂಗಳ ಕೆಲಸಕ್ಕಾಗಿ 3,500ಕ್ಕೂ ಹೆಚ್ಚು ಜನರು ಅರ್ಜಿಯನ್ನು ಹಾಕಿದ್ದರು. ಇಲ್ಲಿ ನೇಮಕವಾದ ಉದ್ಯೋಗಿಯ ಮುಖ್ಯ ಕಾರ್ಯವೆಂದರೆ ಮೋಡಗಳು, ಪರ್ವತ ನೋಟಗಳು ಮತ್ತು ಬದಲಾಗುತ್ತಿರುವ ಹವಾಮಾನವನ್ನು ಚಿತ್ರೀಕರಿಸಿ ವೀಡಿಯೊಗಳನ್ನು ಪೋಸ್ಟ್ ಮಾಡುವುದು.
ಈ ಕೆಲಸಕ್ಕೆ ಆಯ್ಕೆಯಾದ ವ್ಯಕ್ತಿಯೇ ಹೆನಾನ್‌ನ 23 ವರ್ಷದ ವ್ಲಾಗರ್ ಲಿ ಸಿಚೆನ್ ಅವರು ಪರ್ವತದ "ನಂ. 001 ಕ್ಲೌಡ್‌ಸ್ಕೇಪ್ ವೀಕ್ಷಕ"ರಾಗಿದ್ದಾರೆ. ಇ-ಕಾಮರ್ಸ್ ಪದವೀಧರ ಹಾಗೂ ವ್ಲಾಗರ್ ಆಗಿ ಕೆಲಸ ಮಾಡುತ್ತಿದ್ದರು. ಇಲ್ಲಿ ಪ್ರತಿದಿನ ಬೆಳಿಗ್ಗೆ 5 ಗಂಟೆಗಿಂತ ಮುಂಚಿತವಾಗಿಯೇ ಎದ್ದು ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗೆ ವೀಡಿಯೊ ಚಿತ್ರೀಕರಣ ಮಾಡಬೇಕಿತ್ತು.
ಮೋಡಗಳು, ಮಂಜು, ಪರ್ವತಗಳು ಮತ್ತು ಬದಲಾಗುತ್ತಿರುವ ವಿಭಿನ್ನ ನೋಟಗಳನ್ನು ರೆಕಾರ್ಡ್ ಮಾಡುತ್ತಾ ಅವರು ದಿನವನ್ನು ಕಳೆದರು.ಹವಾಮಾನ ವೈಪರೀತ್ಯಗಳನ್ನು ಸೆರೆಹಿಡಿದು ವೀಡಿಯೊ ಎಡಿಟಿಂಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು. ಆದರೆ ಕೆಲಸದಲ್ಲಿ ಕೆಲವೊಂದು ಸವಾಲುಗಳು ಕೂಡ ಇತ್ತು.
ಕ್ಷಣಕ್ಷಣಕ್ಕೂ ಬದಲಾಗುವ ಪ್ರಕೃತಿಯ ವಾತಾವರಣ ಹಾಗೂ ನಿರೀಕ್ಷಿತ ಮೋಡಗಳು ಸಿಗುತ್ತಿರಲಿಲ್ಲ, ಕೆಲವೊಮ್ಮೆ ಮೋಡಗಳು ಬೇಗನೆ ಬದಲಾಗಬಹುದು, ಈ ಪರಿಸ್ಥಿತಿಗಳು ಯೋಜಿಸಿದ ರೀತಿಯ ದೃಶ್ಯಗಳನ್ನು ಸೆರೆಹಿಡಿಯಲು ಕಷ್ಟವಾಗುತ್ತಿದ್ದವು ಎಂದು ಆತ ಹೇಳಿಕೊಂಡಿದ್ದಾನೆ. ಲಾವೋಜುನ್ ಪರ್ವತವು ಮಧ್ಯ ಚೀನಾದ ಹೆನಾನ್ ಪ್ರಾಂತ್ಯದ ಲುವಾಂಚುವಾನ್ ಕೌಂಟಿಯಲ್ಲಿದೆ. ಇದು ಮೋಡಗಳ ನೋಟಗಳಿಗೆ ಹೆಸರುವಾಸಿಯಾಗಿದೆ.