ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಟ್ರಂಪ್ ಕಾರ್ಯಕ್ರಮದ ನಡುವೆ ಕ್ರೇನ್ ಆಪರೇಟರ್ ಭರ್ಜರಿ ನಿದ್ದೆ! ಫನ್ನಿ ವಿಡಿಯೊ ಇಲ್ಲಿದೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸ್ವಂತ ಖರ್ಚಿನಿಂದ ಶ್ವೇತಭವನದ ಹೊರಗಿನ ಉತ್ತರ ಹಾಗೂ ದಕ್ಷಿಣದ ಎರಡು ಹುಲ್ಲುಹಾಸಿನ ಮೇಲೆ ಸುಮಾರು 100 ಅಡಿ ಎತ್ತರವಿರುವ ಎರಡು ಬೃಹತ್ ಧ್ವಜಸ್ತಂಭಗಳನ್ನು ಸ್ಥಾಪಿಸಿದ್ದಾರೆ. ಈ ಧ್ವಜಸ್ತಂಭದ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿರುವಾಗ ಕ್ರೇನ್ ಆಪರೇಟರ್ ಒಬ್ಬ ತನ್ನ ಕ್ರೇನ್‍ನೊಳಗೆ ನಿದ್ದೆ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ಟ್ರಂಪ್ ಧ್ವಜಸ್ತಂಭ ಉದ್ಘಾಟಿಸುತ್ತಿದ್ದರೆ; ಈತ ಮಾಡಿದ್ದೇ ಬೇರೆ!

Profile pavithra Jun 20, 2025 3:50 PM

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದ ಹೊರಗೆ ಎರಡು ಬೃಹತ್ ಧ್ವಜಸ್ತಂಭಗಳನ್ನು ಸ್ಥಾಪಿಸಿದ್ದಾರೆ. ಪ್ರತಿಯೊಂದೂ ಸುಮಾರು 100 ಅಡಿ ಎತ್ತರವಿದ್ದು, ಒಂದು ಉತ್ತರದ ಹುಲ್ಲುಹಾಸಿನ ಮೇಲೆ ಮತ್ತು ಇನ್ನೊಂದು ದಕ್ಷಿಣದ ಹುಲ್ಲುಹಾಸಿನ ಮೇಲೆ ಇದೆ. ಈ ಧ್ವಜಸ್ತಂಭಗಳ ವೆಚ್ಚವನ್ನು ಟ್ರಂಪ್ ತಾವೇ ಭರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ‌ ಈ ಧ್ವಜಸ್ತಂಭಗಳ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿರುವಾಗ ಕ್ರೇನ್ ಆಪರೇಟರ್ ಒಬ್ಬ ಕ್ರೇನ್‍ನೊಳಗೆ ನಿದ್ದೆ ಮಾಡಿದ್ದಾನೆ.ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಹಾಗೇ ನೆಟ್ಟಿಗರು ಇದನ್ನು ನೋಡಿ ನಕ್ಕಿದ್ದಾರೆ.

ಈ ಧ್ವಜಸ್ತಂಭಗಳ ಉದ್ಘಾಟನಾ ಸಮಯದಲ್ಲಿ ಹಾಜರಿದ್ದ ಟ್ರಂಪ್ ಕಾರ್ಮಿಕರೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಹಾಗೇ ಈ ಸಂದರ್ಭದಲ್ಲಿ ಕ್ರೇನ್ ಆಪರೇಟರ್ ಕಣ್ಣು ಮುಚ್ಚಿ ನಿದ್ರೆ ಮಾಡುತ್ತಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.ನೆಟ್ಟಿಗರು ಇದನ್ನು ಗಮನಿಸಿ ತಮಾಷೆ ಮಾಡಿದ್ದಾರೆ. ಒಬ್ಬ ನೆಟ್ಟಿಗರು, “ಆ ನಿದ್ರೆ 8 ಗಂಟೆಗಳ ನಿದ್ರೆಗಿಂತ ಉತ್ತಮ ಶಕ್ತಿಯನ್ನು ನೀಡುತ್ತದೆ” ಎಂದು ಕಾಮೆಂಟ್‌ ಮಾಡಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...



ಈ ಸುದ್ದಿಯನ್ನೂ ಓದಿ:Viral News: ವೃತ್ತಿ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಕೊಂಡ ಮಾಡೆಲ್‍; ಈಕೆಯ ಧೈರ್ಯ ನೋಡಿ ನೆಟ್ಟಿಗರು ಫುಲ್‌ ಫಿದಾ

"ಈ ಭವ್ಯವಾದ ಸ್ಥಳದಿಂದ ಯಾವಾಗಲೂ ಕಾಣೆಯಾಗಿದ್ದ ಒಂದು ಉಡುಗೊರೆ ನನ್ನಿಂದ ಬಂದಿದೆ. ಮುಂಬರುವ ಹಲವು ವರ್ಷಗಳ ಕಾಲ ಇವು ಶ್ವೇತಭವನದ ಎರಡೂ ಬದಿಗಳಲ್ಲಿ ಹೆಮ್ಮೆಯಿಂದ ನಿಲ್ಲುತ್ತವೆ ಎಂದು ಆಶಿಸುತ್ತೇನೆ!" ಎಂದು ಟ್ರಂಪ್ ಸೋಶಿಯಲ್ ಮೀಡಿಯಾದ ಪೋಸ್ಟ್‌ನಲ್ಲಿ ಬರೆದಿದ್ದಾರೆ.